ಹಾವೇರಿ:
ಜನಸಂಖ್ಯಾ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ…
ಶಿಗ್ಗಾಂವ ಪಟ್ಟಣದಲ್ಲಿ ರಾಷ್ಟ್ರೀಯ ಕುಟುಂಬ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ತಾಲೂಕ ಆರೋಗ್ಯ ಇಲಾಖೆಯಿಂದ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಜಾಗೃತ ಮುಡಿಸುವ ನಿಟ್ಟಿನಲ್ಲಿ ಈ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ತಾಲೂಕ ಆರೋಗ್ಯ ಇಲಾಖೆಯ ಕಾರ್ಯಾಲಯದಿಂದ ಪ್ರಾರಂಭವಾದ ಜಾಥಾ ಪಟ್ಟಣದ ಹೊಸ್ ಬಸ್ ನಿಲ್ದಾಣದ ವರೆಗೆ ಸಂಚರಿಸಿತು.
ಈ ಸಂದರ್ಭದಲ್ಲಿ
ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ ಹನಮಂತಪ್ಪ ಪಿ ಎಚ್,
ತಾಲೂಕ ಆರೋಗ್ಯಾಧಿಕಾರಿ ಡಾ ಸತೀಶ, ಶ್ರಿಕಾಂತ ಸರ್ಜಾಪೂರ,ಆರ್ ಬಿ ಎಸ್ ಕೆಯ ಡಾ ಗೌಬು ನಾಯಕ, ಡಾ ಸುರೇಶ ಪೂಜಾರ,ಡಾ.ನೇಮಾವತಿ, ಪ್ರವೀಣ ಹಳ್ಳಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ-ಮಂಜುನಾಥ ಗೌಡ ಪಾಟೀಲ್