ಕಲಬುರಗಿ:ಕರ್ನಾಟಕ ರಾಜ್ಯದಲ್ಲಿ ಸರಕಾರಿ ಪ್ರೌಢಶಾಲೆಗಳಲ್ಲಿ ಹಾಗೂ ವಸತಿ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಸ್ವಯಂ ರಕ್ಷಣೆ ಸಲುವಾಗಿ ಅಂದಿನ ಸರಕಾರ ಕರಾಟೆ ಶಿಕ್ಷಕರ ಅನುದಾನ ಬಿಡುಗಡೆ ಮಾಡಿತ್ತು ಇದರಿಂದ ಲಕ್ಷಾಂತರ ಹೆಣ್ಣು ಮಕ್ಕಳು ಪ್ರಯೋಜನ ಪಡೆದುಕೊಂಡಿದ್ದಾರೆ ಆದರೆ ಇತ್ತೀಚಿನ ಕಾಂಗ್ರೆಸ್ ಸರ್ಕಾರ ಕರಾಟೆ ಶಿಕ್ಷಕರ ಅನುದಾನ ಬಿಡುಗಡೆ ಮಾಡದೆ ಕರಾಟೆ ಶಿಕ್ಷಕರನ್ನು ಕಡೆಗಣಿಸಿದ ಕಾಂಗ್ರೆಸ್ ಸರ್ಕಾರಕ್ಕೆ ನನ್ನ ಧಿಕ್ಕಾರ ಎಂದು ಆಳಂದ ತಾಲೂಕಿನ ಜೇನ್ನ ಶಿಟೋರಿಯೋ ಕರಾಟೆ ಅಸೋಸಿಯೇಷನ ವಿಶೇಷ ಕರಾಟೆ ಪರಿಣಿತರು ಸೆನ್ಸಸೈ ಮಹೇಂದ್ರ ಕ್ಷೀರ ಸಾಗರ ಅವರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲದೆ ಆಳಂದ ತಾಲೂಕಿನಲ್ಲಿ ದೇವಂತಿಗಿ ಗ್ರಾಮದ ಶಾಲೆಗೆ ಹೋಗುವ 11 ವರ್ಷದ ಬಾಲಕಿಯನ್ನು ಆರೋಪಿಗಳು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಇಂಥ ಘಟನೆಗಳು ಮರುಕಳಿಸಬಾರದು ಅಂದರೆ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಕರಾಟೆ ಸ್ವಯಂ ರಕ್ಷಣೆ ಕಲೆ ಪ್ರಾಥಮಿಕ ಶಾಲೆಯಿಂದಲೇ ಸರ್ಕಾರ ಕಡ್ಡಾಯಗೊಳಿಸಬೇಕು ಇದರಿಂದ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಅನುಕೂಲಕರವಾಗಲಿದೆ ಅದೇ ರೀತಿಯಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಗಳಿಗೆ ಸರ್ಕಾರ ಆದಷ್ಟು ಬೇಗ ಬಂಧಿಸಿ ಕಠಿಣ ಶಿಕ್ಷೆಗೆ ಗುರುಪಡಿಸಬೇಕು ಬಾಲಕಿಯ ಕುಟುಂಬಕ್ಕೆ ಪರಿಹಾರವನ್ನು ನೀಡಬೇಕು ಎಂದು ಆಳಂದ ತಾಲೂಕಿನ ಜೇನ್ನ ಶಿಟೋರಿಯೋ ಕರಾಟೆ ಅಸೋಸಿಯೇಷನ್ ವಿಶೇಷ ಕರಾಟೆ ಪರಿಣಿತರು ಸೇನಸೈ ಮಹೇಂದ್ರ ಕ್ಷಿರಸಾಗರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.