ಕಲ್ಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ದೇವಂತಿಗಿ ಗ್ರಾಮದ 11 ವರ್ಷದ ಶಾಲೆಗೆ ಹೋಗುವ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪಿಗಳನ್ನು ಬಂಧಿಸಿ ಅವರನ್ನು ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ಈ ರೀತಿಯ ಅಮಾನುಷವಾಗಿ ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಹಾಗೂ ಬಾಲಕಿಯ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಿ ಸೂಕ್ತ ಪರಿಹಾರ ಧನ ನಿಡಬೇಕು ಎಂದು ಕರ್ನಾಟಕ ಕುರುಬ ಸಂಘದ ಸಂಘದ ಯುವ ಘಟಕದ ರಾಜ್ಯಾಧ್ಯಕ್ಷರು ಭಗವಂತ ರಾಯ ಗೌಡ ಅಂಕಲಗಾ ಇವರ ಸಮ್ಮುಖದಲ್ಲಿ ಕರ್ನಾಟಕ ಪ್ರದೇಶ ಕುರುಬ ಸಂಘದ ಜಿಲ್ಲಾಧ್ಯಕ್ಷರು ಗುರುನಾಥ್ ಪೂಜಾರಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು ಈ ಸಂದರ್ಭದಲ್ಲಿ ಧರ್ಮರಾಜ್ ಹೇರೂರು ಹಾಗೂ ಸಂತೋಷ್ ಬಿ ಗುಡೂರ್ ವಕೀಲರು ಮತ್ತು ಪರಮೇಶ್ ಆಲಗೂಡ್ ಶರಣು ಬೇಲೂರು ಬಂಗಾರಪ್ಪ ಕೊಳಕೂರು ಪ್ರಕಾಶ್ ಕುರನಹಳ್ಳಿ ನಾಗೇಶ್ ಮುಚ್ಕೇಡ್ ಹಾಗೂ ಎಲ್ಲಾ ಕನ್ನಡಪರ ಸಂಘಟನೆಯ ಹೋರಾಟಗಾರರು ಭಾಗವಹಿಸಿದ್ದರು.
