ರಾಜ್ಯ ಸರ್ಕಾರ ಚಾಮುಂಡಿ ಬೆಟ್ಟದ ಅಭಿವೃದ್ಧಿಗಾಗಿ ಪ್ರಾಧಿಕಾರ ಈ ೨೦೨೩ ರ ಆಯವ್ಯಯದಲ್ಲಿ ಘೋಷಣೆ ಮಾಡಿದ್ದು ಸ್ವಾಗತಾರ್ಹ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ನವರಿಗೆ ಈ ಮೂಲಕ ಜನತೆ ಆಭಾರಿಯಾಗಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ಅದರದ್ದೇ ಆದ ಇತಿಹಾಸ ಇದೆ ಅಭಿವೃದ್ದಿ ಎಂದರೆ ಬರೀ ಕಾಂಕ್ರಿಂಟ್ ಇಂದ ಕೂಡಿದ್ದಲ್ಲ ಅದು ಇತಿಹಾಸ ಉಳಿಸಿಕೊಂಡು ಜನಪರವಾಗಿ ಧಾರ್ಮಿಕ ಭಾವನೆಗೆ ಧಕ್ಕೆ ಆಗದ ರೀತಿ ಇರಬೇಕು ಇಂತಹ ಕಾಳಜಿ ಉಳ್ಳವರು ಇತಿಹಾಸ ಅರಿತವರು ಮೈಸೂರಿನ ಯದುವಂಶದ ಬಗ್ಗೆ ಕಾಳಜಿ ಉಳ್ಳ ಪ್ರೊ.ನಂಜರಾಜ ಅರಸು ಅವರನ್ನು ಈ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡುವುದು ಸೂಕ್ತ ಎಂದು ಬಹುತೇಕರ ಅಭಿಪ್ರಾಯವಾಗಿದ್ದು ಈ ಮನವಿಯನ್ನು ಮುಖ್ಯಮಂತ್ರಿಗಳು ಪರಿಗಣಿಸಬೇಕೆಂದು ಮೈಸೂರಿನಲ್ಲಿ ‘ಕನ್ನಡ ಕ್ರಾಂತಿದಳ’ ಅಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ .
