ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಲೆಕ್ಕ ಸಹಾಯಕ ರಾಗಿ ಕೆಲಸ ಮಾಡುತ್ತಿದ್ದ ಚೇತನ್ ಕುಮಾರ್ ರವರಿಗೆ ದಿನಾಂಕ 17.06.2023 ಲೊಕ್ಕನಹಳ್ಳಿ ರೈತ ಸಂಪರ್ಕ ಕೇಂದ್ರಕ್ಕೆ ಸಂಬಂಧಿಸಿದ ಲೆಕ್ಕ ಸಹಾಯಕರ ಹಣಕಾಸಿನ ವ್ಯವಹಾರಗಳನ್ನು ಪೂರ್ಣಗೊಳಿಸಿ ದಿನಾಂಕ 19-06.2023 ರಂದು ಬದಲಾಯಿಸಿರುವ ರೈತ ಸಂಪರ್ಕ ಕೇಂದ್ರ ವಾದ ರಾಮಾಪುರ ರೈತ ಸಂಪರ್ಕ ಕೇಂದ್ರಕ್ಕೆ ವರ್ಗಾವಣೆ ಆಗಲು ಆದೇಶ ಹೊರಡಿಸಿದ್ದರು,ದಿನಾಂಕ 20.07.2023 ಒಂದು ತಿಂಗಳು ಹೆಚ್ಚಿನ ಸಮಯ ತೆಗೆದುಕೊಂಡರೂ ಸಹ ರಾಮಪುರಕ್ಕೆ ವರ್ಗಾವಣೆಯಾಗಿಲ್ಲ ಅಂದರೆ ರೈತ ಸಂಪರ್ಕ ಕೇಂದ್ರದ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳಿಗೆ ಬೆಲೆನೇ ಇಲ್ಲವೇ ಎಂಬ ಯಕ್ಷ ಪ್ರಶ್ನೆಯಾಗಿದೆ ಎಂದು ಆರ್ ಟಿ ಐ ಕಾರ್ಯಕರ್ತ ಅಪ್ಪಾಜಿ ತಮ್ಮ ಹೇಳಿಕೆಯಲ್ಲಿ ಹೇಳಿದ್ದಾರೆ ಫೋನ್ ಮೂಲಕ ಹಿರಿಯ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಇನ್ನು ಎಷ್ಟು ದಿನದೊಳಗೆ ಲೊಕ್ಕನಹಳ್ಳಿ ರೈತ ಸಂಪರ್ಕ ಕೇಂದ್ರದ ಲೆಕ್ಕ ಸಹಾಯಕರು ರಾಮಪುರಕ್ಕೆ ವರ್ಗಾವಣೆಯಾಗುತ್ತಾರೆಯೇ?ಎಂದು ಆರ್‌ಟಿಐ ಕಾರ್ಯಕರ್ತರಾದ ಅಪ್ಪಾಜಿಯವರ ಪ್ರಶ್ನೆಯಾಗಿದೆ. ಇದಕ್ಕೆ ಮಾನ್ಯ ಜಂಟಿ ಕೃಷಿ ನಿರ್ದೇಶಕರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಾಗಿದೆ. ಹಿರಿಯ ಅಧಿಕಾರಿಗಳ ಮಾತು ಕೇಳದ ಚೇತನ್ ಕುಮಾರ್ ಲೊಕ್ಕನಹಳ್ಳಿ ರೈತರ ಸಂಪರ್ಕ ಕೇಂದ್ರ ಹಾಗೂ ಶ್ರೀ ಎಮ್ ಪ್ರಸಾದ್ ರಾಮಪುರ ರೈತ ಸಂಪರ್ಕ ಕೇಂದ್ರ ಇವರಿಬ್ಬರನ್ನು ಕೂಡಲೇ ಕೆಲಸದಿಂದ ವಜಾ ಮಾಡುತ್ತಾರ ಅಥವಾ ಶಿಸ್ತುಕ್ರಮ ತೆಗೆದುಕೊಳ್ಳುತ್ತಾರಾ ಕಾದು ನೋಡಬೇಕಾಗಿದೆ.
ವರದಿ-ಉಸ್ಮಾನ್ ಖಾನ್



















