ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ದಿಡಗೂರಿನಲ್ಲಿ ಶ್ರೀ ಸಿದ್ದ ಮುಪ್ಪಿನಾರ್ಯ ಆಶ್ರಮದ ಶ್ರೀ ಪಾಂಡುರಂಗಾನಂದ ಸ್ವಾಮಿಯವರು ದಿನಾಂಕ 25-6-2023ರ ಭಾನುವಾರದಂದು ಶಿವೈಕ್ಯರಾದ ಪ್ರಯುಕ್ತ ಶ್ರೀಗಳ ಪುಣ್ಯರಾಧನಾ ಕಾರ್ಯಕ್ರಮವನ್ನು ಇಂದು 21-7-2023 ಶುಕ್ರವಾರ ಬೆಳಗ್ಗೆ 10 ಗಂಟೆಗೆ ದಿಡಗೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಪ್ರಾಸ್ತಾವಿಕ ನುಡಿಯಲ್ಲಿ ಎಂ.ಬಿ ಹನುಮಂತಪ್ಪ ಅವರು ಶ್ರೀ ಪಾಂಡುರಂಗನಾಂದ ಸ್ವಾಮಿಯವರು ಹೊನ್ನಾಳಿಯ ಹನುಮಂತಪ್ಪ, ರುಕ್ಮಿಣಿ ಬಾಯಿ,ಅವರ ಉದರದಲ್ಲಿ ಜನಿಸಿದವರು,ವೃತ್ತಿಯಲ್ಲಿ ವೈದ್ಯರಾಗಿದ್ದವರು ಹಲವಾರು ಗ್ರಾಮಗಳಿಗೆ ವೈದ್ಯಕೀಯ ವೃತ್ತಿಯನ್ನು ಮಾಡುತ್ತಾ ಬಡವರಿಗೆ ದೀನದಲಿತರಿಗೆ ಉಚಿತವಾಗಿ ಸೇವೆಯನ್ನು ಮಾಡುತ್ತಾ ನಮ್ಮ ಗ್ರಾಮದಲ್ಲಿ ಇದ್ದರು ತದನಂತರ ಇವರು ಶ್ರೀ ಸಿದ್ಧಾರೂಢ ಪರಂಪರೆಗೆ ಒಂದುಗೂಡಿ ಸನ್ಯಾಸತ್ವವನ್ನು ಸ್ವೀಕರಿಸಿ ಶ್ರೀ ದಿಡಗೂರಿನ ಮುಪ್ಪಿನಾರ್ಯ ಆಶ್ರಮದಲ್ಲಿ ನೆಲೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದಂತ ಶ್ರೀ ಶ್ರೀ ಡಾ. ಒಡೆಯರ್ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹಿರೇಕಲ್ ಮಠ ಹೊನ್ನಾಳಿ
ಪುಣ್ಯಾರಾಧನೆ ಎಂದರೆ ಬದುಕಿನ ಉದ್ದಕ್ಕೂ ಪುಣ್ಯದಂತ ಕೆಲಸಗಳನ್ನು ಮಾಡಿದಂತ ಮಹಾತ್ಮರಿಗೆ ಮತ್ತು ಸಾಧಕರಿಗೆ ಮತ್ತು ಸಾರ್ಥಕ ಬದುಕು ಕಟ್ಟಿಕೊಂಡ ಸಾಧಕರಿಗೆ ಮಾಡುವಂತಹ ಸ್ಮರಣೆ
ಹಾಗೆ ಮನುಜರಾದ ನಾವು ಯಾವುದೇ ಪುಣ್ಯ ಕೆಲಸಗಳಿಗೆ ಸಹಾಯ ಮಾಡುವುದು ಸತ್ಕಾರ್ಯಗಳನ್ನು ಮಾಡುವುದು ಈ ಜನ್ಮದಲ್ಲಿ ಸಾರ್ಥಕವಾದ ಬದುಕು ಮನುಜರಾದ ನಾವು ಹೂವನ್ನು ನಾವು ಮುಡಿಗೇರಿಸಿದರೆ ಮತ್ತು ದೇವರ ಪೂಜೆಗೆ ಬಳಸಿದರೆ ಅದರ ಮೋಕ್ಷ ಅದನ್ನು ನಾವು ಹೊಸಕಿ ಹಾಕಿದರೆ ಅದಕ್ಕೆ ಮತ್ತು ಹೂವಿಗೆ ಸಾರ್ಥಕತೆ ಇರುವುದಿಲ್ಲ ಹಾಗೆ ಹರಿಯುವ ನೀರನ್ನು ಶುಭ್ರವಾಗಿ ನಾವು ಸೇವಿಸಬೇಕು ಅದೇ ನೀರನ್ನು ಮಲಿನ ಮಾಡಿದರೆ ಕುಡಿಯಲು ಯೋಗ್ಯವಲ್ಲ ಅದೇ ರೀತಿ ನಮ್ಮ ಮನುಷ್ಯ ಜನ್ಮವೂ ಪರೋಪಕಾರ ಧರ್ಮದ ಕಾರ್ಯ ನ್ಯಾಯಾನೀತಿ ಕೂಡಿರಬೇಕು ಎಂದು ಹೇಳಿದರು
ಶ್ರೀ ಶ್ರೀ ಬಸವರಾಜ ದೇಶಿ ಕೇಂದ್ರ ಮಹಾಸ್ವಾಮಿಗಳು ಐರಣಿ ಹೊಳೆಮಠ ಇವರು ಮಾತನಾಡಿ ಮಹಾತ್ಮರಿಗೆ ಮಾಡುವ ಆರಾಧನೆ ಪುಣ್ಯಾರಾಧನೆ ಅದೇ ಮನುಷ್ಯರಿಗೆ ಮಾಡುವ ಕಾರ್ಯ ತಿಥಿ ಎನಿಸಿಕೊಳ್ಳುತ್ತದೆ ಅರಿವಿನ ಜ್ಯೋತಿ ದಯವೇ ಧರ್ಮದ ಮೂಲ ದಾನ ಧರ್ಮ ಮಾಡಿ ಸಮಾಜದಲ್ಲಿ ದೇವರು ಕೊಟ್ಟಾಗ ದಾನಮಾಡು ಹಣ ಇದ್ದಾಗ ದಾನ ಮಾಡು ನೆನೆ ಇದ್ದಾಗ ಸೇವೆ ಮಾಡು, ಪಂಚಭೂತಗಳನ್ನು ನಾವು ಮನುಷ್ಯರು ಗೊತ್ತಿದ್ದರೂ ಮಲಿನ ಮಾಡುತ್ತೇವೆ ಎಂದು ಆಶೀರ್ವಚನ ಹೇಳಿದರು
ಈ ಸಂದರ್ಭದಲ್ಲಿ ಹಲವಾರು ಮಠದ ಶ್ರೀಗಳು_
ಎಮ್.ಪಿ ರೇಣುಕಾಚಾರ್ಯ ಮಾಜಿ ಶಾಸಕರು,ಡಿ.ಜೆ ಶಾಂತನಗೌಡರು ಹಾಲಿ ಶಾಸಕರು,ದಿಡಗೂರಿನ ಸುತ್ತಮುತ್ತಲಿನ ಬಿದರ ಗಡ್ಡೆ ಮಾಸಡಿ, ಈರಗೊಂಡನಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ-ಪ್ರಭಾಕರ್ ಡಿ ಎಂ ಹೊನ್ನಾಳಿ