ಕಲಬುರ್ಗಿ:ಚಿತ್ತಾಪುರ ತಾಲೂಕಿನ ಸ್ಟೇಷನ್ ತಾಂಡಾದ ಬಾಲಕಿ ಕಡು ಬಡತನದಲ್ಲೇ ಅರಳಿದ ಹಳ್ಳಿ ಪ್ರತಿಭೆ ಕು|| ಲಕ್ಷ್ಮೀ ರಾಠೋಡ ತಾವು ಜೀವನದಲ್ಲಿ ಏನು ಸಾಧನೆ ಮಾಡಲು ಆಗುವುದಿಲ್ಲ ಎಂದು ಭಾವಿಸಿಕೊಂಡಿದ್ದರು.
ಪಟ್ಟಣದ ಸ್ಟೇಷನ್ ತಾಂಡಾದ ಬಾಲಕಿ ಒಬ್ಬಳು ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ ಬಾಲಕಿಗೆ ಗ್ರಾಮದ,
ಹಿರಿಯರು ಹಾಗೂ ಗ್ರಾಮಸ್ಥರು ಈ ಬಾಲಕಿಯ ಸಾಧನೆ ನೋಡಿ,ಬಡ ಕುಟುಂಬದಿಂದ ಬಂದ ನಮ್ಮ ತಾಂಡಾದ ಮಗಳು ಚಿನ್ನದ ಪದಕ ಪಡೆದು ನಮ್ಮ ಮನೆ ಮಗಳು ಮತ್ತು ಗ್ರಾಮಕ್ಕೆ ಮಾದರಿಯಾಗಿದ್ದಾಳೆ.
ಜೂನ್ 26ರಂದು ಮೈಸೂರಿನಲ್ಲಿ ನಡೆದ ಶೀಟೋ ರಿಯೋ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿತ್ತಾಪೂರ ಪಟ್ಟಣದ ಸ್ಟೇಷನ್ ತಾಂಡಾದ ಬಾಲಕಿ ಕಲ್ಯಾಣ ಜೇನ್ ಸಿಟೋರಿಯೋ ಕರಾಟೆ ಅಸೋಸಿಯೇಷನ್ ಕರ್ನಾಟಕದ ಅಧ್ಯಕ್ಷ ದಶರತ್ ದುಮ್ಮಾನಸೂರ್ ಅವರ ಗರಡಿಯಲ್ಲಿ ತರಬೇತಿ ಪಡೆದು ಕರಾಟೆ ಬ್ಲಾಕ್ ಬೆಲ್ಟ್ ಪಡೆದ ನಮ್ಮ ಗ್ರಾಮದ ಕು|| ಲಕ್ಷ್ಮಿ ರಾಠೋಡ ತಂದೆ ಪ್ರೇಮನಾಥ್ ರಾಠೋಡ ತಾಯಿ ಸೋನಾಬಾಯಿ ಇವರ ಸುಪುತ್ರಿ ಕರಾಟೆ ಕಲಿಯಲು ಭಾಂದವರಿಗೆ ಮತ್ತು ಸರ್ಕಾರಿ ಶಾಲೆಗಳಲ್ಲಿ ಬಾಲಕಿಯರಿಗೆ ತರಬೇತುದಾರರಾಗಿರುವ ಕರಾಟೆ ಸ್ಪರ್ಧೆಯಲ್ಲಿ ಎಲ್ಲರನ್ನು ಪರಾಭವಗೊಳಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದ ಕುಮೀತೆಯಲ್ಲಿ(ಫೈಟಿಂಗ್)ನಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದು ನಮ್ಮ ತಾಲೂಕ ಹಾಗೂ ಪಟ್ಟಣದ ಸ್ಟೇಷನ್ ತಾಂಡಾದ ಹೆಮ್ಮೆಯ ಮಗಳು ಕು|| ಲಕ್ಷ್ಮಿ ರಾಠೋಡ ಇವಳ ಸಾಧನೆ ನೋಡಿ ಇಡೀ ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದರು.
ಇವರ ಈ ಸಾಧನೆಗೆ ತರಬೇತಿದಾರರಾದ ಧಶರತ್ ದುಮ್ಮಾನಸೂರ್ ಅವರು ಮತ್ತು ಚಿತ್ತಾಪೂರ ಅಸೋಸಿಯೇಷನ್ ಗೌರವ ಅಧ್ಯಕ್ಷರಾದ ಭೀಮರಾಯ,ಮರೆಪ್ಪ ಮತ್ತು ತಾಲೂಕ ಅಧ್ಯಕ್ಷ ಮಹಾದೇವ ಹಾಗೂ ಗ್ರಾಮಸ್ಥರು ಸೇರಿ ಶಾಲು ಹೊದಿಸಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಾಧನೆಗೈದ ಬಾಲಕಿಯ ಸಹೋದರ ಅಶೋಕ ರಾಠೋಡ,ಆಕಾಶ,ಐತಿಹಾಸಿಕ ಕ್ಷೇತ್ರಗಳ ಸಂರಕ್ಷಕರಾದ ಭೀಮು ಹೋಳಿಕಟ್ಟಿ,ಅನಂತನಾಗ ದೇಶಪಾಂಡೆ,ಶಿವಶೇಖರ ನಾಟಿಕಾರ್,ವಿಶಾಲ್ ಕಡಬೂರ್,ಬಸವರಾಜ,ಚಂದ್ರಶೇಖರ, ಭೀಮಾಶಂಕರ್,ವಿನಾಯಕ,ಸುನೀಲ್,ಲಕ್ಷ್ಮಣ, ಅವಿನಾಶ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ