ರಬಕವಿ ಬನಹಟ್ಟಿ:ಹಿಂದೂ ಮುಸ್ಲಿಂ
ಬೇದಭಾವವಿಲ್ಲದೆ ಆಚರಿಸುತ್ತಿರುವ
ಏಕೈಕ ಹಬ್ಬವೆಂದರೆ ಅದು ಮೊಹರಂ ಹಬ್ಬ,
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಗೌಡರ ಮಸೂತಿ ಎಂದು ಖ್ಯಾತಿ ಪಡೆದ ಮದೀನಾ ಮಸ್ಜಿದ್ ನಲ್ಲಿ ಮೊಹರಂ ಹಬ್ಬದ ಮೊದಲನೇ ದಿನ ಅಲಾ ದೇವರ ಕೂಡಿಸುವ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ಜರುಗಿತು.
ಇದೇ ಸಂದರ್ಭದಲ್ಲಿ
ಪೆಂಡಾರಿ ಗಲ್ಲಿ ಹಾಗೂ ಅಶ್ರಫ್ ಮೊಹಲ್ಲ ಯುವಕರ ಸಂಯುಕ್ತ ಆಶ್ರಯದಲ್ಲಿ ಸತತ ಎರಡನೇ ವರ್ಷದಲ್ಲಿ ಕೂಡ ಅನ್ನ ಸಂತರ್ಪಣೆ ಕಾರ್ಯಕ್ರಮ ಕೂಡಾ ಅದ್ದೂರಿಯಾಗಿ ಜರುಗಿತು.
ಈ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಹಿಂದೂ ಮುಸ್ಲಿಂ ಬೇಧಭಾವವಿಲ್ಲದೆ ಮಹಿಳೆಯರು ಅನ್ನ ಸಂತರ್ಪಣೆ ಪ್ರಸಾದವನ್ನು
ಸ್ವೀಕರಿಸಿ ಅಲಾ ದೇವರ ಪ್ರೀತಿ ಮೆಚ್ಚುಗೆಯ ಪಾತ್ರರಾದರು.
ಈ ಕಾರ್ಯಕ್ರಮದ ಸಂದರ್ಭದಲ್ಲಿ ನಗರದ ಗಣ್ಯ ವ್ಯಕ್ತಿಗಳಾದ ಸಿದ್ದನಗೌಡ ಪಾಟೀಲ್
ಹಾಗೂ ನಗರದ ಉದ್ಯಮಿ ರಾಜಶೇಖರ್ ಬಿದರಿ, ಶ್ರೀಮತಿ ವಿಜಯಲಕ್ಷ್ಮಿ ಬಿದರಿರಾಜು ಗೌಡ ಪಾಟೀಲ್, ಚನ್ನಪ್ಪ ಬಾನಕಾರ್,ಬಾಬಗೌಡ ಪಾಟೀಲ್,ಕಿರಣ್ ಪಾಟೀಲ್,ಸಂತೋಷ್ ಗೋರ್ಪಡೆ ಬುಡನ್ ಜಮಾದಾರ್,
ಮೌಲಾಸಾಬ್ ಜಮಾದಾರ್,ಜಾರೇ ಸರ್,ಬಸಿರ್ ಪೆಂಡಾರಿ,ರಾಜು ಸೌದಾಗರ್,ಮಹಿಬೂಬ್ ಜಮಖಂಡಿ,
ನಮಾಜ್ ಮಿಯಾ ಬೆಂಡಾರಿ, ಶಾನೂರ್ ಜಮಖಂಡಿ, ಹುಸೇನ್ ಜಮಖಂಡಿ,ಶಾನೂರ್ ಫನಿಬಂಧ ,ಅಕ್ಬರ್ ಫನಿಬಂಧ ಇನ್ನಿತರರು ಉಪಸ್ಥಿತರಿದ್ದರು .
ವರದಿ:ಮಹಿಬೂಬ್ ಎಂ ಬಾರಿಗಡ್ಡಿ