ಯಾದಗಿರಿ:ಕರ್ನಾಟಕ ರೈತ ಸುರಕ್ಷಾ-ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆ ಅಧಿಸೂಚನೆ ಹೊರಡಿಸಲಾಗಿದ್ದು,ತೋಟಗಾರಿಕೆ ಇಲಾಖೆಯ ಬೆಳೆ ವಿಮೆ ಯೋಜನೆ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರೈತರಲ್ಲಿ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ಡಾ||ಸುಶೀಲ.ಬಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ, ತೋಟಗಾರಿಕೆ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ 2023- 24 ನೇ ಸಾಲಿನ ಮುಂಗಾರು ಹಂಗಾಮಿಗೆ ಅನುಮೋದಿಸಲಾದ ತೋಟಗಾರಿಕೆ ಬೆಳೆಗಳ ವಿಮಾ ಮೊತ್ತ ವಿಮಾ ಕಂತಿನ ಅನ್ವಯಿಸುವ ಅವಧಿಯ ವಿವರಗಳ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು .
ಹಸಿ ಮೆಣಸಿನಕಾಯಿ,ದಾಳಿಂಬೆ,ಪಪ್ಪಾಯಿ ಹಾಗೂ ದ್ರಾಕ್ಷಿ ಬೆಳೆಗಳ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿಯಲ್ಲಿ ನೊಂದಾಯಿಸಿಕೊಂಡು ರೈತರಿಗೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ರೈತರು ಹಸಿ ಮೆಣಸಿನಕಾಯಿ ಪ್ರತಿ ಹೆಕ್ಟೇರಿಗೆ 3,550/- ರೂ ಗಳು ವಿಮಾ ಪಾವತಿಸಿದರೆ 71000/- ರೂ ಗಳು ವಿಮಾ ಮೊತ್ತ ಸಿಗಲಿದೆ ವಿಮಾ ಅನ್ವಯಿಸುವ ಕಾಲ ಅವಕಾಶ 01/08/2023 ರಿಂದ 31/10/2023, ದ್ರಾಕ್ಷಿ ಬೆಳೆಗೆ ಪ್ರತಿ ಹೆಕ್ಟೇರಿಗೆ 14000/- ರೂ ಗಳು ವಿಮಾ ಪಾವತಿಸಿದರೆ 2,80,000/- ರೂ ಗಳು ವಿಮಾ ಮೊತ್ತ ಸಿಗಲಿದೆ ವಿಮಾ ಅನ್ವಯಿಸುವ ಕಾಲ ಅವಕಾಶ 01/09/2023 ರಿಂದ 15/04/2024, ಪಪ್ಪಾಯಿ ಬೆಳೆಗೆ ಪ್ರತಿ ಹೆಕ್ಟೇರಿಗೆ 6700/- ರೂ ಗಳು ವಿಮಾ ಪಾವತಿಸಿದರೆ 1,34,000/- ರೂ ಗಳು ವಿಮಾ ಮೊತ್ತ ಸಿಗಲಿದೆ ವಿಮಾ ಅನ್ವಯಿಸುವ ಕಾಲ ಅವಕಾಶ 01/08/2023 ರಿಂದ 31/03/2024, ದಾಳಿಂಬೆ ಬೆಳೆಗೆ ಪ್ರತಿ ಹೆಕ್ಟೇರಿಗೆ 6350/- ರೂ ಗಳು ವಿಮಾ ಪಾವತಿಸಿದರೆ 71000/- ರೂ ಗಳು ವಿಮಾ ಮೊತ್ತ ಸಿಗಲಿದೆ ವಿಮಾ ಅನ್ವಯಿಸುವ ಕಾಲ ಅವಕಾಶ 01/08/2023 ರಿಂದ 15/10/2023.
ಬೆಳೆ ಸಾಲ ಪಡೆದ ಮತ್ತು ಸಾಲ ಪಡೆಯದ ರೈತರಿಗೆ ವಿಮಾ ಮೊತ್ತವು ಹಾಗೂ ವಿಮಾ ಕಂತಿನ ಮೊತ್ತವು ಒಂದೇ ಆಗಿರುತ್ತದೆ.ಬೆಳೆ ಸಾಲ ಪಡೆದ,ಬೆಳೆ ಸಾಲ ಪಡೆಯುವ ರೈತರು ಪ್ರಸಕ್ತ ಸಾಲಿನ ಪಹಣಿ ಪತ್ರಿಕೆ, ಆಧಾರ್ ಕಾರ್ಡ್ ಝರಾಕ್ಸ್ ಪ್ರತಿ ಹಾಗೂ ಬ್ಯಾಂಕ್ ಪಾಸ್ ಬುಕ್ ಪುತ್ರಿಯೊಂದಿಗೆ ಹತ್ತಿರದ ಗ್ರಾಮ – ಒನ್ ಕೇಂದ್ರ, ಬ್ಯಾಂಕಗಳಲ್ಲಿ ಮತ್ತು ಸಿ.ಎಸ್.ಸಿ ಕೇಂದ್ರಗಳಲ್ಲಿ ವಿಮಾ ಯೋಜನೆಯಡಿಯಲ್ಲಿ 31/07/2023 ರ ಒಳಗಾಗಿ ಪ್ರೀಮಿಯಂ ಮೊತ್ತ ಕಟ್ಟಿ ನೊಂದಾಯಿಸಿ ಕೊಳ್ಳಬೇಕು ಎಂದರು.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ತಾಲ್ಲೂಕ ತೋಟಗಾರಿಕೆ ಇಲಾಖೆ ರೈತ ಸಂಪರ್ಕ ಕೇಂದ್ರ ಅಥವಾ ಹತ್ತಿರದ ಶಾಖೆಯ ಬ್ಯಾಂಕ್ ಹಾಗೂ ಪ್ರವೀಣ್ ಕುಮಾರ್ ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ ವಿಮಾ ಸಂಸ್ಥೆಯ ಪ್ರತಿನಿಧಿ ದೂ.ಸಂಖ್ಯೆ: 7847848883, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿಲ್ಲಾ ಪಂಚಾಯತ್ ಯಾದಗಿರಿ ದೂ.ಸಂಖೆ: 9164570011, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಜಿಲ್ಲಾ ಪಂಚಾಯತ್ ಶಹಾಪುರ ದೂ.ಸಂಖ್ಯೆ: 9901919133, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಜಿಲ್ಲಾ ಪಂಚಾಯತ್ ಸುರಪುರ ದೂ.ಸಂಖ್ಯೆ: 8105190746 ಗೆ ಸಂಪರ್ಕಿಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಗರಿಮಾ ಪನ್ವಾರ, ಅಪಾರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟಪ್ಪಗೊಳ, ವಲಯ ಅರಣ್ಯ ಸಂರಕ್ಷಣಾಧಿಕಾರಿ ಖಾಜಾ ಪಟೇಲ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಮಂಜುನಾಥ ಅಂಗಡಿ,ಕೃಷಿ ಜಂಟಿ ನಿರ್ದೇಶಕರು ಅಭೀದ್.ಎಸ್ ಸೇರಿದಂತೆ ಇನ್ನಿತರ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.