ಯಾದಗಿರಿ ಜಿಲ್ಲೆಯ ವಡಗೇರಾ:ಕಳೆದ ಮೂರು ನಾಲ್ಕು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಡಗೇರಾ ತಾಲೂಕಿನ ಬೆಂಡಬೆಂಬಳಿ ಗ್ರಾಮದಲ್ಲಿ ಸುಮಾರು ಮನೆಗಳು ಕುಸಿದು ಬಿದ್ದಿವೆ ಇದರಿಂದ ನಾವುಗಳು ತೀವ್ರ ಸಂಕಷ್ಟ ಜೀವನ ನಡೆಸುತ್ತಿದ್ದೇವೆ ಎಂದು ಬೆಂಡಬೆಂಬಳಿ ಗ್ರಾಮದ ಮಹಿಳೆ ರಾಜೇಶ್ವರಿ ಸಾಲಿಮಠ ಅವರು ಅಳಲು ತೋಡಿಕೊಂಡರು.
ಮನೆ ಕುಸಿದು ಬಿದ್ದಿರುವುದರಿಂದ ಸಂಬಂಧಿಕರ ಮನೆ ಹಾಗೂ ಇನ್ನಿತರ ಅಕ್ಕ ಪಕ್ಕದವರ ಮನೆಯಲ್ಲಿ ವಾಸಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಮನೆಯಲ್ಲಿ ಇರುವ ಕಾಳು ಕಡಿ ಎಲ್ಲಾ ಸಾಮಾನುಗಳು ಹಾಳಾಗಿವೆ ದನಕರುಗಳನ್ನು ಕೂಡಾ ಹೊರಗಡೆ ಮಳೆಯಲ್ಲಿ ಕಟ್ಟಿದ್ದೇವೆ.
ವಡಗೇರಾ ತಾಲೂಕ ದಂಡಾಧಿಕಾರಿಗಳು ಇತ್ತಕಡೆ ಗಮನ ಹರಿಸಿದೆ ಗ್ರಾಮಸ್ಥರ ಜೀವನದ ಜೊತೆ ಚೆಲ್ಲಾಟ ಆಡುತ್ತಾ ಇದ್ದಾರೆ ಯಾವ ಒಬ್ಬ ಅಧಿಕಾರಿಯೂ ಭೇಟಿ ನೀಡಿಲ್ಲ ಮಾನ್ಯ ಜಿಲ್ಲಾಧಿಕಾರಿಗಳು ಬೆಂಡಬೆಂಬಳಿ ಗ್ರಾಮಸ್ಥರ ನೆರವಿಗೆ ಬರುತ್ತಾರಾ ಎಂದು ಗ್ರಾಮಸ್ಥರು ಕಾಯುವಂತಾಗಿದೆ.
ಶಾಸಕರೇ ಬೆಂಡಬೆಂಬಳಿ ಗ್ರಾಮಸ್ಥರ ಮನೆಗಳು ಕುಸಿದು ಬಿದ್ದಿವೆ ಈಗಲಾದರೂ ಗ್ರಾಮಸ್ಥರ ನೆರವಿಗೆ ಬನ್ನಿ ಮನೆ ಕುಸಿದು ಬಿದ್ದವರಿಗೆ ಸೂಕ್ತ ಪರಿಹಾರ ಒದಗಿಸಿ ಕೊಡಬೇಕು ಎಂದು ಗ್ರಾಮಸ್ಥರ ಅಳಲು ತೋಡಿಕೊಂಡರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.