ಅಫಜಲ್ಪುರ್: ತಾಲೂಕಿನ ಗೊಬ್ಬುರ (ಬಿ) ಗ್ರಾಮದ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ರುವಾರಿಗಳಾದ ಶ್ರಿ ಶಿವಾನಂದ. ಎಮ್.ಕೌದಿ ಅವರಿಗೆ ಬಹುಕಾಲದ ಶೈಕ್ಷಣಿಕ ಸೇವಾ ಸಾಧನೆಯನ್ನು ಗುರುತಿಸಿ ನಾದ ಬ್ರಹ್ಮ ಪಂಡಿತ್ ಪುಟ್ಟರಾಜ್ ಕಲಾ ಸೇವಾ ಸಂಘ(ಅವರಳ್ಳಿ) ಅವರ ವತಿಯಿಂದ ಕೊಡಮಾಡುವ ಕರ್ನಾಟಕ ಕಣ್ಮಣಿ ಪ್ರಶಸ್ತಿಯನ್ನು ಇತ್ತೀಚಿಗೆ ಕಲಬುರಗಿಯ ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
