ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದ ನಾಡಕಚೇರಿ ಮಳೆಗಾಲ ಬಂದರೆ ಸಾಕು ನಾಡಕಚೇರಿಯ ಎಲ್ಲಾ ಕೋಣೆಗಳು ಕೆಸರಿನ ಗದ್ದೆಯಾಗುತ್ತವೆ ಸುಮಾರು 6 ವರ್ಷಗಳಾದರೂ ತಿರುಗಿ ನೋಡದ ಜೇವರ್ಗಿ ಮತಕ್ಷೇತ್ರದ ಜನಪ್ರತಿನಿಧಿ ಹಾಗೂ ಕಂದಾಯ ಇಲಾಖೆ ತಹಶೀಲ್ದಾರರು ಯಾವುದೇ ಸೂಕ್ತ ಪರಿಹಾರವಾಗಲಿ ಅಥವಾ ಕೋಣೆ ಬದಲಾವಣೆಯಾಗಲಿ ಮಾಡಿರುವುದಿಲ್ಲ ಹೀಗಾಗಿ ನಾಡಕಚೇರಿಯ ಸಿಬ್ಬಂದಿಗಳು ಮಳೆಗಾಲದಲ್ಲಿ ನೀರಿನಲ್ಲಿ ಕುಳಿತು ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಕೆಳಗಡೆ ಯುಪಿಎಸ್ ಕರೆಂಟ್ ಅಳವಡಿಸಿದೆ ನಾಡಕಚೇರಿಯ ಸಿಬ್ಬಂದಿಗಳು ಸ್ವಲ್ಪ ಯಾಮಾರಿದರೆ ಕರೆಂಟ್ ತಗಲಿ ಜೀವಕ್ಕೆ ಅಪಾಯ ಆಗುವದಂತೂ ಖಚಿತ ನಾಡಕಚೇರಿ ಕೆಲವೊಂದು ಕೋಣೆಗಳು ತಿಪ್ಪೆಯಂತಾಗಿದೆ ಸ್ವಚ್ಛತೆಯಂತೂ ಮೊದಲೇ ಇಲ್ಲ ಸರ್ಕಾರದ ಕಚೇರಿಗಳು ಹೀಗಿದ್ದರೆ ಸಾರ್ವಜನಿಕರ ಕೆಲಸಕ್ಕೆ ಸ್ಪಂದಿಸುವುದು ಹೇಗೆ ಎಂದು ಯಡ್ರಾಮಿ ತಾಲೂಕಿನ ಹೊಂಬೆಳಕು ಸಮಿತಿ ತಾಲೂಕ ಅಧ್ಯಕ್ಷರು ವಿಜಯಕುಮಾರ್ ಜೆ ಮಲ್ಲೆದ್ ಅವರು ಸರಕಾರಕ್ಕೆ ಹಾಗೂ ಜೇವರ್ಗಿ ತಾಲೂಕಿನ ಜನಪ್ರತಿನಿಧಿಗೆ ಯಡ್ರಾಮಿ ಪಟ್ಟಣದ ಸ್ಥಳೀಯರ ಪರವಾಗಿ ಹಾಗೂ ಯಡ್ರಾಮಿ ತಾಲೂಕಿನ ಸುತ್ತಮುತ್ತಲ್ಲಿನ ಹಳ್ಳಿಯ ಜನತೆಯ ಪರವಾಗಿ ಪ್ರಶ್ನಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.