ಕೊಪ್ಪಳ/ಕಾರಟಗಿ:ಮುಂದಿನ ಕೊಪ್ಪಳ ಲೋಕಸಭೆ ಚುನಾವಣೆಯ ಟಿಕೆಟ್ ಅನ್ನು ಗಂಗಾವತಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ದೊಡ್ಡಪ್ಪ ದೇಸಾಯಿ ಹಗೆದಾಳ ಇವರಿಗೆ ಕೊಪ್ಪಳ ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸುವ ಶಕ್ತಿ ಇದ್ದು ಇವರು ರೈತ ಮಿತ್ರರು ಮತ್ತು ರಾಜಕೀಯ ಬೆಳವಣಿಗೆಯಲ್ಲಿ ನುರಿತ ವ್ಯಕ್ತಿ,ಎರಡು ಬಾರಿ
ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ, ರಾಜಕೀಯದಲ್ಲಿ ಚಾಣಕ್ಯ,ರಾಜಕೀಯ ಬೆಳವಣಿಗೆಯನ್ನು ಅರಿತ ವ್ಯಕ್ತಿ,ಜನಸಾಮಾನ್ಯರಿಗೆ ನ್ಯಾಯ ದೊರಕಿಸುವರು,ಅದರಿಂದ ದೊಡ್ಡಪ್ಪ ದೇಸಾಯಿಯವರಿಗೆ ಟಿಕೆಟ್ ಕೊಡಬೇಕೆಂದು, ಮುಖ್ಯಮಂತ್ರಿಗಳಾದ ಶ್ರೀಮಾನ್ಯ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಇವರಿಗೆ ನಮ್ಮ ಕನಕಗಿರಿ ಕ್ಷೇತ್ರದ ಸಚಿವರಾದ ಸಂಸ್ಕೃತ ಮತ್ತು ಕನ್ನಡ ಮತ್ತು ಹಿಂದುಳಿದ ವರ್ಗದ ಸಚಿವರಿಗೆ ಕ್ಷೇತ್ರಕ್ಕೆ ಆಗಮಿಸಿದಾಗ ಚರ್ಚಿಸಿ,ಸ್ಥಳೀಯ ಕಾಂಗ್ರೆಸ್ ರಾಜಕೀಯ ಮುಖಂಡರೊಂದಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡರಾದ ಮರೇಗೌಡ ಎಚ್ ಸಿಂಗ್ನಾಳ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
