ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಪತ್ರಿಕೆಗಳನ್ನು ಕೊಂಡು ಓದುವವರ ಸಂಖ್ಯೆ ಹೆಚ್ಚಾಗುವ ಅವಶ್ಯಕತೆ ಇದೆ-ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು

ಕೊಪ್ಪಳ:ಪತ್ರಿಕೆಗಳಿಗೆ ಜಾಹೀರಾತುಗಳೇ ಜೀವಾಳ,ನಾವು ಮೊಬೈಲ್‌ನಲ್ಲಿ ಪತ್ರಿಕೆಗಳನ್ನು ಓದುವುದರಿಂದ ನಮಗೆ ನಿಜವಾದ ಸಂತೋಷ ಸಿಗುವುದಿಲ್ಲ ಪತ್ರಿಕೆಗಳನ್ನು ನೇರವಾಗಿ ಓದಿದಾಗ ಸಿಗುವ ಸಂತೋಷವೇ ಬೇರೆ ಪತ್ರಕರ್ತರು ಇಂದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿ ಬಹುಮುಖ್ಯವಾದದ್ದು ಆರ್ಥಿಕ ಸಮಸ್ಯೆ. ಹೀಗಾಗಿ ಪತ್ರಿಕೆಗಳನ್ನು ಕೊಂಡು ಓದುವವರ ಸಂಖ್ಯೆ ಹೆಚ್ಚಾಗುವ ಅವಶ್ಯಕತೆ ಇದೆ.
ಪತ್ರಕರ್ತ ಸಿದ್ದು ಹಿರೇಮಠ ಅವರ ಸಾಧನೆ,ಧೈರ್ಯ, ಸ್ಥೈರ್ಯ ಮೆಚ್ಚುವಂಥದ್ದು.ಅವರು ವಾಮನಮೂರ್ತಿಯಾಗಿದ್ದರೂ ಸಹ ಸಮಾಜಕ್ಕೆ ಕೀರ್ತಿ ತರುವಂತಹ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾದದು ಎಂದು ಹೆಬ್ಬಾಳ ಮಠದ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.ಅವರು ಇಂದು ಕೊಪ್ಪಳದ ಪಂಚಾಯತ್ ಸಭಾಂಗಣದಲ್ಲಿ ಧ್ರುವನ್ಯೂಸ್ ಪತ್ರಿಕೆ,ಧ್ರುವ ಮೀಡಿಯಾ ಏಜ್ಯುಕೇಶನ್ ವತಿಯಿಂದ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ,ಸಾಧಕರಿಗೆ ಸನ್ಮಾನ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.
ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಚಿಲವಾಡಗಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಇಂದಿನ ಪತ್ರಿಕೆಗಳು ನಾಳೆಗೆ ಕೆಲವರಿಗೆ ರದ್ದಿ ಆದರೆ ನನಗೆ ಮಾತ್ರ ಅವು ಆಸ್ತಿಗಳಾಗಿವೆ.ನಾನು ದಿನಾಲು ಪತ್ರಿಕೆಗಳನ್ನು ಖರೀದಿ ಮಾಡಲು ಕನಿಷ್ಠ ೭೦ರಿಂದ ೮೦ ರೂಪಾಯಿ ಮೀಸಲಿಡುತ್ತೇನೆ ನಾನು ದಿನಾಲೂ ರಾಜ್ಯಮಟ್ಟದ ಎಲ್ಲಾ ಪತ್ರಿಕೆಗಳನ್ನು ಮತ್ತು ಸ್ಥಳೀಯ ಜಿಲ್ಲಾಮಟ್ಟದ ಎಲ್ಲಾ ಪತ್ರಿಕೆಗಳನ್ನು ಖರೀದಿಸುತ್ತೇನೆ. ಈ ಹವ್ಯಾಸದಿಂದಲೇ ನಾನು ಹಲವಾರು ಗ್ರಂಥಗಳನ್ನು ಹೊರತಂದಿದ್ದೇನೆ.೮ನೇ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಚಂದ್ರಶೇಖರ ಕಂಬಾರ ಅವರ ಕುರಿತು ಕಂಬಾರರಿಗೆ ಜ್ಞಾನಪೀಠ ಅಭಿನಂದನೆ ಬರಗೂರು ರಾಮಚಂದ್ರಪ್ಪನವರನ್ನು ಕುರಿತು ಬಂಡಾಯಗಾರ ಬರಗೂರು ಸೇರಿದಂತೆ ಹಲವಾರು ಗ್ರಂಥಗಳನ್ನು ಹೊರತಂದಿದ್ದೇನೆ ಎಂದರು.
ಪತ್ರಕರ್ತರಾದ ಸಾಧಿಕ್ ಅಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ,ಸಿದ್ದು ಹಿರೇಮಠ ಅವರು ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿರುವುದು ಸಂತಸದ ಸಂಗತಿ ಎಂದರು. ಪತ್ರಕರ್ತರಾದ ಜಿ.ಎಸ್.ಗೋನಾಳ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ,ಇಂದಿನ ದಿನಮಾನಗಳಲ್ಲಿ ಪತ್ರಿಕೆಗಳನ್ನು ನಡೆಸುವುದು ತುಂಬಾ ಕಷ್ಟದ ಕೆಲಸವಾಗಿದೆ ಇದರ ಮಧ್ಯದಲ್ಲಿಯೂ ಸಹ ಸಿದ್ದು ಹಿರೇಮಠ ಅವರು ತಮ್ಮ ಪತ್ರಿಕೆಯನ್ನು ನಿರಂತರವಾಗಿ ನಡೆಸಿಕೊಂಡು ಹೋಗುತ್ತಿರುವುದು ಸಾಹಸದ ಕೆಲಸವಾಗಿದೆ ಎಂದರು.
ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ವೀರೇಶ ಮಹಾಂತಾಯನಮಠ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ,ಸಿದ್ದು ಹಿರೇಮಠ ಅವರು ನಮಗೆ ಬಹಳ ದಿನಗಳಿಂದಲೂ ಒಡನಾಡಿಗಳು ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಶ್ಲಾಘನೀಯವಾದದ್ದು ಎಂದರು.ಕಾಂಗ್ರೆಸ್ ಮುಖಂಡರಾದ ಕೆ.ಎಂ.ಸಯ್ಯದ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗದ ಪಾತ್ರವು ಬಹು ಮುಖ್ಯವಾದದ್ದು ಎಂದರು.
ಪತ್ರಕರ್ತೆಯಾದ ಸಾವಿತ್ರಿ ಮುಜುಮದಾರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಪತ್ರಿಕಾರಂಗದಲ್ಲಿ ಮಹಿಳೆಯರು ಸಹ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತಿದ್ದಾರೆ. ಅವರಿಗೂ ಸಹ ಈ ಪತ್ರಿಕೆಯಲ್ಲಿ ಲೇಖನಗಳನ್ನು ಬರೆಯಲು ಅವಕಾಶ ನೀಡಬೇಕು ಎಂದರು.
ಪತ್ರಕರ್ತರಾದ ಗೋವಿಂದರಾಜ ಬೂದುಗುಂಪ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ,ಪ್ರಶಸ್ತಿಗಳು ತಮ್ಮ ಘನತೆ ಗೌರವಗಳನ್ನು ಉಳಿಸಿಕೊಳ್ಳಬೇಕಾದರೆ ಅವುಗಳು ಮಾರಾಟದ ಸರಕುಗಳಾಗಬಾರದು ಎಂದರು.
ಧ್ರುವನ್ಯೂಸ್ ಪತ್ರಿಕೆಯ ಸಂಪಾದಕರಾದ ಸಿದ್ದು ಹಿರೇಮಠ,ಗೌರವ ಸಂಪಾದಕರಾದ ಬಿ.ಎಂ.ಹಿರೇಮಠ, ಸುವರ್ಣ ಕರ್ನಾಟಕ ರಕ್ಷಣಾ ಸೈನ್ಯದ ಅಧ್ಯಕ್ಷರಾದ ಟಿಕ್ಯಾ ನಾಯಕ,ನವ ನಿರ್ಮಾಣ ವೇದಿಕೆಯ ರಾಜ್ಯ ಸಂಚಾಲಕರಾದ ವಿಜಯಕುಮಾರ ಕವಲೂರು, ಪತ್ರಕರ್ತರಾದ ಎಚ್.ಎಸ್.ಹರೀಶ,ಶಿವರಾಜ ನುಗಡೋಣಿ,ಮಂಜುನಾಥ ಕೋಳೂರು,ಫಕೀರಪ್ಪ ಗೋಟೂರು,ಉಮೇಶ ಪೂಜಾರ,ಚಿನ್ನಪ್ಪ ಗುಳಗುಳಿ, ಉದಯ ತೋಟದ,ಹಿರಿಯರಾದ ಯಮನೂರಪ್ಪ ಸಿಂಗನಾಳ,ಮಲ್ಲಯ್ಯ ಹಿರೇಮಠ,ಮೈತ್ರಾದೇವಿ ಹಿರೇಮಠ,ಮಹಾದೇವಿ ಹಿರೇಮಠ,ಎಂ.ಎನ್. ಕುಂದಗೋಳ,ಎಂ.ಆರ್.ಹಿರೇಮನಿ,ಶರಣಯ್ಯಸ್ವಾಮಿ ಮರಳಿಮಠ,ಪಂಪಯ್ಯಸ್ವಾಮಿ ಹಿರೇಮಠ, ಹಿರಿಯರಾದ ವೀರೇಶ ಹಿರೇಮಠ,ಕೆ.ಎಸ್. ಕೊಡತಗೇರಿ,ಜಿ.ಎಂ.ಶಿವಪುರ,ತಾಜ್‌ಪಾಷಾ ಮಕಾಂದರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ