ಅನುದಾನವಿಲ್ಲದೆ 5000 ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಣ್ಣು ಮುಚ್ಚಿದ ಕೌಶಲ್ಯ ತರಬೇತಿ ಆರ್‌ಟಿಐ ಹೋರಾಟಗಾರ ಪರಶುರಾಮ್ ದಂಡಗುಲ್ಕರ್ ಸರ್ಕಾರದ ವಿರುದ್ಧ ಗಂಭೀರ ಆರೋಪ.
ಕಲಬುರಗಿ ಯಡ್ರಾಮಿ/ಸರ್ಕಾರದ ಅನುದಾನ ಇಲ್ಲದೆ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಜಾರಿಗೊಳಿಸಲಾಗಿದ್ದ ರಕ್ಷಣಾ ಕೌಶಲ್ಯ ತರಬೇತಿ ಸ್ಥಗಿತಗೊಂಡಿದೆ 2012ರಲ್ಲಿ ದೆಹಲಿಯ ನಿರ್ಭಯ ಅತ್ಯಾಚಾರ ಪ್ರಕರಣದ ಪ್ರಕರಣದ ಬಳಿಕ 2013 ರಿಂದ 2017ರವರೆಗೆ ಪ್ರತಿಯೊಂದು ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಕರಾಟೆ ಕೌಶಲ್ಯ ಕಲಿಸಲಾಗುತ್ತಿತ್ತು ಆದರೆ ಇತ್ತೀಚಿನ 2018 ರಿಂದ 2023ರ ವರೆಗೆ ಅಂದರೆ ಐದು ವರ್ಷಗಳಿಂದ ಸರ್ಕಾರದ ಶಾಸಕರಾಗಲಿ ಸಚಿವರಾಗಲಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈ ಕೌಶಲ್ಯದ ಬಗ್ಗೆ ಗಮನ ಹರಿಸದೆ ನಿರ್ಲಕ್ಷ ವಹಿಸಿದ್ದಾರೆಂದು ಯಡ್ರಾಮಿ ತಾಲೂಕಿನ ಆರ್ ಟಿ ಐ ಹೋರಾಟಗಾರರಾದ ಪರಶುರಾಮ್ ದಂಡಗುಲ್ಕರ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ ಅಷ್ಟೇ ಅಲ್ಲದೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಂಡಳಿಯ ವತಿಯಿಂದ ಸ್ವಯಂ ರಕ್ಷಣೆಯ ಕೌಶಲ್ಯಕ್ಕೆ ಹಾಗೂ ಹಿಂದುಳಿದ ಪ್ರದೇಶವಾದ ಕಲ್ಯಾಣ ಕರ್ನಾಟಕದ ಪ್ರತಿಯೊಂದು ಪ್ರೌಢಶಾಲೆಯ ಹೆಣ್ಣು ಮಕ್ಕಳಿಗೆ ಕರಾಟೆಯ ಸ್ವಯಂ ರಕ್ಷಣೆಯನ್ನು ಕಲಿಸಲು ಅನುದಾನ ಬಿಡುಗಡೆ ಮಾಡಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
