ವಿಜಯನಗರ:ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ಹಾಲಿ ಕೂಡ್ಲಿಗಿ ಪಟ್ಟಣದ ನಿವಾಸಿಗಳು ಹಾಗೂ ಎಫ್.ಪಿ.ಓ ರೈತರ ಕಂಪನಿ ಅಧ್ಯಕ್ಷರಾಗಿರುವ ಶ್ರೀಮತಿ ಜಿ.ಅಂಬಿಕಾ ಗಂಡ ಜಿ.ಗಿರೀಶರವರ ಸೇವೆಯನ್ನು ಆಧಾರಿಸಿ ಹಾಗೂ ಇದೇ ಕ್ಷೇತ್ರದಲ್ಲಿ ಕಾರ್ಯನಿರ್ವಹಣಾ ಅಧಿಕಾರಿಯಾಗಿ,ಸೇವೆ ಸಲ್ಲಿಸುತ್ತಿರುವ ಅವರ ಪತಿ ಜಿ.ಗಿರೀಶ್ ಅವರಿಗೆ ಆಗಸ್ಟ್ 15ರಂದು ನವದೆಹಲಿಯಲ್ಲಿ ಜರುಗುವ ಸ್ವಾತಂತ್ರ್ಯೋತ್ಸವದಲ್ಲಿ ದೇಶದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜೊತೆಯಲ್ಲಿ.ಈ ದಂಪತಿಗಳಿಗೆ ಭಾಗಿಯಾಗುವ ಅವಕಾಶ ದೊರೆತಿದೆ.
ನವ ದೆಹಲಿಯ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಕಚೇರಿಯಿಂದ ಈ ದಂಪತಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ ಪ್ರಧಾನಿ ನರೇಂದ್ರ ಮೋದಿಯವರು, ಇಂತಹ ವಿಶಿಷ್ಟ ಅವಕಾಶವನ್ನು ದೇಶದ ಎಲ್ಲಾ ರಾಜ್ಯಗಳಿಂದ ನಿಗದಿತ ಸಂಖ್ಯೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಗೈದವರನ್ನು ಗುರುತಿಸಿ ಅವರನ್ನು ತಮ್ಮೊಂದಿಗೆ ಸ್ವಾತಂತ್ರ್ಯದಲ್ಲಿ ಭಾಗಿಯಾಗಿಸುವ ವಿಶಿಷ್ಟವಾದ ಪರಿಕಲ್ಪನೆಯನ್ನು ಅನುಷ್ಠಾನಕ್ಕೆ ತಂದಿದ್ದಾರೆ ರಾಷ್ಟ್ರದ ಎಲ್ಲಾ ರಾಜ್ಯಗಳಿಂದ ಇಂತಿಷ್ಟು ಜನರನ್ನು ಗುರುತಿಸಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ದೇಶದ ಒಟ್ಟು 128 ಸಾಧಕರನ್ನ ಗುರುತಿಸಿ ಪ್ರದಾನ ಮಂತ್ರಿಗಳ ಕಾರ್ಯಾಲಯದಿಂದ ಅತಿಥಿಗಳನ್ನು ನೇರವಾಗಿ ಮೊಬೈಲ್ ಮೂಲಕ ಸಂಪರ್ಕಿಸಿ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಲಾಗಿದೆ. ಅಂತೆಯೇ ಕೂಡ್ಲಿಗಿ ಪಟ್ಟಣದ ಶ್ರೀಮತಿ ಜಿ.ಅಂಬಿಕಾ, ಹಾಗೂ ಅವರ ಪತಿ ಜಿ.ಗಿರೀಶರನ್ನು ಪ್ರಧಾನ ಮಂತ್ರಿ ಸಚಿವಾಲಯದಿಂದ
ಸ್ವತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ದೂರವಾಣಿ ಮೂಲಕ ಈಗಾಗಲೇ ಆಹ್ವಾನಿಸಿದೆ ಸಂಬಂಧಿಸಿದಂತೆ ಪತ್ರಕರ್ತರು ಈ ದಂಪತಿಗಳನ್ನು ಸಂಪರ್ಕಿಸಿದಾಗ ಶ್ರೀಮತಿ ಜಿ.ಅಂಬಿಕಾ ಮತ್ತು ಗಿರೀಶ್ ದಂಪತಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ, ನರೇಂದ್ರ ಮೋದಿಯವರು ನಮ್ಮನ್ನು ಗುರುತಿಸಿ ಆಗಸ್ಟ್ 15 ರಂದು ನವದೆಹಲಿಯಲ್ಲಿ ಜರುಗುವ, 77 ನೇ ಸ್ವತಂತ್ರೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವ ಸಂದರ್ಭವನ್ನು ಒದಗಿಸಿರುವುದು ನಮ್ಮ ಸೌಭಾಗ್ಯವಾಗಿದ್ದು ಅದಕ್ಕಾಗಿ ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದೀಜಿಯವರಿಗೆ ಹಾಗೂ ಅವಕಾಶ ನೀಡಿದ್ದಕ್ಕಾಗಿ ಕೇಂದ್ರ ಸರ್ಕಾರಕ್ಕೆ ನಾವು ಎಂದೆದಿಗೂ ಋಣಿಯಾಗಿದ್ದೇವೆ ಮತ್ತು ಕೃತಜ್ಞರಾಗಿದ್ದೇವೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದ ವಿಜಯನಗರ ಜಿಲ್ಲೆಯಿಂದ ನಮ್ಮನ್ನು ಆಯ್ಕೆ ಮಾಡಿರುವುದು ನಮ್ಮ ಸುದೈವವಾಗಿದೆ ಅದಕ್ಕಾಗಿ ನಮಗೆ ತುಂಬಾ ಸಂತೋಷವಾಗಿದೆ ಎಂದು ಶ್ರೀಮತಿ ಜಿ.ಅಂಬಿಕಾ ಹಾಗೂ ಅವರ ಪತಿ ಜಿ.ಗಿರೀಶ ದಂಪತಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಹರಿದು ಬಂದ ಅಭಿನಂದನೆಗಳ ಮಹಾಪೂರ:ಕಲ್ಯಾಣ ಕರ್ನಾಟಕ ಭಾಗದ ವಿಜಯನಗರ ಜಿಲ್ಲೆಯಲ್ಲಿ ಪ್ರಧಾನಿ ಮೋದಿಯವರು ಕೂಡ್ಲಿಗಿ ಪಟ್ಟಣದ ವಾಸಿಗಳಾದ ದಂಪತಿಗಳನ್ನು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಿರುವುದರ ವಿಷಯ ತಿಳಿದ ಹಿತೈಷಿಗಳು ಬಂಧುಗಳು ದಂಪತಿಗಳಿಗೆ ಶುಭ ಹಾರೈಸಿದ್ದಾರೆ.