ಬೆಂಗಳೂರು:ವಿಧಾನ ಪರಿಷತ್ತಿನ ಪದವೀಧರ ಶಿಕ್ಷಕರ ಕ್ಷೇತ್ರದ ಚುನಾವಣೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಂತೆ ಕೇಂದ್ರ ಚುನಾವಣಾ ಆಯೋಗ ಆದೇಶ ನೀಡಿದೆ.ನವೆಂಬರ್ 6 ರಂದು ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನವಾಗಿದೆ ಮತದಾರರ ಪಟ್ಟಿ ಸಿದ್ಧಪಡಿಸಲು ನಂ.20 ರಂದು ಕೊನೆಯ ದಿನವಾಗಿದ್ದು ನಂ.23 ರಂದು ಕರಡು ಪಟ್ಟಿಯನ್ನು ಪ್ರಕಟಿಸಬೇಕು. ನಂ. 23 ರಿಂದ ಡಿ. 9 ವರೆಗೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನವಾಗಿದ್ದು.ಡಿ.25 ರಂದು ಆಕ್ಷೇಪಣೆಗಳ ವಿಲೇವಾರಿ ನಡೆಯಲಿದೆ.ಡಿ.30 ರಂದು ಅಂತಿಮವಾಗಿ ಮತದಾರರ ಪಟ್ಟಿಯನ್ನು ಪ್ರಕಟಿಸಬೇಕು ಎಂದು ಚುನಾವಣೆ ಆಯೋಗವು ತಿಳಿಸಿದೆ. 2024 ನೇ ಸಾಲಿನ ಜೂನ್ ತಿಂಗಳಲ್ಲಿ ಆರು ಮಂದಿಯ ಸದಸ್ಯತ್ವ ಮುಕ್ತಾಯವಾಗಲಿದೆ ಜೊತೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಪುಟ್ಟಣ್ಣ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ ಹೀಗಾಗಿ ವಿಧಾನ ಪರಿಷತ್ತಿನ ಒಟ್ಟು ಏಳು ಸ್ಥಾನಕ್ಕೆ ಚುನಾವಣೆ ನಡೆಯಲಿದೆ.ಈಶಾನ್ಯ ಪದವೀಧರ ಕ್ಷೇತ್ರದ ಡಾ. ಚಂದ್ರಶೇಖರ ಬಿ.ಪಾಟೀಲ್,ನೈಋತ್ಯ ಶಿಕ್ಷಕರ ಕ್ಷೇತ್ರದ ಎಸ್.ಎಲ್.ಭೋಜೇಗೌಡ,ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ಮರಿತಿಬ್ಬೇಗೌಡ ಅವರ ಅವಧಿ 2024 ರ ಜೂನ್ ತಿಂಗಳಿಗೆ ಮುಕ್ತಾಯವಾಗಿದ್ದು.ಈ ಏಳು ಸ್ಥಾನಕ್ಕೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ