ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳವಾಡ ಗ್ರಾಮದಲ್ಲಿ ಶ್ರಾವಣ ಮಾಸದ ಕೊನೆಯ ಶನಿವಾರ ನಿಮಿತ್ತವಾಗಿ ಗ್ರಾಮದ ಹನುಮಾನ ದೇವರ ಅಭಿಷೇಕ ಹಾಗೂ ಎಲೆ ಪೂಜೆ ಘಟಿಸುವುದರ ಮೂಲಕ ಹನುಮ ದೇವರ ಪೂಜೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ನಡೆದಾಡುವ ದೇವರು ಶ್ರೀ ಮ ನಿ ಪ್ರ ರಾಚೋಟೇಶ್ವರ ಪೂಜ್ಯರು ಕೂಡಾ ಬೆಳಿಗ್ಗೆ 5 ಗಂಟೆಗೆ ಹನುಮ ದೇವರ ಪೂಜೆಯನ್ನು ಸಲ್ಲಿಸಿ,ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಮುದಾಯ ಭವನವನ್ನು ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಹಿರಿಯರು ಹನುಮ ದೇವಾಲಯದ ಒಂದು ಸಮುದಾಯ ಭವನ ನಿರ್ಮಾಣದ ಯಶಸ್ಸು ಸಲ್ಲಿಸುವುದಿದ್ದರೆ ಶ್ರೀ ಹನುಮಾನ ಯುವಕ ಮಂಡಳಿ ಬಳವಾಡ ಹಾಗೂ ಶ್ರೀ ಸಿದ್ಧಿವಿನಾಯಕ ಯುವಕ ಮಂಡಳಿಯ ಕಾರ್ಯಕರ್ತರಿಗೆ ಸಲ್ಲಿಸುತ್ತದೆ ಎಂದು ಹೇಳಿದರು ಮತ್ತೆ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು,ಮಧ್ಯಾಹ್ನ ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಸಾಯಂಕಾಲ ಅಥಣಿಯ ಶ್ರೀ ವಾದಿರಾಜ್ ಆಚಾರ್ಯರಿಂದ ಪ್ರವಚನ ಕಾರ್ಯಕ್ರಮ ಜರುಗಿತು,ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಪೂಜರು ಹಿಂದೂ ಸನಾತನ ಧರ್ಮದ ಒಂದು ಇತಿಹಾಸವನ್ನು ತಿಳಿಸುವ ಮೂಲಕ ಹಿಂದೂ ಧರ್ಮದ ಪರಂಪರೆಯನ್ನು ಹೇಳಿದರು.
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ |ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||”ಗುರುವೇ ಬ್ರಹ್ಮ, ಗುರುವೇ ವಿಷ್ಣು ಮತ್ತು ಗುರುವೇ ಶಂಕರ ಗುರುವೇ ನಿಜವಾದ ಪರಮ ಬ್ರಹ್ಮ ಅಂತಹ ಗುರುವಿಗೆ,ತಂದೆ ತಾಯಿಗೆ ನಾವು ನಮಸ್ಕಾರ ಮಾಡುವುದರಿಂದ ಕಷ್ಟಗಳು ದೂರವಾಗುತ್ತವೆ ಎಂದು ಹೇಳಿದರು.
ಶ್ರೀರಾಮ ಚಂದ್ರನು ಮಹಾವಿಷ್ಣುವಿನ ಏಳನೇ ಅವತಾರ ವಿಷ್ಣುವಿನ ಭೂಮಿಯ ಮೇಲಿನ ಅವತಾರವಾಗಿ ಜನಿಸುವ ಶ್ರೀರಾಮನ ಆದರ್ಶಗಳು ಹಾಗೂ ಶ್ರೇಷ್ಠತೆಗೆ ಸಂಬಂಧಿಸಿದ ನಿರೂಪಣೆಯೇ ಈ ಹಿಂದೂ ಮಹಾಕಾವ್ಯ ಹಿಂದೂ ಧರ್ಮದಲ್ಲಿ ಹಾಗೂ ವಿಶೇಷವಾಗಿ ವೈಷ್ಣವ ಧರ್ಮದ ವಿವಿಧ ಪಂಥಗಳಲ್ಲಿ ರಾಮ ಪಂಥವೂ ಒಂದಾಗಿದೆ ಭಾರತ ಮಾತ್ರವಲ್ಲದೇ ದಕ್ಷಿಣ ಏಷಿಯಾ ಹಾಗೂ ಆಗ್ನೇಯ ಏಷಿಯಾದ ಹಲವಾರು ಸಂಸ್ಕೃತಗಳಲ್ಲಿ,ಧಾರ್ಮಿಕ ಗ್ರಂಥಗಳಲ್ಲೂ ರಾಮನ ಕುರಿತಾದ ಉಲ್ಲೇಖವನ್ನು ಕಾಣುತ್ತೇವೆ ನಾವು ಕೃಷ್ಣನಂತೆಯೇ ರಾಮನು ಕೂಡಾ ವಿಷ್ಣುವಿನ ಅವತಾರಗಳಲ್ಲಿ ಒಬ್ಬನು ಎಂದು ಹೇಳಿದರು.
ಹನುಮಂತ ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ ಹಾಗೂ ಹಿಂದು ದೇವತೆಗಳಲ್ಲಿ ಒಬ್ಬ ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ.
ಶಿವನ ಅವತಾರವೆಂದು ಪರಿಗಣಿಸಲಾಗುವ ಹನುಮಂತನು ಶ್ರೀರಾಮನ ಪರಮ ಭಕ್ತ. ಲಂಕೆಯಿಂದ ಸೀತೆಯನ್ನು ಸುರಕ್ಷಿತವಾಗಿ ಮರಳಿ ತರಲು ನಡೆದ ಯುದ್ಧದಲ್ಲಿ ಈತನ ಪಾತ್ರ ಪ್ರಮುಖವಾದುದ್ದಾಗಿದೆ ಶ್ರೀರಾಮನಿಗಾಗಿ ಹನುಮಂತನು ತೋರಿದ ಪ್ರೀತಿ ನಿಸ್ವಾರ್ಥ,ಶ್ರದ್ಧಾ ಮತ್ತು ಭಕ್ತಿಯಿಂದ ಕೂಡಿರುವುದಾಗಿದೆ ತನ್ನ ಯಜಮಾನನಿಗಾಗಿ ಪ್ರಾಣವನ್ನು ಕೊಡಲು ಲೆಕ್ಕಿಸದ ಮಹಾನ್ ವೀರನೀತ,ತ್ಯಾಗಮಯಿ ಈತ ತನ್ನ ಎದೆಯನ್ನೇ ಸೀಳಿ ತನ್ನ ನಿಷ್ಠಾವಂತ ಭಕ್ತಿಯನ್ನು ಮೆರೆದ ತ್ಯಾಗವಂತ ಹಿಂದೂ ಧರ್ಮದಲ್ಲಿ ಮಾತ್ರವಲ್ಲದೇ,ಜೈನ ಮತ್ತು ಬೌದ್ಧ ಧರ್ಮದಲ್ಲೂ ಗುರುತಿಸಿಕೊಂಡಿರುವ ಹನುಮಂತ,ವಾಯುಪುತ್ರ, ಆಂಜನೇಯ ಸಂಸ್ಕೃತದಲ್ಲಿ ಹನುಮಾನ್ ಎಂದರೆ ವಿರೂಪಗೊಂಡ ದವಡೆ ಎಂದರ್ಥ ಹನು ಎಂದರೆ ‘ದವಡೆ’ ಮಾನ್ ಎಂದರೆ ‘ವಿರೂಪಗೊಂಡಿದೆ’ ಎಂದು ಹೇಳಲಾಗಿದೆ ಸೂರ್ಯ ಮತ್ತು ಇಂಧ್ರನೊಂದಿಗೆ ಕಾದಾಟ ನಡೆಸಿರುವುದರಿಂದ ಹನುಮಾನ್ ಗೆ ಈ ಹೆಸರು ಬರಲು ಕಾರಣವಾಯಿತು ಒಮ್ಮೆ ಹನುಮಂತನು ಸೂರ್ಯನನ್ನು ಹಣ್ಣೆಂದು ತಪ್ಪಾಗಿ ತಿಳಿದು ತಿನ್ನಲು ಮುಂದಾಗುತ್ತಾನೆ ಸೂರ್ಯನನ್ನು ಹನುಮಾನ್‌ನಿಂದ ರಕ್ಷಿಸಲು ಇಂದ್ರ ದೇವನು ತನ್ನ ಆಯುಧದಿಂದ ಹನುಮಾನ್‌ನ ಮೇಲೆ ಹಲ್ಲೆ ನಡೆಸುತ್ತಾನೆ ಇಂದ್ರನ ವಜ್ರಾಯುಧದ ಹೊಡೆತವು ಹನುಮಾನ್‌ನ ದವಡೆಗೆ ಬಿದ್ದು ಆತನ ದವಡೆಯು ವಿರೂಪಗೊಳ್ಳುತ್ತದೆ ಅಂದಿನಿಂದ ಆಂಜನೇಯನನ್ನು ಹನುಮಾನ್ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಪೂಜರಿಗೆ ಸತ್ಕಾರವನ್ನು ಮಾಡಿದರು.ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಸಾಗರ ಬಡಿಗೇರ,ಜಾಫರ್ ನದಾಫ,ರಾವಸಾಬ ಹರೋಲಿ,ಸಿದ್ದರಾಯ ನೇಮಗೌಡ,ಬಸವರಾಜ ಹರೋಲಿ,ಗೌಡಪ್ಪ ಪಾಟೀಲ,ಗಜಾನನ ಹರೋಲಿ,ಹನುಮಂತ ಹರೋಲಿ ಇದ್ದರು ಗ್ರಾಮದ ತಾಯಂದಿರು,ಚಿಕ್ಕ ಮಕ್ಕಳು ಸಂಘಟನಾ ಕಾರ್ಯಕರ್ತರು ಹಾಜರಿದ್ದರು.
ವರದಿ:ವಿಶ್ವನಾಥ ಹರೋಲಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.