ಗದಗ ಜಿಲ್ಲಾ ಲಕ್ಷ್ಮೇಶ್ವರ ತಾಲೂಕಿನ ರಾಮಗೇರಿ ಗ್ರಾಮದ ಸಕಲ ಭಕ್ತರಿಂದ ಗ್ರಾಮದಲ್ಲಿ ಶ್ರೀ ಶ್ರೀ ಷ. ಬ್ರ. ಡಾ||ವೈಜನಾಥ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಗಂಜ್ಜಿಗಟ್ಟಿ ಮಠ ಇವರ ‘ಅಧ್ಯಾತ್ಮ ಸೇವೆ ಹಾಗೂ ಧಾರ್ಮಿಕ ಕ್ಷೇತ್ರದ ಸೇವೆಗೆ “ಏಷ್ಯಾ ಇಂಟರ್ ನ್ಯಾಶನಲ್ ಕಲ್ಚರಲ್ ರಿಸರ್ಚ್ ಯೂನಿವರ್ಸಿಟಿ ” ಬೆಂಗಳೂರ ಇವರಿಂದ ಶ್ರೀ ಶ್ರೀ ಷ.ಬ್ರ.ಡಾ||ವೈಜನಾಥ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಕ್ಷೇತ್ರ ಚರಮೂರ್ತಿಮಠ. ಗಂಜಿಗಟ್ಟಿ ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿರುವ ಪ್ರಯುಕ್ತ ಶ್ರೀಗಳಿಗೆ ತುಲಾಭಾರ ಕಾರ್ಯಕ್ರಮ ಹಾಗೂ ಸನ್ಮಾನ ಮಾಡಲಾಯಿತು ಈ ಧರ್ಮಕಾರ್ಯದಲ್ಲಿ ಪಾವನ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ.ಡಾ ||ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಮಹಾಸ್ವಾಮಿಗಳು (ಶ್ರೀ ಕಾಡ ಸಿದ್ದೇಶ್ವರಮಠ,ನೊಣವಿನಕೆರಿ),ಅಧ್ಯಕ್ಷತೆ ಶ್ರೀ ಮ. ನಿ.ಪ್ರ.ವಿಮಲರೇಣುಖ ವಿರಾಮುಕ್ತಿಮುನಿ ಶಿವಾಚಾರ್ಯ (ಮುಕ್ತಿಮಂದಿರ ಧರ್ಮ ಕ್ಷೇತ್ರ ),ಶ್ರೀ ಮ.ನಿ.ಪ್ರ.ಚನ್ನವೀರ ಮಹಾಸ್ವಾಮಿಗಳು (ಶ್ರೀ ವೀರಕ್ತಮಠ,ಹೂವಿನ ಶಿಗ್ಲಿ ),ಶ್ರೀ ಮ.ನಿ. ಪ್ರ.ರುದ್ರಮುನಿ ಶಿವಾಚಾರ್ಯರು (ಮುಸ್ಟೂರು),ಶ್ರೀ ಮ.ನಿ.ಪ್ರ.ಬಸವರಾಜ ಮಹಾಸ್ವಾಮಿಗಳು (ಶ್ರೀ ರಾಮಲಿಂಗೇಶ್ವರಮಠ,ಬೆಳ್ಳಟ್ಟಿ ),ಶ್ರೀ ಷ.ಬ್ರ, ಸುಜ್ಞಾನದೇವ ಶಿವಾಚಾರ್ಯರು (ಶ್ರೀ ಜಪದಕಟ್ಟಿ ಮಠ,ಬನ್ನಿಕೊಪ್ಪ /ಮೈಸೂರ),ಸಾನಿಧ್ಯ ವಹಿಸಿದ್ದರು.ಈ ಸಂಧರ್ಭದಲ್ಲಿ ಪ್ರೌಢ ಶಾಲೆಯ ಮಕ್ಕಳಿಂದ ಪ್ರಾರ್ಥನೆ ಹಾಗೂ ಸಕಲ ಶ್ರೀಗಳನ್ನು ಸ್ವಾಗತದೊಂದಿಗೆ ಊರಿನ ಸಕಲ ಭಕ್ತವೃಂದ, ಭಜನಾ ಮಂಡಳಿಗಳು,ಅಕ್ಕ-ಪಕ್ಕದ ಊರಿನ ಭಕ್ತಾದಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ವರದಿ-ಸದಾಶಿವ ಭೀಮಪ್ಪ ಮುಡೆಮ್ಮನವರ
