“ಶ್ರೀಸಾಮಾನ್ಯ”
ಓ ನನ್ನ ಅಧಿಕಾರಿಗಳೇ
ನಾನು ನಿಮ್ಮ ಧರ್ಮ, ಜಾತಿ ,ಕುಲದವನಲ್ಲ,ನಾ ನಿಮ್ಮ ನೆಂಟ,ಬಂಧು ಬಳಗವು ಅಲ್ಲ ಆದರೂ ನನಗೆ ಸಿಗಬಹುದೇ ನಿಮ್ಮ ಉತ್ತಮ ಸೇವೆ?ಇಲ್ಲ ಬಿಡಿ ಅದು ಹೇಗೆ ಸಾಧ್ಯ?ಏಕೆಂದರೆ,ನಾನು ಶ್ರೀಸಾಮಾನ್ಯ.
ಓ ನನ್ನ ವೈದ್ಯರೇ…
ನಾನು ನಿಮ್ಮ ಧರ್ಮ,ಜಾತಿ, ಕುಲದವನಲ್ಲ,ಬಲ್ಲಿದನಲ್ಲ
ನಾ ನಿಮ್ಮ ನೆಂಟ ಬಂದು ಬಳಗವು ಅಲ್ಲ ಆದರೂ
ನನಗೆ ಸಿಗಬಹುದೇ ನಿಮ್ಮ
ಅತ್ಯುತ್ತಮ ಚಿಕಿತ್ಸೆ?
ಇಲ್ಲ ಬಿಡಿ ಅದು ಹೇಗೆ
ಸಾಧ್ಯ?
ಏಕೆಂದರೆ ನಾನು ಶ್ರೀಸಾಮಾನ್ಯ.
ಓ ನನ್ನ ರಾಜಕಾರಣಿಗಳೇ.
ನಾನು ನಿಮ್ಮವನಲ್ಲ,ನಿಮ್ಮ ಪಕ್ಷ,ವಿಪಕ್ಷದವನಲ್ಲ, ಆಜಾತಿ,ಈಜಾತಿಯವನಲ್ಲ,ನಿಮ್ಮ ಧರ್ಮ,ಪರಧರ್ಮದವನಲ್ಲ
ಆದರೂ!ನನಗೆ ಸಿಗಬಹುದೇ
ನಿಮ್ಮ ಸ್ಥಾನಮಾನ?
ಇಲ್ಲ ಬಿಡಿ ಅದು ಹೇಗೆ ಸಾಧ್ಯ?
ಏಕೆಂದರೆ ನಾನು ಶ್ರೀಸಾಮಾನ್ಯ…
ಓ ನನ್ನ ವ್ಯಾಪಾರಿಗಳೇ…
ನಾನು ನಿಮ್ಮಮನೆಮಗನಲ್ಲ,
ನೆಂಟನಲ್ಲ,ಜಾತಿಯಲ್ಲ,
ಕುಲದವನಲ್ಲ,ಅಕ್ಕ ಪಕ್ಕದವನೂ ಅಲ್ಲ,ಆದರೂ!
ನಾನು ನಿರೀಕ್ಷಿಸಬಹುದೇ
ಮೋಸ ಕಪಟವಿಲ್ಲದ ವ್ಯವಹಾರವಾ?
ಇಲ್ಲ ಬಿಡಿ ಅದು ಹೇಗೆ ಸಾಧ್ಯ?
ಏಕೆಂದರೆ ನಾನು ಶ್ರೀಸಾಮಾನ್ಯ…
ಓ ನನ್ನ ಭಾರತಾಂಬೆಯೆ…
ಕೇಳು,ನಿನ್ನ ಮಕ್ಕಳಲ್ಲಿನ
ಸ್ವಧರ್ಮ,ಸ್ವಜಾತಿ,ಸ್ವಪಕ್ಷ,ಸ್ವತನದಲ್ಲಿ
ಮಂಕಾಗಿರುವ ನೀನು
ಹೊಳೆಯುವ ಮಿಂಚಾಗಿ
ಜಗದಗಲ ಬೆಳಗಬೇಕಾದರೆ
ನಿನ್ನ ಮಡಿಲಲ್ಲಿ ಜನಿಸಿದ
ಪ್ರತಿ ಶ್ರೀಸಾಮಾನ್ಯ
ಆಗಬೇಕು ಅಸಾಮಾನ್ಯ.
ಶ್ರೀಸಾಮಾನ್ಯನ ಅಸಮಾನ್ಯತೆಯೇ
ತಾಯೇ ನಿನಗೆ ಕಿರೀಟ ಪ್ರಾಯ…
ಅದೇ ಈ ಕವಿತೆಯ ಆಶಯ…
-ಎ.ಜಿ.ಕೃಷ್ಣವೇಣಿ,ಸಹಶಿಕ್ಷಕಿ,
ಸ.ಕಿ.ಪ್ರಾ ಶಾಲೆ,ಕುದುರೆಗಣಿ ಚಿತ್ರಟ್ಟಿಹಳ್ಳಿ,ಸೊರಬ.
ಜಿಲ್ಲಾ ಉತ್ತಮ ಶಿಕ್ಷಕರು ಪ್ರಶಸ್ತಿ ವಿಜೇತರು.
ನಲಿಕಲಿ ಕ್ರಿಯಾಶೀಲ ತಾರೆಯರ ಬಳಗ ಶಿವಮೊಗ್ಗ.