ಸದೃಢ ದೇಹದಲ್ಲಿ ಸದೃಢವಾದ ಮನಸ್ಸು ಇರುತ್ತದೆ” ಎಂಬಂತೆ ಶ್ರೀ ಝೂರಿಲಾಲ್ ನಾಯ್ಕ್ ಬಿ. ರವರ ವ್ಯಕ್ತಿತ್ವಕ್ಕೆ ಈ ಹೇಳಿಕೆ ಸೂಕ್ತವಾಗಿದೆ.
ಸದಾ ಕ್ರೀಯಾಶೀಲತೆ ಮತ್ತು ಏನನ್ನಾದರೂ ಸಾಧಿಸುವ ಛಲ ಹಾಗೂ ಸದಾ ನಗುವಿನ ಆ ಮನಸ್ಸು
ಇವರ ಇಡಿ ವ್ಯಕ್ತಿತ್ವವನ್ನು ಬಿಂಬಿಸುತ್ತದೆ” ಇವರನ್ನು ಕಂಡು ಜೊತೆ ಬೆರೆತುಕೊಂಡರೆ ಅವರಲ್ಲಿರುವ
ನಡೆ, ನುಡಿ, ಆಶಾಭಾವನೆ ಮತ್ತು ಮುಂದಿನ ಕನಸುಗಳನ್ನು ಕೇಳಿದರೆ ಯಾರೋಬ್ಬರೂ ಸಹ
ಇವರಿಂದ ದೂರಾಗಲೂ ಸಾಧ್ಯವೇ ಇಲ್ಲಾ. ಇಂಥಹ ವ್ಯಕ್ತಿ ಸಿಗುವುದು ಅಪರೂಪ. ಇವರು
ಹುಟ್ಟಿನಿಂದಲೇ ಪ್ರತಿಭಾನ್ವಿತರಾಗಿದ್ದು ಕ್ರೀಡೆ, ಸಾಹಿತ್ಯ, ಕಲೆ, ಓದು, ಸಂಗೀತ ಮುಂತಾದ ಎಲ್ಲಾ
ಕ್ಷೇತ್ರಗಳಲ್ಲಿ ತಮ್ಮನೂ ತಾವು ತೊಡಗಿಸಿಕೊಂಡಿದ್ದು ಎಲ್ಲಾ ರಂಗದಲ್ಲೂ ಯಶಸ್ಸು ಕಾಣುತ್ತಲೇ
ಬರುತ್ತಿದ್ದಾರೆ. ಇವರು ಪ್ರಾಥಮಿಕ ಶಾಲೆಯಿಂದ ವಿಶ್ವವಿದ್ಯಾಲಯದ ತನಕ ತಮ್ಮದೇ ಛಾಪು
ಮೂಡಿಸಿದ್ದಾರೆ.
ಶ್ರೀಯುತರು ಅಪ್ಪಟ ಹಳ್ಳಿಯ ಪ್ರತಿಭೆಯಾಗಿದ್ದು ಮೂಲತ: ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ
ಕೊಮಾರನಹಳ್ಳಿ ತಾಂಡಾದ ನಿವಾಸಿಗಳಾದ ಶ್ರೀಯುತ ಸೈನಾನಾಯ್ಕ ಮತ್ತು ಲಕ್ಷ್ಮೀಬಾಯಿ ಯವರ ಪುತ್ರರಾಗಿದ್ದು ಇವರ
ಪ್ರಾಥಮಿಕ ಶಿಕ್ಷಣವೂ ಸ್ವಂತ ಊರಿನ ಸ.ಹಿ.ಪ್ರಾ. ಶಾಲೆಯಲ್ಲಿ ಮುಗುಸಿದ್ದು ಪ್ರೌಢ ಶಿಕ್ಷಣವನ್ನು ಹೂವಿನಹಡಗಲಿ ಪಟ್ಟಣದ
ತುಂಗಭದ್ರ ಪ್ರೌಢ ಶಾಲೆಯಲ್ಲಿ ಪಡೆದಿರುತ್ತಾರೆ. ನಂತರ ಇವರು ಪದವಿಪೂರ್ವ ಶಿಕ್ಷಣವನ್ನು ಹೂವಿನಹಡಗಲಿಯ ಎಂ.ಎಂ. ಪಾಟೀಲ
ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪಡೆದು ನಂತರ ಕೃಷಿ ವಿಜ್ಞಾನ (ಆಗ್ರೀಕಲ್ಚರ್) ಪದವಿಯನ್ನು
ರಾಯಚೂರು ಕೃಷಿ ವಿಶ್ವ ವಿದ್ಯಾಲಯದಲ್ಲಿ 2018-19 ರಲ್ಲಿ ರ್ಯಾಂಕ್ ಪದವಿ ಪಡೆದಿರುತ್ತಾರೆ. ನಂತರ ಇವರು ಸ್ಪರ್ಧಾತ್ಮಕ
ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ವಿವಿಧ ಉದ್ದೆಗಳಲ್ಲಿ ಆಯ್ಕೆಯಾಗಿದ್ದಾರೆ. ಇವರು ಮೊದಲಿಗೆ ಜೈಲ್ ವಾರ್ಡರ್ ಆಗಿ ನಂತರ
ಸಿವಿಲ್ ಪಿಸಿ ಆಗಿ ನಂತರ 7 ವಿವಿಧ PSI ಹುದ್ದೆಗಳಿಗೆ ಆಯ್ಕೆಯಾಗಿ ಇವರು ಪ್ರಸ್ತುತ ಸಿವಿಲ್ PSI ಆಗಿ ಬೆಂಗಳೂರು ನಗರದಲ್ಲಿ ಕಾರ್ಯನಿರ್ವಸುತ್ತಿದ್ದಾರೆ. ಶ್ರೀಯುತ ಝೂರಿಲಾಲ್
ನಾಯ್ಕ್ ಬಿ. ಇವರು ಸಮಾಜಕ್ಕೆ ಕೊಡುಗೆ ನೀಡಲು ದೃಡಸಂಕಲ್ಪ ಹೊಂದಿದ್ದು ರಾಜ್ಯ ಮತ್ತು ದೇಶದ ಅಭಿವೃದ್ಧಿ ಮತ್ತು ಮೌಲ್ಯ
ವೃದ್ಧಿಸುವಲ್ಲಿ. ಇವರ ಕೊಡುಗೆ ಸದಾ ಸಾಗುತ್ತಿರಲೆಂದು ಹಾಗೂ ಇವರ ಈ ಪುಸ್ತಕ ಗರುಡ-ದೃಷ್ಟಿ ಗುರಿಯ ಕಡೆಗೆ ರಾಜ್ಯದ
ಸ್ಪರ್ಧಾರ್ಥಿಗಳಾಗಿರುವ ಯುವಕ ಯುವತಿಯರಿಗೆ ಪ್ರೇರಣೆ ಹಾಗೂ ಅವರ ಸಾಧನೆಗೆ ದಾರಿ ದೀಪವಾಗಿ ಪ್ರಜ್ವಲಿಸಲೆಂದು
ಹಾರೈಸುತ್ತೇನೆ.
ವರದಿ ಶಂಕರ್ ರಾಠೋಡ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.