ಸಿಂಧನೂರು:ಸೆ-13
ತಾಲೂಕಿನ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ರಾಜ್ಯದ ವಿವಿಧೆಡೆ ವರ್ಗಾವಣೆಗೊಂಡಿರುವ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇತ್ತೀಚಿಗೆ ನಗರದ ಪ್ರವಾಸಿ ಮಂದಿರದಲ್ಲಿ ಸಿಂಧನೂರು ತಾಲೂಕಾ ಬಂಜಾರ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಇಲಾಖೆಗಳಲ್ಲಿ ಸಲ್ಲಿಸಿ ವರ್ಗಾವಣೆಗೊಂಡು ಹೋಗಿರುವ ಮಂಜಾನಾಯ್ಕ ಎಂ.ಬಿ.ಗೋಪಾಲ ನಾಯ್ಕ,ಶೀಲಾವತಿ,ಮಲ್ಲಪ್ಪ ಲಂಬಾಣಿ,ಈರಪ್ಪ ರಾಠೋಡ್,ಶಶಿಕಲಾ,ಮಂಜಾನಾಯ್ಕ, ಸೋಮಿನಾಯ್ಕ,ಲಚ್ಚನಾಯ್ಕ,ನಾಗಪ್ಪ ರಾಠೋಡ್, ಆಶಾಬಾಯಿ,ಶೇಖರಪ್ಪ ರಾಠೋಡ್,ಶಕುಂತಲಾ ಬಾಯಿ,ಭೀಮಶೆಪ್ಪ,ಗಂಗಾಧರ ನಾಯ್ಕ,ಶಂಕರ್ ಛವ್ಹಾಣ,ರವಿ ರಾಠೋಡ್ ಇವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಶಿಕ್ಷಣ ಇಲಾಖೆಯ ರವಿ ಪವಾರ್ ಬಿಆರ್‌ಪಿ ಅವರು ಮಾತನಾಡಿ ತಾಲೂಕಿನಿಂದ ವರ್ಗಾವಣೆಗೊಂಡು ಹೋಗಿರುವ ನೌಕರರು ತಾವು ವರ್ಗವಾಗಿರುವ ಸ್ಥಳದಲ್ಲೂ ಅತ್ಯುತ್ತಮ ಸೇವೆಯನ್ನು ನೀಡಬೇಕು ಈ ಮೂಲಕ ಅಲ್ಲಿಯೂ ಸಹ ನಿಮ್ಮ ಛಾಪನ್ನು ಮೂಡಿಸಬೇಕು ಇಲಾಖೆಗಳ ಅಧಿಕಾರಿಗಳು ಮತ್ತು ಸಕಲ ಸಿಬ್ಬಂದಿಗಳೊಂದಿಗೆ ಸಹೋದರತೆಯಿಂದ ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಂಜಾರ ನೌಕರರ ಸಂಘದ ಪದಾಧಿಕಾರಿಗಳಾದ ನ್ಯಾಯಾಂಗ ಇಲಾಖೆಯ ಚೆನ್ನಪ್ಪ ನಾಯಕ್,ರಾಮದಾಸ ಶಿಕ್ಷಕರು, ಡಾ.ಈರಪ್ಪ ಪಶು ವೈದ್ಯಾಧಿಕಾರಿಗಳು,ಮಾನವ ನಾಯಕ,ವೆಂಕಟೇಶ್ ಗಾಂಧಿನಗರ,ಧನು ಶಿಕ್ಷಕರು,ಹಾಲೇಶ್ ನಾಯಕ್,ಈಶಪ್ಪ ಕೋಟೆ,ಮೂರ್ತಿ ದೇವಿ ಕ್ಯಾಂಪ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.