ಕೊಪ್ಪಳ:ಯರಡೋಣ ಸರಕಾರಿ ಪ್ರೌಢ ಶಾಲೆಯಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ವೃಕ್ಷ ಬಂಧನ ಕಾರ್ಯಕ್ರಮ ನೆರವೇರಿತು.
ದೇಶದಲ್ಲೇ ಅತೀ ಹೆಚ್ಚು ವನ್ಯ ಸಂಪತ್ತನ್ನು ಹೊಂದಿದ ರಾಜ್ಯ ಕರ್ನಾಟಕ.ಇಲ್ಲಿ ಶ್ರೀಗಂಧ ಅತೀ ಹೆಚ್ಚು ಬೆಳೆಯಲಾಗುತ್ತದೆ ಇಂತಹ ವನ್ಯ ಸಂಪತ್ತನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ತಿಳಿಸಿದರು.
ಕಾರಟಗಿ ತಾಲೂಕಿನ ಯರಡೋಣ ಸರ್ಕಾರಿ ಪ್ರೌಢ ಶಾಲೆಯಲ್ಲಿ ವನಸಿರಿ ಫೌಂಡೇಶನ್ ತಾಲೂಕ ಘಟಕ ಕಾರಟಗಿ ವತಿಯಿಂದ ಹಮ್ಮಿಕೊಂಡಿದ್ದ ವೃಕ್ಷ ಬಂಧನ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.ಸಸಿಯನ್ನು ನೆಟ್ಟು ನೀರುಣಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕ ಅದ್ಯಕ್ಷ ಅಮರೇಗೌಡ ಮಲ್ಲಾಪುರ ದೇಶದಲ್ಲೇ ಅತೀ ಹೆಚ್ಚು ವನ್ಯ ಸಂಪತ್ತನ್ನು ಹೊಂದಿದ ರಾಜ್ಯ ಕರ್ನಾಟಕ.ಇಲ್ಲಿ ಶ್ರೀಗಂಧ ಅತೀ ಹೆಚ್ಚು ಬೆಳೆಯಲಾಗುತ್ತದೆ ಇಂತಹ ವನ್ಯ ಸಂಪತ್ತನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ತಿಳಿಸಿದರು ನಾವೆಲ್ಲರೂ ಪ್ರತಿ ವರ್ಷ ನಮ್ಮ ಸಂಸ್ಕೃತಿಯ ಪ್ರಕಾರ ಅಣ್ಣತಂಗಿ ಅಕ್ಕ ತಮ್ಮ ಬಾಂಧವ್ಯ ಗಟ್ಟಿಯಾಗಿರಲಿ ಎಂದು ರಕ್ಷಾಬಂಧನ ಕಾರ್ಯಕ್ರಮವನ್ನು ಆಚರಿಸುತ್ತೇವೆ.ನಮ್ಮ ವನಸಿರಿ ಫೌಂಡೇಶನ್ ವತಿಯಿಂದ ಗಿಡಮರಗಳನ್ನು ನಮ್ಮ ಅಣ್ಣತಮ್ಮಂದಿರಂತೆ ರಕ್ಷಣೆ ಮಾಡಲು ವಿಶೇಷವಾಗಿ ಗಿಡಗಳಿಗೆ ರಾಕಿಯನ್ನು ಕಟ್ಟುವುದರ ಮೂಲಕ ವೃಕ್ಷ ಬಂಧನ ಕಾರ್ಯಕ್ರಮವನ್ನು ಪ್ರತಿವರ್ಷ ಆಚರಿಸುತ್ತಿದ್ದೇವೆ.ಅದೇ ರೀತಿಯಾಗಿ ಇವತ್ತು ಈ ಕಾರ್ಯಕ್ರಮವನ್ನು ಈ ಶಾಲೆಯಲ್ಲಿ ಹಮ್ಮಿಕೊಂಡಿದ್ದೇವೆ ಪ್ರತಿಯೊಬ್ಬ ವಿದ್ಯಾರ್ಥಿಯು ಒಂದೊಂದು ಸಸಿ ನೆಟ್ಟು ಪೋಷಣೆ ಮಾಡಿದರೆ ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಿಕೊಟ್ಟ ಕೀರ್ತಿಯು ನಮಗೆ ಲಭಿಸುತ್ತದೆ ಹಾಗಾಗಿ ನಾವೆಲ್ಲರೂ ಪರಿಸರ ರಕ್ಷಣೆಗೆ ಕಂಕಣ ಬದ್ಧರಾಗೋಣ,ನಿಮಗೆ ಯಾವುದೇ ತರಹದ ಗಿಡಗಳು ಬೇಕಾದರೆ ನಮಗೆ ಸಂಪರ್ಕಿಸಿ ನಿಮ್ಮ ಪ್ರತಿ ಜನ್ಮ ದಿನಾಚರಣೆ ದಿನದಂದು ಒಂದೊಂದು ಸಸಿ ನೆಟ್ಟು ಅದರ ಜೊತೆಗೆ ಜನ್ಮ ದಿನಾಚರಣೆಯನ್ನು ಆಚರಿಸಿಕೊಳ್ಳಿ ಆಗ ಮಾತ್ರ ನಮ್ಮ ಜೀವನಕ್ಕೆ ಒಂದು ಅರ್ಥವಿರುತ್ತದೆ ಎಂದರು.
ನಂತರ ಮಾತನಾಡಿ ತಾಲೂಕ ಅದ್ಯಕ್ಷ ಬಸವರಾಜ ಹೊಸಮನಿ ನಮ್ಮ ವನಸಿರಿ ತಂಡ ಪ್ರತಿನಿತ್ಯ ಪರಿಸರ ರಕ್ಷಣೆಯಲ್ಲಿ ತೊಡಗಿದೆ ಇದರ ಜೊತೆಗೆ ನೀವುಗಳೂ ಕೂಡಾ ಕೈಜೋಡಿಸಬೇಕು ಎಂದರು.
ನಂತರ ಶಾಲೆಯ ಮುಖ್ಯೋಪಾಧ್ಯಾಯರಾದ ವಿಜಯಕುಮಾರ ಮಾತನಾಡಿ ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗ ಅದನ್ನು ನಾವುಗಳೆಲ್ಲರೂ ಸ್ವಚ್ಛವಾಗಿ ಸುಂದರವಾಗಿಟ್ಟುಕೊಳ್ಳಬೇಕು ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರಕ್ಕೆ ನಮ್ಮ ಅಳಿಲು ಸೇವೆ ಸಲ್ಲಿಸಲು ವನಸಿರಿ ಫೌಂಡೇಶನ್ ಜೊತೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.ಈ ಕಾರ್ಯಕ್ರಮದ ಪ್ರಯುಕ್ತ ಭಾಷಣ ಹಾಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ 100 ಸಸಿಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಶಾಲೆಯ ಅಂಗಳದಲ್ಲಿರುವ ಪ್ರತಿಯೊಂದು ಗಿಡಗಳಿಗೂ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ರಂಗೋಲಿಗಳಿಂದ ಸಿಂಗಾರ ಮಾಡಿದ್ದರು ಹಾಗೂ ವಿದ್ಯಾರ್ಥಿಗಳೇ ತಯಾರಿಸಿದ್ದ ರಾಖಿಯನ್ನು ಕಟ್ಟಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾದರಾದ ಶ್ರೀವಿಜಯಕುಮಾರ್ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಬಸವರಾಜ ಬಳೂಟಗಿ ಸದಸ್ಯರು ಭೀಮೇಶ ನಾಯಕ,ಸಂಗಮೇಶ,ಯಮನೂರಪ್ಪ ಸಿಂಗನಾಳ,ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ಶಿಕ್ಷಕರಾದ ಶ್ರೀ ರೆಹಮದ್, ಅಯ್ಯಪ್ಪ,ಶ್ರೀಮತಿ ಶಶಿರೇಖಾ ಪಾಟೀಲ,ಕುಮಾರಿ ಯಂಕುಬಾಯಿ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.