ಶಹಾಪುರ:ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕ ಕಾನೂನು ಸೇವಾ ಸಮಿತಿ ಹಾಗೂ ತಾಲೂಕ ವಕೀಲರು ಸಂಘ ವತಿಯಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಆಧುನಿಕ ಯುಗದಲ್ಲಿ ಕೆಲಸದ ಒತ್ತಡ ಕಡಿಮೆ ಮಾಡುವ ಕುರಿತು ವ್ಯಾಪಕ ಜಾಗೃತಿ ಅವಶ್ಯಕತೆ ಇದೆ ಎಂದು ಹೇಳಿದರು.
ಸಾರ್ವಜನಿಕರು ಭಯ ಪಡುವ ಪ್ರಶ್ನೆ ಇಲ್ಲ ಮಾನಸಿಕ ವೈದ್ಯರ ಬಳಿ ಹೋಗಿ ಸಮಾಲೋಚನೆ ಮಾಡಿ ಸೂಕ್ತ ಚಿಕಿತ್ಸೆ ಪಡೆದು ಒಳ್ಳೆಯ ಆರೋಗ್ಯ ಪಡೆಯಬೇಕು ಉತ್ತಮ ಸಲಹೆ ನೀಡಿದರು.ಹಿರಿಯ ನ್ಯಾಯವಾದಿ ಭಾಸ್ಕರರಾವ್ ಮೂಡಬೂಳ ಮಾಡನಾಡಿ ಪ್ರಸ್ತುತ ಕಾಲದಲ್ಲಿ ಜಗತ್ತಿನಾದ್ಯಂತ ಮೊಬೈಲ್ ದೊಡ್ಡವರು ಚಿಕ್ಕವರು ಎನ್ನದೆ ಕಪಿಮುಷ್ಠಿಯಲ್ಲಿ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದೆ. ಮಕ್ಕಳಂತೂ ಮೊಬೈಲ್ ಇಲ್ಲದೇ ಬದುಕುವುದು ಬಹಳ ಕಷ್ಟವಾಗುತ್ತದೆ ಎಂದರು.
ಇದು ಒಂದು ರೀತಿಯ ಮನೋರೋಗವೇ ಹೀಗಾಗಿ ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ ಮೊಬೈಲ್ ಇಲ್ಲದೆ ಜೀವನವೇ ಇಲ್ಲ ಎಂದು ತಿಳಿದು ಕೊಂಡಿರುವ ಮಕ್ಕಳಿಗೆ ವೈದ್ಯರಿಂದ ಉತ್ತಮ ಸಲಹೆ ಪಡೆದು ಸೂಕ್ತ ಔಷಧಿಗಳನ್ನು ಪಡೆದುಕೊಂಡು ಮಾನಸಿಕತೆಗೆ ಒಳಗಾಗದಂತೆ ಮುಂಜಾಗ್ರತೆ ವಹಿಸಿ ಮಕ್ಕಳಿಗೆ ಉತ್ತಮ ಚಿಕಿತ್ಸೆ ನೀಡುವ ಅಗತ್ಯವಿದೆ ಎಂದು ಹೇಳಿದರು.ಮನೋಶಾಸ್ತ್ರಜ್ಞ ಡಾ||ಮಲ್ಲಿಕಾರ್ಜುನ ಮ್ಯಾಗೇರಿ ಮಾತನಾಡಿ ಮನೋ ರೋಗಿಗಳಲ್ಲಿ ಎರಡು ವಿಧಗಳಿದ್ದು.ಸಾಮಾನ್ಯ ಕಾಯಿಲೆಗಳಾದ ಆತಂಕ,ಗಾಬರಿ,ಖಿನ್ನತೆ, ಮತಿಭ್ರಾಂತಿ,ಅಥವಾ ಮನಸ್ಸಿದ್ದರೆ ಮಾತ್ರ ಎಂಬ ಹಿರಿಯರ ಮಾತಿಗೆ ಗೌರವ ನೀಡಿ ಎಂದರು. ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿ ಆರೋಗ್ಯವಾಗಿ ಇದ್ದರೂ ಮನಸ್ಸು ದುರ್ಬಲವಾಗಿದ್ದರೆ.ನೂರಾರು ಕಾಯಿಲೆಗಳು ಬರುವ ಸಾಧ್ಯತೆಯಿದೆ ಆದಷ್ಟು ಸಾರ್ವಜನಿಕರು ಧ್ಯಾನ,ಯೋಗಾ,ವ್ಯಾಯಾಮ,ಸಂಗೀತದ ಕಡೆ ತಮ್ಮ ಮನಸು ಕೇಂದ್ರೀಕರಿಸಬೇಕು ಆಗ ನಾವು ದಿನನಿತ್ಯದ ಒತ್ತಡದ ಬದುಕಿನಿಂದ ಹೊರ ಬರಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಾಧೀಶರಾದ ಶ್ರೀ ಬಸವರಾಜ್,ತಾಲೂಕ ವೈದ್ಯಾಧಿಕಾರಿಗಳಾದ ಡಾ||ಯಲ್ಲಪ್ಪ ಪಾಟೀಲ್,ತಾಲೂಕ ವಕೀಲರು ಸಂಘದ ಅಧ್ಯಕ್ಷ ಸಂತೋಷ್ ದೇಶಮುಖ್,ಕಾರ್ಯದರ್ಶಿ ಭೀಮನಗೌಡ,ಭೀಮರಾಜ ಮೂಲಿಮನಿ, ಚೇತನಕಮಾರ ಹಿರೇಮಠ,ಸತ್ಯಮ್ಮ ಹೊಸಮನಿ, ಹೆಚ್.ಕೆ.ಪಾಟೀಲ್,ಅಯ್ಯಳಪ್ಪ ಹೊಸಮನಿ, ಮಲ್ಲಿಕಾರ್ಜುನ ಬುಕ್ಕಲ್,ಸಂದೀಪ್ ದೇಸಾಯಿ,ರಾಕೇಶ್ ಸಾಹು,ಬಿಲಖೂಷ ಫಾತಿಮಾ, ರವಿ ಮೊಟಗಿ,ಡಾ|| ಭೈರಮಡಿಗಿ,ಸರಕಾರಿ ಸಹಾಯಕ ಅಭಿಯೋಜಕ ಶ್ರೀಮತಿ ದಿವ್ಯರಾಣಿ, ಡಾ|| ಕಾವ್ಯಶ್ರೀ,ಲಕ್ಷ್ಮೀಕಾಂತ,ಡಾ|| ಶೈಲಜಾ,ಡಾ|| ರಾಘವೇಂದ್ರ,ಆಸ್ಪತ್ರೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.