ಮೊದಲಿಗೆ ನಾನವಳನ್ನು
ಬಲು ಮೆಚ್ಚುವಂತೆ ಮಾಡಿದ್ದು
ಅವಳ ನಡಿಗೆ,
ಆನಂತರ
ನಾ ಬೆಚ್ಚಿಬೀಳುವಂತೆ ಮಾಡಿದ್ದು
ಅವಳ ಅಡುಗೆ,.!!
ಮದುವೆಗೂ ಮುನ್ನ
ನಮ್ಮಿಬ್ಬರದೂ ಒಂದೇ ಮಾತು,
ಮದುವೆಯ ನಂತರ
ಇಬ್ಬರಿಗೂ ಸೇರಿ ಅವಳೊಬ್ಬಳದೇ ಮಾತು,..
ದೂರದಿಂದ ನೋಡಿದಾಗ
ಅದೇನೋ ಜಾದು ಇರುವಂತೆ
ಭಾಸವಾಯಿತೆನಗೆ ನಿನ್ನ ನಗುವಲ್ಲಿ,
ಸನಿಹವಾದ ಮೇಲೆ ಅರಿವಾಯಿತು
ನೀನೋ
ನೋಡಲು ಅಪ್ಪಟ ನಾಗವಲ್ಲಿ,
-ಸುನಿಲ್ ಲೇಖಕ್ ಎನ್
ಬೆಂಗಳೂರು