ಮುಂಡಗೋಡ:ಮುಂಡಗೋಡ ತಾಲೂಕಿನ ಧರ್ಮಾ ಜಲಾಶಯದ ನೀರು ಸದ್ಯ ದೊಡ್ಡ ಕಾಲುವೆಯ ಮೂಲಕ ಹಾನಗಲ್ ತಾಲೂಕಿಗೆ ಹರಿಸಲಾಗುತ್ತಿದ್ದು,ಪ್ರಸ್ತುತ ಪರಿಸ್ಥಿತಿಯಲ್ಲಿ ಮುಂಡಗೋಡ ತಾಲೂಕಿಗೆ ಬರಪರಿಸ್ಥಿತಿ ಎದುರಾಗಿದೆ ಹೀಗೆ ನೀರು ಬಿಡುತ್ತಾ ಹೋದರೆ ಧರ್ಮ ಜಲಾ ಸುತ್ತಮುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರಿನ ಅಭಾವ ಎದುರಾಗುವ ಆತಂಕವಿದ್ದು ಈ ಹಿನ್ನೆಲೆಯಲ್ಲಿ ಧರ್ಮಾ ಕಾಲೊನಿ ಭಾಗದ ರೈತರು ಹಾನಗಲ್ ತಾಲೂಕಿನ ತಹಶೀಲ್ದಾರ್ ಭೇಟಿ ಪರಿಸ್ಥಿತಿ ವಿವರಿಸಿದ್ದರು,ಆದರೆ ಇದಕ್ಕೆ ನಕಾರಾತ್ಮಕವಾಗಿ ಸ್ಪಂದಿಸಿದ ಹಾನಗಲ್ ತಹಶೀಲ್ದಾರ್,ನಿಮ್ಮ ಸಮಸ್ಯೆಯನ್ನು ನಿಮ್ಮ ಭಾಗದ ಅಧಿಕಾರಿಗಳು ಹಾಗೂ ಶಾಸಕರಲ್ಲಿ ಬಗೆಹರಿಸಿಕೊಳ್ಳುವಂತೆ ಹೇಳಿದ್ದಾರೆ,ಈ ಹಿನ್ನೆಲೆಯಲ್ಲಿ ಧರ್ಮಾ ಕಾಲೊನಿ ಹಾಗೂ ಜಲಾಶಯದ ಭಾಗದ ರೈತರು ಮುಂಡಗೋಡ ತಹಶೀಲ್ದಾರ್ ಅವರಿಗೆ ನೀರು ಬಿಡದಂತೆ ಲಿಖಿತವಾಗಿ ಇಂದು ಆಡಳಿತ ಸೌಧದಲ್ಲಿ ಮನವಿ ಮಾಡಿದ್ದಾರೆ ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.
