ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ರೈತರ ಜಮೀನಿಗೆ ನಾರಾಯಣಪುರ ಜಲಾಶಯದಿಂದ ನೀರು ಹರಿಸಲು ಕೃಷ್ಣಾ ಭಾಗ್ಯ ಜಲ ನಿಗಮದ ಮೂಲಕ ಸರ್ಕಾರ ಕೋಟ್ಯಂತರ ರೂ.ಖರ್ಚು ಮಾಡುತ್ತಿದ್ದರೂ ರೈತರ ಭಾಗ್ಯದ ಬಾಗಿಲು ಮಾತ್ರ ಇನ್ನೂ ತೆರೆದಿಲ್ಲ ವರದಾನವಾಗಬೇಕಿದ್ದ ಕಾಲುವೆಗಳು ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದ್ದು,ಕೊನೆ ಭಾಗದ ರೈತರಿಗೆ ಕಣ್ಣೀರೇ ಗತಿ ಎಂಬಂತಾಗಿದೆ.
ವಡಗೇರಾ ತಾಲೂಕಿನ ಕೊಂಕಲ್,ಗೊಂದೆನೂರ, ಚೆನ್ನೂರು ಕಂಠಿ ತಾಂಡಾ ಭಾಗದ ರೈತರಿಗೆ ಮೊದಲೇ ಮಳೆಯಿಲ್ಲ ಕಾಲುವೆ ಇದ್ದು ಇಲ್ಲದಂತಾಗಿದೆ ನೀರು ಸಿಗದಿದ್ದರೆ ರೈತರು ಆತ್ಮಹತ್ಯೆ ಹಾದಿ ಹಿಡಿಯಬೇಕಾಗುತ್ತದೆ ಒಂದು ತೊಟ್ಟು ನೀರು ಹರಿಯುತ್ತಿಲ್ಲ ಎಂದರೆ ಇದು ಈ ಭಾಗದ ರೈತರ ದೌರ್ಭಾಗ್ಯ ಎಂದರೆ ತಪ್ಪಾಗಲಿಕ್ಕಿಲ್ಲ.
ಆದಷ್ಟು ಬೇಗನೆ ಈ ಭಾಗದ ಕಾಲುವೆಗೆ ನೀರು ಹರಿಯುವಂತೆ ಆಗಬೇಕು ಎಂದು ಮಾನ್ಯ ಶ್ರೀನಿವಾಸ ಚಪೇಲ್ ತಹಶೀಲ್ದಾರರಲ್ಲಿ ಮನವಿ ಮಾಡಿಕೊಂಡರು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಗೌರವಾಧ್ಯಕ್ಷರು ಚೌಡಯ್ಯ ಬಾವೂರ ಆಗ್ರಹಿಸಿದರು ಈ ಸಂದರ್ಭದಲ್ಲಿ ಪಿಡ್ಡಪ್ಪ ನಾಯಕ,ಶರಣು ಅಂಗಡಿ, ದೇವೇಂದ್ರಪ್ಪ ಬಾಗಲಿ,ಶರಭಲಿಂಗ ಕಂಟೆಕಾಯಿ ರೈತ ಮುಖಂಡರು,ಸಿದ್ದು ಪುಂಡೆಕಟ್ಗಿ,ಶಿವರಾಜ ಕಾವಲಿ,ಮರೆಪ್ಪ ಕೊಂಕಲ್,ಬಸವರಾಜ್ ಗೊಂದನೂರ್,ಶೇಖರಪ್ಪ ಮಡಿವಾಳ, ಮಲ್ಲಿಕಾರ್ಜುನ ಕೊಂಕಲ್,ಮಜಿದ್ ಸಾಬ್ ಗೊಂದನೂರ,ಹಣಮಂತ್ರಾಯ ಮೇಲ್ಮನಿ,ಕುಶಪ್ಪ ಮಡಿವಾಳ್ಲ,ಚನ್ನಬಸವ,ದೇವಪ್ಪ ಹಲಿಗಿ,ಮಹೇಶ್ ಬಾಗ್ಲಿ,ವೆಂಕಟೇಶ್ ನಾಟೇಕಾರ,ರಫೀಕ್ ಜಮಾದಾರ್,ಸುರೇಶ್ ಮಡಿವಾಳ,ಶರಣಬಸವ, ಅಯ್ಯಣ್ಣ ನಾಟೇಕಾರ,ಬಸವರಾಜ ಯಾದಗಿರಿ ಹಾಗೂ ಇನ್ನಿತರರು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.