ನನ್ನ ಮನೆ ನನ್ನ ಗಂಡನ ಮನೆ
ನನ್ನ ಮನೆ ನನ್ನ ಗಂಡನ ಮನೆ II
ಶಿವನ ಸ್ವರೂಪದ ಪತಿಯ ಮನೆ
ತಾಯಿ ರೂಪದ ಅತ್ತೆಯ ಮನೆ
ತಂದಿರೂಪದ ಮಾವನ ಮನೆ
ಅವಿಭಕ್ತ ಕುಟುಂಬದ ಸುಂದರ ಮನೆ
ಮನೆ ಮನೆ ಇದು ನನ್ನ ಮನೆ ನನ್ನ ಗಂಡನ ಮನೆ |೧|.
ನಾಡಗೌಡ ಮನೆತನದ ಸಿರಿವಂತ ಮನೆ
ಮೈದುನ ನಾದಿನಿಯ ಹೆಮ್ಮೆಯ ಮನೆ
ಮೂರು ಜನ ಅಣ್ಣ ತಮ್ಮಂದಿರನ ಸಂಬಂಧಮನೆ
ಇಬ್ಬರು ಅಕ್ಕ ತಂಗಿಯರ ಬಾಂಧವ್ಯದ ಮನೆ
ಮನೆ ಮನೆ ಇದು ನನ್ನ ಮನೆ ನನ್ನ ಗಂಡನ ಮನೆ | ೨II
ರಾಷ್ಟ್ರ ನಿರ್ಮಾಪಕರಾದ ಶಿಕ್ಷಕರ ಮನೆ
ರಾಷ್ಟ್ರ ರಕ್ಷಕರಾದ ಸೈನಿಕರ ಮನೆ
ರಾಷ್ಟ್ರದ ಬೆನ್ನೆಲುವಾದರೈತರ ಮನೆ
ಶಿಕ್ಷಕ ಸೈನಿಕ ರೈತ ಗಣ್ಯರಮನೆ
ಮನೆ ಮನೆ ನನ್ನ ಮನೆ ನನಗ ನನ್ನ ಗಂಡನ ಮನೆ II ೩ II
ಮೂರು ಜನ ನೆಗಣಿಯರ ಒಗ್ಗಟ್ಟಿನ ಮನೆ
ಆರುಜನ ಮೊಮ್ಮಕ್ಕಳ ಪ್ರೀತಿಯ ಮನೆ
ಸಂಸಾರವೆಂಬ ದೋಣಿಯಲ್ಲಿ ಜಯಿಸಿದ ಮನೆ
ನಾಡಗೌಡರಲ್ಲಿ ನಾನೊಬ್ಬಳು ನಾಡಗೌಡತಿಯಾಗಿ ಮೆರೆದ ಮನೆ
ಮನೆ ಮನೆ ನನ್ನ ಮನೆ ನನ್ನ ಗಂಡನ ಮನೆ || ೪||
ಆದರ್ಶ ಶಿಕ್ಷಕ ದಂಪತಿಗಳಾಗಿ ಬಾಳುತ್ತಿರುವ ಮನೆ
ಹಿರಿಯರಿಗೆ ಗೌರವ ನೀಡುವ ಆಚರಣೆಯ ಮನೆ
ನನ್ನ ಮಗಳಂತೆ ಕಾಣುವ ವಾತ್ಸಲ್ಯದ ಮನೆ
ಕೊನೆಯ ಉಸಿರಿರುವವರೆಗೂ ಮರೆಯಲಾರದ ಮನೆ
ಮನೆ ಮನೆ ನನ್ನ ಮನೆ ನನ್ನ ಗಂಡನ ಮನೆ || ೫ ||
ನನ್ನ ಮನೆ ನನ್ನ ಗಂಡನ ಮನೆ
ನನ್ನ ಮನೆ ನನ್ನ ಗಂಡನ ಮನೆ ||
ರಚನೆ : ‘ಶ್ರೀಮತಿ.ಮಡಿವಾಳಮ್ಮ ಎಸ್ ಜಿ (ನಾಡಗೌಡ)ಸಹ ಶಿಕ್ಷಕರು
ಎಂ ಪಿ ಎಸ್ ಬಳಗಾನೂರ,