ಸಿಂಧನೂರು ತಾಲೂಕಿನ ಮಲ್ಲಾಪುರ ಗ್ರಾಮದ ರಸ್ತೆ ಬದಿಯ ಅಕ್ಕಪಕ್ಕದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ನೆಡಲಾದ ಸಸಿಗಳಿಗೆ ವನಸಿರಿ ಫೌಂಡೇಶನ್ ಸದಸ್ಯರು ನೀರುಣಿಸಿದರು.
ಮಲ್ಲಾಪುರ ಗ್ರಾಮದ ರಸ್ತೆಯ ಅಕ್ಕಪಕ್ಕದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ನೆಡಲಾಗಿದ್ದ ಸಸಿಗಳು ಮಳೆಯ ಕೊರತೆಯಿಂದ ಸಸಿಗಳು ಒಣಗುವ ಸ್ಥಿತಿಯಲ್ಲಿದ್ದವು.ಇವುಗಳಿಗೆ ಸ್ವತಃ ತಾವೇ ಟ್ಯಾಂಕರ್ ಮೂಲಕ ನೀರುಣಿಸಲು ಮುಂದಾದರು. ಇವರ ಪರಿಸರ ಪ್ರೇಮಕ್ಕೆ ಸಾರ್ವಜನಿಕರ ವಲಯದಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಯಿತು.
ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪುರ ಸಸಿಗಳಿಗೆ ನೀರುಣಿಸಿ ಮಾತನಾಡಿ ರಾಜ್ಯಾದ್ಯಂತ ಈ ಬಾರಿ ಮಳೆ ಬಾರದೆ ಅರಣ್ಯ ಇಲಾಖೆ ಹಾಗೂ ಸಂಘ ಸಂಸ್ಥೆಗಳು, ಪರಿಸರ ಪ್ರೇಮಿಗಳು ನೆಟ್ಟಿರುವ ಸಸಿಗಳು ಒಣಗುವ ಸ್ಥಿತಿಯಲ್ಲಿವೆ ಮಳೆಗಾಲ ಇಲ್ಲದಿರುವುದರಿಂದ ಭೂಮಿಯ ತಾಪಮಾನ ಕೂಡಾ ಏರುಪೇರಾಗಿದೆ ಕಲ್ಯಾಣ ಕರ್ನಾಟಕದಲ್ಲಿ ಕೂಡಾ ಬಿಸಿಲಿನ ಬೇಗೆಯಿಂದ ಜನರು ತತ್ತರಿಸುವಂತಾಗಿದೆ.ಮನುಷ್ಯರಾದ ನಾವುಗಳು ಮಾತಾಡುವ ಮೂಲಕ ನೀರು ಖರೀದಿಸಿ ಕುಡಿಯುತ್ತೇವೆ ಇಂತಹ ಸಂದರ್ಭದಲ್ಲಿ ಮಾತುಗಳನ್ನಾಡದ ಸಸಿಗಳು ನೀರಿಲ್ಲದೆ ಒಣಗಿ ತನ್ನ ಜೀವನವನ್ನು ಕಳೆದುಕೊಳ್ಳುವ ಸ್ಥಿತಯಲ್ಲಿವೆ ದಯವಿಟ್ಟು ಎಲ್ಲಾ ಸಂಘ ಸಂಸ್ಥೆಗಳು,ಅರಣ್ಯ ಇಲಾಖೆಯ ಸಿಬ್ಬಂದಿಗಳು,ಪರಿಸರ ಪ್ರೇಮಿಗಳು ಈ ಬಿರು ಬಿಸಿಲಿನಿಂದ ನೀರಿಲ್ಲದೆ ಒಣಗುತ್ತಿರುವ ಸಸಿಗಳಿಗೆ ಟ್ಯಾಂಕರ್ ಮೂಲಕ ಅಥವಾ ತಮ್ಮ ಹತ್ತಿರದ ಕೆರೆಕಟ್ಟೆಗಳಲ್ಲಿನ ನೀರನ್ನು ಮೋಟಾರು ಮೂಲಕ ಎತ್ತಿಹಾಕುವ ಮೂಲಕ,ಸಸಿಗಳಿಗೆ ನೀರುಣಿಸಿ ಸಸ್ಯಗಳ ಬೆಳವಣಿಗೆಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಅದ್ಯಕ್ಷರಾದ ಅಮರೇಗೌಡ ಮಲ್ಲಾಪುರ ಮುದಿಯಪ್ಪ ಹೊಸಹಳ್ಳಿ ಕ್ಯಾಂಪ್,ವೀರೇಶ ಕೆ.ಮಂಜುನಾಥ ನಾಯಕ ಇನ್ನಿತರರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.