ಯಾದಗಿರಿ ಶಹಾಪುರ ತಾಲೂಕಿನ ಡಿಗ್ರಿ ಕಾಲೇಜಿನ ಒಳ ಕ್ರೀಡಾಂಗಣದಲ್ಲಿ ಸೆಟ್ಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಹಮ್ಮಿಕೊಳ್ಳಲಾಯಿತು.
ಈ ಟೂರ್ನಿಯಲ್ಲಿ ಸುಮಾರು 26 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು ಸಂತೋಷ ವಟರ್ ಮತ್ತು ವೆಂಕಟೇಶ್ ದಾಸ್ ಅವರು ಸತತ 3 ನೇ ಬಾರಿಗೆ ಪ್ರಥಮ ಸ್ಥಾನ ಪಡೆದರು.ದ್ವಿತೀಯ ಬಹುಮಾನವನ್ನು ಹುಣಸಗಿ ತಂಡದ ಸುರೇಶ್ ಪೊಲೀಸ್ ಮತ್ತು ಬಂದೇ ನವಾಜ್ ತಂಡ ಪಡೆದುಕೊಂಡರು.
ಟೂರ್ನಿಯಲ್ಲಿ ಎಲ್ಲಾ ವಿಜೇತ ತಂಡಗಳಿಗೆ ಮಂಜುನಾಥ ಮಡ್ಡಿ ಅವರು ಪ್ರಶಸ್ತಿಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಅಬ್ದುಲ್ ಹಾದಿಮನಿ, ಮೌನೇಶ್ ನಟೇಕಾರ್,ಮಾದು ಚಟ್ರಕಿ,ಡಾಕ್ಟರ್ ಧರ್ಮರಾಜ ಹೋತಪೆಟ್,ಮಲ್ಲರಡ್ಡಿ,ಆನಂದ್ ಪಾಟೀಲ್ ಈ ಕಾರ್ಯಕ್ರಮವನ್ನು ಬಸವಲಿಂಗಪ್ಪಗೌಡ ನಿರೂಪಣೆ ಹಾಗೂ ವಂದಿಸಿದರು.
ವರದಿ ರಾಜಶೇಖರ ಮಾಲಿ ಪಾಟೀಲ್
