ಬೀದರ್:(ಕಮಲ ನಗರ):ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದು,ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ ಇಂತಹ ಸನ್ನಿವೇಶದಲ್ಲಿ ನೂರಾರು ವಿದ್ಯಾರ್ಥಿಗಳು ಶಾಲೆಗೆ ಬರಲು ಸಮರ್ಪಕ ಸಾರಿಗೆ ಸೌಕರ್ಯವಿಲ್ಲದೆ ದಿನಂಪ್ರತಿ ಬೆಳಗ್ಗೆ ತಿಂಡಿ ಇಲ್ಲದೆ 2-3 ತಾಸು ಬಸ್‍ಗಾಗಿ ಕಾದು ಪರಿತಪಿಸುವಂತಹ ಪರಿಸ್ಥಿತಿ ಕಮಲ ನಗರ ತಾಲ್ಲೂಕಿನ ಬಳತ್ (ಬಿ) ಗ್ರಾಮಕ್ಕೆ ವಿದ್ಯಾರ್ಥಿಗಳಿಗೆ ತಲೆದೋರಿದೆ.
ಇಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಬೀದರ್ ಜಿಲ್ಲಾ ಘಟಕ ವತಿಯಿಂದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬೀದರ್ ನಿಯಂತ್ರಣ ಅಧಿಕಾರಿಗಳಿಗೆ ಕಮಲನಗರ ತಾಲೂಕಿನ ಬಳತ್ (ಬಿ) ಗ್ರಾಮಕ್ಕೆ ಬಸ್ ಒದಗಿಸುವಂತೆ ಮನವಿ ಪತ್ರ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಚರಣ್ ಜೀತ ಅಣದೂರೆ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೇತನ್ ಪಾಟೀಲ್,ಬೀದರ್ ತಾಲೂಕ ಅಧ್ಯಕ್ಷರಾದ ದಿನೇಶ ಡೋಂಗರಗಿಕರ್, ತಾಲೂಕ ಸಂಘಟನೆ ಸಂಚಾಲಕರು ಧನರಾಜ್ ಗಣಪತರಾವ್ ಇತರರು ಉಪಸ್ಥಿತರಿದ್ದರು.
ವರದಿ:ರೋಹನ್ ವಾಘಮಾರೆ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.