ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ಶ್ರೀ ಸಿದ್ದು ಮಲ್ಲಿಕಾರ್ಜುನ ಸ್ವಾಮಿ ವಿಶೇಷ ಪೂಜೆ ಕಾರ್ಯಕ್ರಮ ನಡೆಯಿತು ಸಿದ್ದು ಮಲ್ಲಿಕಾರ್ಜುನ ಬೆಟ್ಟದಲ್ಲಿ ಅಮಾವಾಸ್ಯೆ ಪ್ರಯುಕ್ತ ನಡೆದಂತ ಜಾತ್ರಾ ಮಹೋತ್ಸವದಲ್ಲಿ ರಾಜ್ಯದ ನಾನಾ ಮೂಲೆಗಳಿಂದ ಬಂದಂತ ಭಕ್ತಾದಿಗಳು ಸುಮಾರು 3300 ಮೆಟ್ಟಿಲುಗಳ ಏರಿ ಸಿದ್ದು ಮಲ್ಲಿಕಾರ್ಜುನ ಸ್ವಾಮಿ ಮತ್ತು ಭ್ರಮರಾಂಬ ದೇವಿಯ ದರ್ಶನವನ್ನು ಮಾಡಿದರು ಮತ್ತು ಬೆಟ್ಟದ ಮೇಲೆ ಏರಿ ಪ್ರಕೃತಿಯ ಸೌಂದರ್ಯಗಳನ್ನು ಸವಿದು ಭಕ್ತಾದಿಗಳು ದೇವರಲ್ಲಿ ಅವರ ಇಷ್ಟಾರ್ಥವನ್ನು ನೆರವೇರಿಸುವಂತೆ ಕೇಳಿಕೊಂಡರು.ಇಲ್ಲಿಗೆ ಬರುವಂತ ಭಕ್ತಾದಿಗಳು ಮಾತನಾಡಿ ಬೆಟ್ಟ ಮೇಲೆ ಶಿಥಿಲಗೊಂಡಿದ್ದು ಬರುವುದಕ್ಕೆ ಭಯವಾಗುತ್ತದೆ ಎಂದರು ಕುಡಿಯಲು ನೀರು ಹಾಗೂ ಮೂಲಭೂತ ಸೌಲಭ್ಯಗಳನ್ನು ಮಾಡಬೇಕೆಂದು ತಿಳಿಸಿ ಅದು ಅಲ್ಲದೆ ಅಲ್ಲಿರುವ ವ್ಯಾಪಾರಸ್ಥರಿಗೆ ಯಾವುದೇ ಅನುಕೂಲವಿಲ್ಲ ಅಲ್ಲಿ ತಿಂದಂತಹ ಪ್ಲಾಸ್ಟಿಕ್ ಕವರ್ ನೀರಿನ ಬಾಟಲ್ ಗಳಿಂದ ಬೆಟ್ಟವು ಅನೈರ್ಮಲ್ಯಗೊಂಡು ಬೆಟ್ಟದ ಸೌಂದರ್ಯ ಹಾಳಾಗುತ್ತದೆ ಎಂದು ತಿಳಿಸಿದರು ಮತ್ತು ಬರುವಂತಹ ಭಕ್ತಾದಿಗಳು ಅವರ ಅನಿಸಿಕೆಗಳನ್ನು ನಮ್ಮ ವರದಿಗಾರರಿಗೆ ತಿಳಿಸಿದರು.
ವರದಿ-ಆರ್ ಶಂಕರ್,ಹಂಡಿತವಳ್ಳಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.