ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದಿಂದ ತಾಲೂಕಿನ ವಿವಿಧ ಗ್ರಾಮದ ಅಂಗನವಾಡಿ ಕೇಂದ್ರಗಳಿಗೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಯಿಂದ ಅಂಗನವಾಡಿ ಕಾರ್ಯಾಕರ್ತೆ ಪದೋನ್ನತಿ ಮಾಡಲು ಅರ್ಹ ಅಂಗನವಾಡಿ ಸಹಾಯಕಿ ಹಾಗೂ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಯಿತು ಆದರೆ ಈ ಹುದ್ದೆಗಳ ಆಯ್ಕೆಗೆ ಎಸ್ ಎಸ್ ಎಲ್ ಸಿ ಅರ್ಹತೆ ಇದ್ದು ಆದರೆ ಇಲ್ಲಿ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳ ಕಚೇರಿಯ ಕೆಲವು ಜನ ಸಿಬ್ಬಂದಿ ಎಸ್ ಎಸ್ ಎಲ್ ಸಿ ತತ್ಸಮಾನ ಪ್ರಮಾಣ ಪತ್ರವೆಂದು ಯಾವುದೋ ಒಂದು ಮುಕ್ತ ವಿಶ್ವವಿದ್ಯಾಲಯದ ಶಾಲೆಯಿಂದ ಪ್ರಮಾಣ ಪತ್ರ ತಂದು ಲಗತ್ತಿಸಿ ನೌಕರಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ ತತ್ಸಮಾನ ಪ್ರಮಾಣ ಪತ್ರ ನೀಡಿದ ಶಾಲೆಯ ವಿಳಾಸ ಶಾಲೆಯ ನೊಂದಣಿಯನ್ನು ಗೂಗಲ್ ನಲ್ಲಿ ಪರಿಶೀಲಿಸಿದರೆ ಆ ಶಾಲೆಗಳು ಮುಚ್ಚಿವೆ ಎಂದು ತೋರಿಸುತ್ತದೆ ಹೀಗಾಗಿ ಕೊಟ್ಟ ಎಸ್ ಎಸ್ ಎಲ್ ಸಿ ಪ್ರಮಾಣ ಪತ್ರ(ತತ್ಸಮಾನ)ದೊಂದಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಅಂಕಪಟ್ಟಿಯನ್ನು ಕೂಲಂಕುಶವಾಗಿ ತನಿಖೆ ಮಾಡಬೇಕು ತಪ್ಪು ಎಂದು ಕಂಡುಬಂದರೆ ಸಂಬಂಧಿಸಿದ ಅಭ್ಯರ್ಥಿ ಹಾಗೂ ತತ್ಸಮಾನ ಪ್ರಮಾಣ ಪತ್ರ ಕೊಡಿಸಲು ಸಹಕರಿಸಿದ ಸಿಬ್ಬಂದಿಯ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು.
ತತ್ಸಮಾನ ಎಸ್ ಎಸ್ ಎಲ್ ಸಿ ಪ್ರಮಾಣ ಪತ್ರ ಕೊಡಿಸಲು 80000 ದಿಂದ 1 ಲಕ್ಷದವರೆಗೆ ವ್ಯವಹಾರ ನಡೆದಿದೆ ಎಂದು ತಿಳಿದು ಬಂದಿರುತ್ತದೆ
ತತ್ಸಮಾನ ಪ್ರಮಾಣ ಪತ್ರ ಪಡೆದು ಈ ಹಿಂದೆಯೂ ಅಂಗನವಾಡಿ ಕಾರ್ಯಕರ್ತೆಯರು ನೇಮಕವಾಗಿದ್ದು ಅವುಗಳನ್ನು ತನಿಖೆಗೆ ಒಳಪಡಿಸಬೇಕು ಇಂಡಿ ಸಿಡಿಪಿಓ ಕಚೇರಿಯಲ್ಲಿನ ಅಂಗನವಾಡಿ ಕಾರ್ಯಕರ್ತೆಗಳ ಹುದ್ದೆ ಪಡೆಯಲು ಕೊಟ್ಟ ಪ್ರಮಾಣ ಪತ್ರಗಳ ವ್ಯವಹಾರ ನಡೆದಿದ್ದು ಕೂಡಲೇ ತನಿಖೆಯಾಗಬೇಕು ಇಲ್ಲವಾದರೆ ಸಂಘಟನೆಯಿಂದ ಜಿಲ್ಲಾಧ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಧರ್ಮರಾಜ್ ಎಸ್ ಸಾಲುಟಿಗಿ ಜಿಲ್ಲಾ ಅಧ್ಯಕ್ಷರು ದಲಿತ ರಕ್ಷಣಾ ವೇದಿಕೆ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ:ಅರವಿಂದ್ ಕಾಂಬಳೆ
