ಮಹಾರಾಷ್ಟ:ರಾಜ್ಯದಲ್ಲಿ ಕೋಟ್ಯಾಂತರ ಕನ್ನಡಿಗರು ನಲೆಸಿದ್ದಾರೆ ಮೂಲಭೂತ ಶಿಕ್ಷಣ ಹಕ್ಕು ಕಸಿದುಕೊಂಡಿದೆ ಯಾವ ಪ್ರದೇಶದಲ್ಲಿ ಬಹುಸಂಖ್ಯಾತ ಜನ ಇರುವ ಕಡೆ ಅದೇ ಭಾಷೆಯ ಶಿಕ್ಷಕರನ್ನು ನೇಮಕ ಮಾಡಬೇಕು ಕೇರಳ ಹೈಕೋರ್ಟ್ ತೀರ್ಪು ನೀಡಿದೆ ಕೇರಳದಲ್ಲಿ ಕನ್ನಡಿಗರು ನೆಲೆಸಿರುವ ಕಾಸರಗೋಡು ಹಾಗೂ ಮಂಜೇಶ್ವರ ಇನ್ನಿತರ ಪ್ರದೇಶಗಳಲ್ಲಿ ಹೆಚ್ಚಾಗಿದ್ದಾರೆ ಕನ್ನಡ ಶಾಲೆಗಳಲ್ಲಿ ಒತ್ತಾಯ ಪೂರ್ವಕವಾಗಿ ಮಲಿಯಾಳಿ ಶಿಕ್ಷಕರನ್ನು ನೇಮಕ ಮಾಡಿದ ಕೇರಳ ಸರ್ಕಾರದ ವಿರುದ್ಧ ಪ್ರತಿಭಟಿಸಿ ವಿದ್ಯಾರ್ಥಿಗಳು ಕನ್ನಡಿಗರು ಕೇರಳ ಹೈಕೋರ್ಟ್ ಗೆ ಮನವಿ ಸಲ್ಲಿಸಿದರು ಕನ್ನಡಿಗರ ಪರವಾಗಿ ಜಯ ಲಭಿಸಿದೆ ಆದರೆ ಮಹಾರಾಷ್ಟ್ರ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚಿ ಮರಾಠಿ ಶಾಲೆಗಳನ್ನು ತೆರೆಯುವ ಹುನ್ನಾರ ನಡೆಯುತ್ತಿದೆ ಕಳೆದ 13-15 ವರುಷಗಳಿಂದ ಕನ್ನಡ ಮಾಧ್ಯಮ ಶಿಕ್ಷಕರ ನೇಮಕಾತಿ ಆಗಿಲ್ಲ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ದಕ್ಷಿಣ ಸೊಲ್ಲಾಪುರ ಜತ್ತ ಸೋಲ್ಲಾಪೂರ ನಗರದಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿಧ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಆದರೆ ಶಿಕ್ಷಕರ ಕೊರತೆ ಕಾಡುತ್ತಿದೆ.
2019 ರಿಂದ 2020 ಜನಗಣತಿಯಲ್ಲಿ ತ 30,000 ಸಾವಿರ ವಿಧ್ಯಾರ್ಥಿಗಳಿಗೆ 1,100 ಶಿಕ್ಷಕರು 260 ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಇನ್ನೂ ಸುಮಾರು 500 ಕ್ಕೂ ಹೆಚ್ಚು ಶಿಕ್ಷಕರ ಅಗತ್ಯವಿದೆ ಆದರೆ 2010 ನಂತರ ಕನ್ನಡ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಮಾಡಿಲ್ಲ ಇದರ ಪರಿಣಾಮದಿಂದ ಕನ್ನಡ ಶಾಲೆಗೆ ದಾಖಲಾತಿ ಇಳಿಮುಖವಾಗಿದೆ ಪ್ರವೇಶ ನೆಪ ಮಾಡಿಕೊಂಡ ಮಹಾರಾಷ್ಟ ಸರ್ಕಾರ ಶಾಲೆಗಳನ್ನು ಮುಚ್ಚಲು ಮುಂದಾಗಿದೆ ಕನ್ನಡಿಗರು ಹೆಚ್ಚಾಗಿರುವ ಅಕ್ಕಲಕೋಟ ದಕ್ಷಿಣ ಸೋಲಾಪೂರ,ಜತ್ತ ಉಮರ್ಗಿ ಸೇರಿ ಹಲವು ಕಡೆ 80-90 ದಶಕದಲ್ಲಿ ಪ್ರತಿ ಗ್ರಾಮದಲ್ಲಿ ಕನ್ನಡ ಶಾಲೆಗಳು ಇದ್ದವು ಮಹಾರಾಷ್ಟ್ರ ಸರ್ಕಾರ ಕುತಂತ್ರದಿಂದ ಕನ್ನಡ ಶಾಲೆಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಿದೆ. ಕರ್ನಾಟಕ ಸರ್ಕಾರ ಮರಾಠಿ ಶಾಲೆಗಳಿಗೆ ಶಿಕ್ಷಕರ ಕೊರತೆ ನೀಗಿಸಿದೆ ಉತ್ತಮವಾದ ಶಾಲಾ ಕಟ್ಟಡವನ್ನು ನಿರ್ಮಾಣ ಮಾಡಿದೆ ಮರಾಠಿ
ಶಾಲೆಗಳಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಿ ಕೊಡುತ್ತಿದೆ ಆದರೆ ಮಹಾರಾಷ್ಟ್ರ ಸರ್ಕಾರ ಕನ್ನಡಿಗರ ಹಾಗೂ ಕನ್ನಡ ಶಾಲೆಗಳ ಮೇಲೆ ಗದಾಪ್ರಹಾರ ನಡೆಸಿದೆ.
ಅಕ್ಕಲಕೋಟೆ ಶಾಲೆಗಳು 103
ವಿಧ್ಯಾರ್ಥಿಗಳು 15,000
ಶಿಕ್ಷಕರು 550.
ಜತ್ತ ಶಾಲೆಗಳು 125
ವಿಧ್ಯಾರ್ಥಿಗಳು 13.000
ಶಿಕ್ಷಕರು 456
ದಕ್ಷಿಣ ಸೋಲಾಪೂರ 25 ಶಾಲೆಗಳು
2.000 ಶಿಕ್ಷಕರು 100.
ಜಯಸಿಂಗಪೂರ ಶಾಲೆಗಳು 02
ವಿದ್ಯಾರ್ಥಿಗಳು 250 ಶಿಕ್ಷಕರು 09
ಮಿರಜ ಶಾಲೆಗಳು 04
ವಿದ್ಯಾರ್ಥಿಗಳು 500 ಶಿಕ್ಷಕರು 10
ಹೀಗೆ ಕನ್ನಡಿಗರ ರೋಧನೆ ಹೇಳತೀರದು ವಿಪರ್ಯಾಸ ವಿಷಯವೆಂದರೆ ಕನ್ನಡಿಗರ ಪರವಾಗಿ ನಾಯಕರ ಕೊರತೆ ಒಗ್ಗಟ್ಟಿನ ಕೊರತೆ ಎದ್ದುಕಾಣುತ್ತದೆ ಇನ್ನಾದರೂ ಕನ್ನಡಿಗರು ಹೋರಾಟ ಹಾಗೂ ರಾಜಕೀಯದಲ್ಲಿ ಸೇರಬೇಕಾಗಿದೆ ಅಂದಾಗ ಮಾತ್ರ ಕನ್ನಡಿಗರಿಗೆ ನ್ಯಾಯ ಸಿಗಲು ಸಾಧ್ಯ ಕನ್ನಡಿಗರ ಸ್ವಾಭಿಮಾನ ಎತ್ತಿಹಿಡಿಯಬೇಕಾಗಿದೆ ಮಹಾರಾಷ್ಟ್ರ ನೆಲದಲ್ಲಿ ಅಸ್ತಿತ್ವ ಉಳಿಯಲು ಸಾಧ್ಯ ಕನ್ನಡಿಗರ ಪರವಾಗಿ ಹೋರಾಟ ಮಾಡುತ್ತಿರುವ ಆದರ್ಶ ಕನ್ನಡ ಬಳಗ ಅಧ್ಯಕ್ಷ ರಾದ ಮಲಿಕ್ ಜಾನ ಶೇಖ್ ರಾಜೇಂದ್ರ ಬಿರಾದಾರ ಮುಂತಾದವರು ಕನ್ನಡ ಶಾಲೆಗಳ ಉಳಿವಿಗಾಗಿ ಹೋರಾಟ ನಡೆಸಿದ್ದಾರೆ ಕರ್ನಾಟಕ ಸರ್ಕಾರ ಮಹಾರಾಷ್ಟ ಕನ್ನಡಿಗರ ಸಹಾಯಕ್ಕೆಬರಬೇಕಾಗಿದೆ.
ಲೇಖಕರು-ದಯಾನಂದ ಪಾಟೀಲ,ಅಧ್ಯಕ್ಷರು, ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ