ಹನೂರು:ತಾಲೂಕಿನ ಪಿ.ಜಿ ಪಾಳ್ಯ ಗ್ರಾಮದಲ್ಲಿ ವಾಹನ ಚಾಲಕರು ಮತ್ತು ಮಾಲೀಕರ ಒಕ್ಕೂಟ ವತಿಯಿಂದ 50ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಸಂಭ್ರಮ ಸಡಗರದಿಂದ ಆಚರಣೆ ಮಾಡಿದರು.
ಧ್ವಜಾರೋಹಣವನ್ನು ಶಾಸಕರಾದ ಎಂ.ಆರ್.ಮಂಜುನಾಥ್ ಅವರು ನೆರವೇರಿಸಿ ನಂತರ ಮಾತನಾಡಿ ಕನ್ನಡ ಆಚರಣೆಯನ್ನು ಸಂಭ್ರಮಿಸೋಣ ಕನ್ನಡವನ್ನು ಉಸಿರಾಡೋಣ ಇಂತಹ ವಾಕ್ಯವನ್ನು ಬಹಳ ಅರ್ಥಪೂರ್ಣವಾಗಿ ಹಿರಿಯರು ತಿಳಿಸಿಕೊಟ್ಟಿದ್ದಾರೆ.
ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳು ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು ಹಿರಿಮೆಯ ಮಹಾನ್ ಕವಿಗಳು ಅವರ ಚಿಂತನೆಗಳು ಸಾಧಕರು ಎಲ್ಲವನ್ನೂ ಅರ್ಥಪೂರ್ಣವಾಗಿ ಕನ್ನಡದ ಬಗ್ಗೆ ಬಹಳಷ್ಟು ಸಾಹಿತ್ಯದ ಮೂಲಕ ತಿಳಿಸಿಕೊಟ್ಟಿದ್ದಾರೆ. ಕನ್ನಡ ಭಾಷೆಗೆ ಮೆರಗನ್ನು ತಂದು ಕೊಡುವಂತಹ ಕೆಲಸವನ್ನು ಮಾಡಿದ್ದಾರೆ.ನಮ್ಮ ಕ್ಷೇತ್ರದ ಗಡಿ ಭಾಗದಲ್ಲಿ ಕನ್ನಡ ಅಭಿಮಾನ ಉಳಿಸಿಕೊಂಡು ಬೆಳೆಸುವುದು ಶ್ಲಾಘನೀಯ ಈ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆ ಮಾಡಿರುವುದು ಹೋಬಳಿ ಮಟ್ಟಕ್ಕೆ ಮಾದರಿಯಾಗಿದೆ. ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದಾರ ಇದು ಹೀಗೆ ಮುಂದೆಯೂ ಸಹ ಕನ್ನಡ ಅಭಿಮಾನ ಕನ್ನಡ ಭಾಷೆಗೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.ಕಾರ್ಯಕ್ರಮದ ನಂತರ ಪಿಜಿ ಪಾಳ್ಯ ಗ್ರಾಮದಿಂದ ಆಟೋ ಟ್ರ್ಯಾಕ್ಟರ್ ಟೆಂಪೋ ಬೈಕ್ ಗಳಿಗೆ ಕನ್ನಡ ಬಾವುಟವನ್ನು ಕಟ್ಟಿಕೊಂಡು ವಿಶೇಷವಾಗಿ ಶ್ರೀ ಭುವನೇಶ್ವರಿ ತಾಯಿ,ಡಾಕ್ಟರ್ ಪುನೀತ್ ರಾಜಕುಮಾರ್ ಹಾಗೂ ಶಂಕರ್ ನಾಗ್ ಅವರ ಭಾವಚಿತ್ರವನ್ನು ಟೆಂಪೋಗಳಿಗೆ ಕಟ್ಟಿಕೊಂಡು ಹೂಗಳಿಂದ ಅಲಂಕಾರ ಮಾಡಿ ಮೆರವಣಿಗೆ ಸಾಗಿತು.ವಾದ್ಯ ತಮಟೆ ಸದ್ದಿನೊಂದಿಗೆ ಮೆರವಣಿಗೆ ವಿಜೃಂಭಣೆಯಿಂದ ಸಾಗಿ ಒಡೆಯರಪಾಳ್ಯ ಮುಖ್ಯ ರಸ್ತೆಯಿಂದ ತಮಿಳುನಾಡು ಗಡಿರೇಖೆ ಅರ್ಧನಾರಿಪುರ ಗ್ರಾಮದವರೆಗೆ ಸಾಗಿತು.
ಈ ಸಂಧರ್ಭದಲ್ಲಿ ಪಂಚಾಯತಿ ಅಧ್ಯಕ್ಷ ಸಂತೋಷ್ ಕುಮಾರ್,ಒಡೆಯರ ಪಾಳ್ಯ ಮಲೆ ಮಹದೇಶ್ವರ ಕಾಲೇಜು ಪ್ರಾಂಶುಪಾಲರು ಶಿವಸ್ವಾಮಿ,ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ,ಗ್ರಾಮ ಪಂಚಾಯತಿ ಸದಸ್ಯರು ಸಿ.ಮಹದೇವಸ್ವಾಮಿ,ಅರಣ್ಯ ಇಲಾಖೆ ಸೋಮೇಂದ್ರ ಗ್ರಾಮಸ್ಥರು ಹಾಗೂ ವಾಹನ ಚಾಲಕರು ಹಾಗೂ ಮಾಲೀಕರು ಉಪಸ್ಥಿತರಿದ್ದರು.
ವರದಿ:ಉಸ್ಮಾನ್ ಖಾನ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.