ಯಾದಗಿರಿ:ಕಡ್ಡಾಯವಾಗಿ ಎಲ್ಲಾ 5 ವರ್ಷದೊಳಗಿನ ಮಕ್ಕಳಿಗೆ ಒಆರ್‌ಎಸ್-ಜಿಂಕ್ ಮಾತ್ರೆಗಳನ್ನು ನುಂಗಿಸಿ ಅತೀಸಾರ ನೀರ್ಜಲಿಕರಣ ಮುಕ್ತವಾಗಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಪ್ರಭುಲಿಂಗ ಮಾನಕರ ಅವರು ತಿಳಿಸಿದರು.
ಜಿಲ್ಲಾಡಳಿತ,ಜಿಲ್ಲಾ ಪಂಚಾಯತ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ರಾಠಿ ನವಜೀವನ ಶಿಕ್ಷಣ ಸಂಸ್ಥೆ ಅಡಿಯಲ್ಲಿರುವ ಸಾರ್ವಜನಿಕ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಐಡಿಸಿಎಫ್ ತೀವೃತರ ಅತಿಸಾರಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾಧ್ಯಂತ ಇದೇ ನವೆಂಬರ್ 28ರ ವರೆಗೆ ತೀವೃತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ನಿಯಂತ್ರಣ ಕಾರ್ಯಕ್ರಮ ನಡೆಯಲಿದ್ದು ಪ್ರತಿ ನಗರ ಮತ್ತು ಗ್ರಾಮಗಳಲ್ಲಿ 0-5 ವರ್ಷದ ಮಕ್ಕಳನ್ನು ಗುರುತಿಸಿ ಅತೀಸಾರ ನೀರ್ಜಲಿಕರಣದಿಂದ ಉಂಟಾಗುವ ಸಾವುಗಳನ್ನು ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ತೀವೃತರವಾದ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಬೇಕಾಗಿರುತ್ತದೆ ಕೈಗಳನ್ನು ತೊಳೆಯುವ ಸರಿಯಾದ 6 ವಿಧಾನಗಳನ್ನು ಬಳಸಬೇಕು ಶೌಚಾಲಯ ಬಳಸಿದ ನಂತರ, ಮಗುವಿನ ಮಲ ಶುಚಿ ಮಾಡಿದ ನಂತರ,ಆಹಾರ ಸೇವಿಸುವ ಮೊದಲು,ಕೊಳೆ,ಕಸ ಮತ್ತು ಪ್ರಾಣಿಗಳನ್ನು ಮುಟ್ಟಿದ ನಂತರ,ಅಡುಗೆ ಮಾಡುವ ಮೊದಲು,ಮಗುವಿಗೆ ಹಾಲುಣಿಸುವ ಮೊದಲು ಸರಿಯಾದ ರೀತಿಯಲ್ಲಿ ಕೈ ತೊಳೆದುಕೊಳ್ಳುವ ಮೂಲಕ ಹಲವಾರು ಕಾಯಿಲೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು ವೈಯಕ್ತಿಕ ಸ್ವಚ್ಛತೆ, ಕುಡಿಯುವ ನೀರಿನ ಸ್ವಚ್ಛತೆ,ಆಹಾರದ ಸ್ವಚ್ಛತೆ, ಪರಿಸರದ ಸ್ವಚ್ಛತೆ ಕಡೆ ಗಮಹರಿಸಬೇಕು ಎಂದು ಅವರು ತಿಳಿಸಿದರು.ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ.ಮಲ್ಲಪ್ಪ ಕೆ ನಾಯ್ಕಲ್ ಅವರು ಮಾತನಾಡಿ, ಜಿಲ್ಲೆಯಲ್ಲಿ 5 ವರ್ಷದ ಒಳಗಿನ ಮಕ್ಕಳು 194289 ರಷ್ಟು ಗುರಿಯನ್ನು ಹೊಂದಿದ್ದಿ,ಓ.ಆರ್.ಎಸ್ ಮತ್ತು ಜಿಂಕ್ ಅತೀಸಾರ ಭೇದಿ ಚಿಕಿತ್ಸೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ.ಓ.ಆರ್.ಎಸ್ ನಿರ್ಜಲೀಕರಣವನ್ನು ತಪ್ಪಿಸಲು ಭೇದಿ ನಿಲ್ಲುವವರೆಗೆ ನೀಡುವುದು.ಜಿಂಕ್ ಮಾತ್ರೆ ದಿನಕ್ಕೆ 1 ರಂತೆ 14 ದಿನಗಳವರೆಗೆ ನೀಡುವುದು ಇದು ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು 3 ತಿಂಗಳ ವರೆಗೆ ಭೇದಿಯಾಗದಂತೆ ತಡೆಯುತ್ತದೆ ನಿಮ್ಮ ಮಗುವಿಗೆ ಓ.ಆರ್.ಎಸ್ ಮತ್ತು ಜಿಂಕ್‌ನ ಸುರಕ್ಷತೆಯನ್ನು ನೀಡಿ ನಿರ್ಜಲೀಕರಣದ ಲಕ್ಷಣಗಳು ಈ ಕೆಳಕಂಡಂತೆ ಇರುತ್ತದೆ,ಮಗು ಚಡಪಡಿಕೆ,ರಚ್ಚೆ ಹಿಡಿಯುವಿಕೆ, ಮಂಪರು ಅಥವಾ ಎಚ್ಚರ ತಪ್ಪಿದ್ದರೆ, ಕಣ್ಣುಗಳು ಗುಳಿಬಿದ್ದಂತೆ ಕಂಡು ಬಂದರೆ,ಮಗುವು ಅತೀವ ಬಾಯಾರಿಕೆ ಅಥವಾ ನೀರು ಕುಡಿಯಲು ಸಾಧ್ಯವಾಗದ ಪರಿಸ್ಥಿತಿ ಇದ್ದರೆ (2 ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅನ್ವಯಿಸುವುದಿಲ್ಲ), ಚರ್ಮವನ್ನು ಮೆಲ್ಲಗೆ ಚಿವುಟಿದಾಗ ಅದು ತಮ್ಮ ಮೊದಲ ಸ್ಥಿತಿಗೆ ನಿಧಾನವಾಗಿ ಬರುತ್ತದೆ (ಚರ್ಮದ ಸ್ಥಿತಿಸ್ಥಾಪಕ ಶಕ್ತಿ ಕಡಿಮೆಯಾಗಿರುವಿಕೆ) ಓಆರ್‌ಎಸ್ ದ್ರಾವಣದ ಉಪಯುಕ್ತತೆಗಳು, ಶರೀರದಲ್ಲಿ ಲವಣ ಮತ್ತು ಅಗತ್ಯವಾದ ಪೋಷಕಾಂಶಗಳ ಕೊರತೆಯನ್ನು ನೀಗಿಸುತ್ತದೆ, ವಾಂತಿ ಮತ್ತು ಅತಿಸಾರ ಭೇದಿಯನ್ನು ಕಡಿಮೆ ಮಾಡುತ್ತದೆ,ನೀರಿನ ಅಂಶವನ್ನು ಮರುಪೂರಣ ಮಾಡುತ್ತದೆ ಮತ್ತು ಭೇದಿಯಿಂದ ಗುಣಮುಖರಾಗುವುದನ್ನು ತ್ವರಿತಗೊಳಿಸುತ್ತದೆ. ಜಿಂಕ್ ಮಾತ್ರೆಯ ಉಪಯುಕ್ತತೆಗಳು,ಭೇದಿಯ ಅವಧಿ ಮತ್ತು ತೀವ್ರತೆಯನ್ನು ಕಡಿಮೆ ಮಾಡುತ್ತದೆ, 3 ತಿಂಗಳ ವರೆಗೆ ಭೇದಿಯಿಂದ ರಕ್ಷಣೆ ನೀಡುತ್ತದೆ, ದೀರ್ಘಾವಧಿಯವರೆಗೆ ರೋಗ ನಿರೋಧಕ ಶಕ್ತಿಯನ್ನು ಉಂಟು ಮಾಡುತ್ತದೆ ಎಂದು ಅವರು ತಿಳಿಸಿದರು.ಇದೇ ಸಂದರ್ಭದಲ್ಲಿ ಸಿ.ಆರ್.ಪಿ ರವಿಚಂದ್ರ ನಾಯ್ಕಲ್,ತಾಲೂಕ ಆರೋಗ್ಯ ಅಧಿಕಾರಿಗಳು ಡಾ.ಹಣಮಂತ ರೆಡ್ಡಿ ಯಾದಗಿರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ತುಳಸಿರಾಮ ಚವ್ಹಾಣ್,ಆರೋಗ್ಯ ಇಲಾಖೆ ಅಧಿಕಾರಿ,ಸಿಬ್ಬಂದಿಗಳು ಹಾಗೂ ಶಾಲಾ ಶಿಕ್ಷಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ:ಶಿವರಾಜ ಸಾಹುಕಾರ ವಡಗೇರಾ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.