ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ವೈದ್ಯರು,ಹಾಗೂ ನರ್ಸ್ ಯಾರು ಇಲ್ಲದೆ ರೋಗಿಗಳು ಪರದಾಡುವಂತಾಗಿದೆ.
ಬಂಡಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಕ್ಕಪಕ್ಕದ ಹಳ್ಳಿಗಳಾದ ಹಲಗಾಪುರ , ಮಣಗಳ್ಳಿ,ಹಣಗಳ್ಳಿ ದೊಡ್ಡಿ ಮುಂತಾದ ಸುತ್ತಮುತ್ತ ಇರುವ ಹಳ್ಳಿಗಳಿಗೆ ಬಂಡಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎಲ್ಲಾ ರೋಗಿಗಳು ಸಹ ಬರಬೇಕಾಗುತ್ತದೆ,ಆದರೆ ಇಲ್ಲಿ ಬೆಳಗ್ಗೆಯಿಂದ ಯಾವುದು ವೈದ್ಯರು,ನರ್ಸ್ ಗಳು ಯಾರೂ ಸಹ ಇಲ್ಲದೆ ಬಡ ರೋಗಿಗಳು ಔಷಧಿ ಪಡೆಯಲು ತುಂಬಾ ಕಷ್ಟಕರವಾಗಿದೆ.
ಕೂಡಲೇ ಸೂಕ್ತ ವೈದ್ಯರು ಸೂಚಿಸಿ ಬಂಡಳ್ಳಿ ಆರೋಗ್ಯ ಕೇಂದ್ರ ಸುತ್ತಮುತ್ತಲಿನ ಹಳ್ಳಿಗಳ ಬಡ ರೋಗಿಗಳಿಗೆ ಔಷಧಿ ಸಿಗುವಂತೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ರೋಗಿಗಳ ನೆರವಿಗೆ ಬರಬೇಕೆಂದು ಬಂಡಳ್ಳಿಗ್ರಾಮ ಪಂಚಾಯಿತಿ ಸದಸ್ಯರಾದ ತಮ್ಮಯ್ಯ ರಾಜು ಒತ್ತಾಯಿಸಿದರು.
ವರದಿ ಉಸ್ಮಾನ್ ಖಾನ್
