ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜನಪರ ಉತ್ಸವ ಕಾರ್ಯಕ್ರಮ

ಯಾದಗಿರಿ:ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಸಂಭ್ರಮ-50ರ ಅಂಗವಾಗಿ ಜನಪರ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳು ನಾಳೆ ಬೆಳಿಗ್ಗೆ 11 ಗಂಟೆಗೆ ಯಾದಗಿರಿ ಯರಗೋಳ ಶ್ರೀ ಹನುಮಾನ ದೇವಸ್ಥಾನದ ಹತ್ತಿರ ಸಮುದಾಯ ಭವನದಲ್ಲಿ ಜನಪರ ಉತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರದೇವಿ ಎಸ್.ಮಠಪತಿ ಅವರು ತಿಳಿಸಿದ್ದಾರೆ ಬೆಳಿಗ್ಗೆ 8.30 ಗಂಟೆಗೆ ಭವ್ಯ ಮೆರವಣಿಗೆ ಕನ್ನಡ ತಾಯಿ ಭುವನೇಶ್ವರಿ ವೃತ್ತದಿಂದ ಸಮುದಾಯ ಭವನದವರೆಗೆ ಆಯೋಜಿಸಲಾಗಿದೆ.
ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶರಣಬಸಪ್ಪಗೌಡ ದರ್ಶನಾಪೂರ ಅವರು ಉದ್ಘಾಟಿಸುವರು.
ಗುರುಮಠಕಲ್ ವಿಧಾನಸಭಾ ಶಾಸಕ ಶ್ರೀ ಶರಣಗೌಡ ಕಂದಕೂರ ಕಾರ್ಯಕ್ರಮ ಅಧ್ಯಕ್ಷತೆ ವಹಿಸುವರು.ರಾಯಚೂರು ಲೋಕಸಭಾ ಸದಸ್ಯರು ಶ್ರೀ ರಾಜಾ ಅಮರೇಶ್ವರ ನಾಯಕ,ಕಲಬುರಗಿ ಲೋಕಸಭಾ ಸದಸ್ಯರು ಡಾ.ಉಮೇಶ ಜಿ.ಜಾಧವ ಮುಖ್ಯ ಅತಿಥಿಗಳಾಗಿ ಆಗಮಿಸುವರು.ವಿಧಾನ ಪರಿಷತ್ತು ಸದಸ್ಯರು ಶ್ರೀ ಬಿ.ಜಿ.ಪಾಟೀಲ್, ಡಾ.ಚಂದ್ರಶೇಖರ ಬಿ.ಪಾಟೀಲ್,ಶ್ರೀ ಶಶೀಲ್ ಜಿ.ನಮೋಶಿ,ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ, ಸುರಪುರ ವಿಧಾನಸಭಾ ಶಾಸಕ ಶ್ರೀ ರಾಜಾ ವೆಂಕಟಪ್ಪನಾಯಕ,ಯಾದಗಿರಿ ವಿಧಾನಸಭಾ ಶಾಸಕ ಶ್ರೀ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅತಿಥಿಗಳಾಗಿ ಪಾಲ್ಗೊಳ್ಳುವರು.ಯರಗೊಳ ಗ್ರಾಮ ಪಂಚಾಯತ ಅಧ್ಯಕ್ಷರು ಶ್ರೀ ರಾಮಲಿಂಗಪ್ಪ ಎಸ್.ಅಲಿಪೂರ,ಯರಗೊಳ ಗ್ರಾಮ ಪಂಚಾಯತ ಶ್ರೀ ಮತಿ ಜೈನಾಬಾಯಿ ವಿಠಲ ರಾಠೋಡ ಆಹ್ವಾನಿತರಾಗಿ ಆಗಮಿಸುವರು.ಯಾದಗಿರಿ ಜಿಲ್ಲಾಧಿಕಾರಿ ಶ್ರೀಮತಿ ಡಾ.ಸುಶೀಲ.ಬಿ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಗರಿಮಾ ಪನ್ವಾರ್,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಜಿ.ಸಂಗೀತಾ,ಕಲಬುರಗಿ ವಲಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರು ಶ್ರೀ ಕೆ.ಹೆಚ್ ಚೆನ್ನೂರ,ಯಾದಗಿರಿ ತಹಸೀಲ್ದಾರರು ಶ್ರೀ ಸುರೇಶ ಅಂಕಲಗಿ,ಯರಗೊಳ ಗ್ರಾಮ ಪಂಚಾಯತ್ ಪಂಚಾಯತ ಅಭಿವೃದ್ಧಿ ಅಧಿಕಾರಿ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.

ಸಾಂಸ್ಕೃತಿಕ ಕಾರ್ಯಕ್ರಮಗಳು:
ರಂಗ ಗೀತೆ ಶ್ರೀ ಸುಭಾಷ ದೋರನಹಳ್ಳಿ,ಜನಪದ ಗೀತೆ ಶ್ರೀ ಶರಣಪ್ಪ ತೊರಣಕರ್,ಸುಗಮ ಸಂಗೀತ ಡಾ.ತಿಮ್ಮಣ್ಣ ಭೀಮರಾಯ,ವಚನಗಾಯನ ಶ್ರೀ ಶಂಕರ ಶಾಸ್ತ್ರಿ,ಭಾವಗೀತೆ ಶ್ರೀ ಯಮುನೇಶ ಯಾಳಗಿ,ಪಾರಿಜಾತ ಭಜನೆ ಶ್ರೀಮತಿ ಬಸ್ಸಮ್ಮ ಮರೆಪ್ಪ ಹಾಗೂ ಸಂಗಡಿಗರು,ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕು.ಅಂಬಾಮಹೇಶ್ವರಿ, ಕೊಳಲು ಶ್ರೀದೇವಿಂದ್ರ ಹುಲಕಲ್ (ಜೆ),ಬುರ್ರ ಕಥೆ ಶ್ರೀಮತಿ ಕೃಷ್ಣಮ್ಮ ಮತ್ತು ತಂಡ,ತತ್ವಪದ ಶ್ರೀ ಪಂಡಿತ ನಾಗಮೂರ್ತಿ,ಭರತ ನಾಟ್ಯ ಶ್ರೀ ಅನಿಲಕುಮಾರ ಮತ್ತು ತಂಡ,ಸಮೂಹ ನೃತ್ಯ ಶ್ರೀ ಕು.ಸೌಭಾಗ್ಯ ಎಂ ಕಟ್ಟಿಮನಿ,ಸಾಮಾಜಿಕ ನಾಟಕ ಶ್ರೀಮತಿ ಅಂಬಿಕಾ ಚಿರಂಜೀವಿ ಮತ್ತು ತಂಡ (ತಾಯಿ ಕರಳು ಅರ್ಥಾತ್‌ಸೊಕ್ಕಿನ ಸೊಸೆ), ಸಂಪ್ರದಾಯ ಪದಗಳು ಶ್ರೀಮತಿ ಮಾಲಾ ಶ್ರೀ ಭೀಮಾಶಂಕರ,ಶಾಸ್ತ್ರೀಯ ಸಂಗೀತ ಶ್ರೀ ಯಲ್ಲಪ್ಪ ಗುಂಡಳ್ಳಿ,ತತ್ವಪದ ಶ್ರೀ ಯಲ್ಲಪ್ಪ ಹುಂಡೆಕಲ್ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.ಜನಪದ ಕಲಾ ತಂಡಗಳು ಪ್ರದರ್ಶನ ಜಗ್ಗಲಿಗೆ ಶ್ರೀ ಬಸ್ಸಪ್ಪ ಯಲ್ಲಪ್ಪ ಹಂಚಿನಮನಿ,ಡೊಳ್ಳು ಕುಣಿತ ಶ್ರೀ ಹಯ್ಯಾಳಪ್ಪ ಹಣಮಂತ ಮತ್ತು ತಂಡ,ಚಿಲಿಪಿಲಿ ಗೊಂಬೆ ಶ್ರೀ ಅಮರೇಶ ಹಸಮಕಲ್ ಮತ್ತು ತಂಡ,ಲಂಬಾಣಿ ನೃತ್ಯ ಶ್ರೀಮತಿ ಮೀರಾಬಾಯಿ ಮತ್ತು ತಂಡ, ಶಹನಾಯಿ ವಾದನ ಶ್ರೀಹೊನ್ನಪ್ಪ ಮಾನ್ಪಡೆ ಮತ್ತು ತಂಡ,ಗಾರುಡಿ ಗೊಂಬೆ ಶ್ರೀ ಹಣಮಂತ ಮತ್ತು ತಂಡದಿಂದ ನಡೆಯಲಿದೆ.
ವರದಿ:ಶಿವರಾಜ ಸಾಹುಕಾರ ವಡಗೇರಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ