ಬೀದರ್:ಕರ್ನಾಟಕ ದಲಿತ ರಕ್ಷಣಾ ವೇದಿಕೆ ವತಿಯಿಂದ ಬೀದರ್ ನಗರದಲ್ಲಿ 75ನೇ ಸಂವಿಧಾನ ಅಂಗೀಕಾರ ದಿನಾಚರಣೆ ಅಂಗವಾಗಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಖಂಡ್ರೆ ಜಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಂವಿಧಾನವು ಎಲ್ಲರಿಗೂ ಸ್ವತಂತ್ರ,ಸಮಾನತೆಯ ಹಕ್ಕು,ಗೌರವ ನೀಡಿದೆ ಎಂಬ ವಿಷಯದಲ್ಲಿ ಮಾತನಾಡಿದರು ಹಾಗೂ ಅದೇ ರೀತಿಯಲ್ಲಿ ಸಚಿವರಾದ ಶ್ರೀ ರಹೀಮ್ ಖಾನ್ ರವರು ಸಂವಿಧಾನ ಮೂಲಕವೇ ನಾವಿಂದು ಮಂತ್ರಿ ಆಗಲು ಕಾರಣ,ನಾನು ಹಿಂದುಳಿದ ವರ್ಗಗಳ ದ್ವನಿಯಾಗಿ ಇರುತ್ತೇನೆ, ಅವರ ಎಳಿಗೆಗಾಗಿ ನಾನು ಶ್ರಮಿಸುತ್ತೇನೆ ಎಂದು ನುಡಿದರು.ಹಾಗೂ ಅದೇ ರೀತಿಯಾಗಿ ಸಮಾಜಕ್ಕೆ ಸೇವೆ ನೀಡಿದ ಗಣ್ಯ ವ್ಯಕ್ತಿಗಳಿಗೆ ಸನ್ಮಾನಿಸಲಾಯಿತು ಕಾರ್ಯಕ್ರಮಕ್ಕೆ ವಿಶೇಷವಾಗಿ ಮುಂಬೈನಿಂದ ಬಂದಂತಹ ಕಲಾವಿದರಿಂದ ಭೀಮ ಗೀತೆ ಹಾಡುಗಳ ಮುಖಾಂತರ ಕಾರ್ಯಕ್ರಮ ನಡೆಯಿತು ಈ ಸಂಧರ್ಭದಲ್ಲಿ ದಿವ್ಯ ಸಾನಿಧ್ಯ ಪೂಜ್ಯ ಭಂತೆ ವರಜ್ಯೋತಿ,ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಬಿ.ಖಂಡ್ರೆ , ಮಾನ್ಯ ಪೌರಾಡಳಿತ ಹಾಗೂ ಹಜ್ ಸಚಿವರಾದ ಶ್ರೀ ರಹೀಮ್ ಖಾನ್,ವಿಧಾನ ಪರಿಷತ್ ಸದಸ್ಯರಾದ ಶ್ರೀ ಅರವಿಂದ್ ಕುಮಾರ್ ಅರಳಿ,ಮಾಜಿ ಜಿ. ಪಂ. ಸದಸ್ಯರಾದ ಶ್ರೀ ಅಮೃತ್ ರಾವ್ ಚಿಮಕೋಡೆ, ದಲಿತ ಮುಖಂಡರಾದ ಶ್ರೀ ಅನಿಲ್ ಕುಮಾರ್ ಬೆಲ್ದರ,ಯುವ ನಾಯಕರಾದ ಶ್ರೀ ವಿನೋದ್ ಅಪ್ಪೆ,
ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಅಂಬಾದಾಸ ಗಾಯಕವಾಡ್,ಉಪಾಧ್ಯಕ್ಷರಾದ ಧೂಳಪ್ಪ ಯದ್ಲಾಪುರ್
ಪ್ರಧಾನ ಕಾರ್ಯದರ್ಶಿ ಅಂಬೇಡ್ಕರ್,ಜಗನ್ನಾಥ್. ಡಿ.ಗ್ರೂಪ್ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಬೀರು ಸಿಂಗ್ ಹಲವಾರು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ವರದಿ:ದೀಪಕ್ ಗಾಯಕವಾಡ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.