ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಬಂಡಳ್ಳಿ ವಲಯ ಹಲಗಪುರ ಕಾರ್ಯಕ್ಷೇತ್ರದ ಶ್ರೀಮತಿ ಲಕ್ಷ್ಮಮ್ಮ ಕುಂಟಯ್ಯ ದಂಪತಿಗಳಿಗೆ ತಿಂಗಳಿಗೆ ಸಾವಿರ ರೂ.ಗಳ ಮಾಶಾಸನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡುತ್ತಿದ್ದು ಇವರು ತಮ್ಮ ದೈನಂದಿನ ಜೀವನಕ್ಕಾಗಿ ಭಿಕ್ಷೆಯನ್ನು ಬೇಡಿ ತಿನ್ನುತ್ತಿದ್ದರು ಇವರು ಬಾಗಿಲೇ ಇಲ್ಲದ ಮನೆಯಲ್ಲಿ ವಾಸವಾಗಿದ್ದು ಮಳೆ ಬಂದರೆ ಮನೆ ಸೋರುತಿತ್ತು ಮುರಿದ ಗೋಡೆಯ ಮನೆಯಲ್ಲಿಯೇ ಈ ದಂಪತಿಗಳು ವಾಸವಾಗಿದ್ದರು, ಹಾಗೂ ಇವರನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಇವರ ಕಷ್ಟಕರ ಜೀವನ ನಡೆಸುತ್ತಿದ್ದರು,ಆದರೆ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶೌಚಾಲಯವನ್ನು ಒಳಗೊಂಡಂತೆ ವಾತ್ಸಲ್ಯ ಮನೆಯನ್ನು ಪೂಜ್ಯ ಖಾವಂದ ದಂಪತಿಗಳ ಆಶೀರ್ವಾದದಿಂದ ಕಟ್ಟಿಸಲಾಗಿದೆ,ಪ್ರಾದೇಶಿಕ ನಿರ್ದೇಶಕರಾದಂತ ಜಯರಾಮ್ ನೆಲ್ಲಿತ್ತಾಯ ರವರಿಂದ ವಾತ್ಸಲ್ಯ ಮನೆಯನ್ನು ಉದ್ಘಾಟನೆ ಮಾಡಿ ಬಡದಂಪತಿಗಳಿಗೆ ಹಸ್ತಾಂತರಿಸಲಾಯಿತು ಈ ಸಮಯದಲ್ಲಿ ಜಿಲ್ಲಾ ನಿರ್ದೇಶಕರಾದ ಶ್ರೀಮತಿ ಲತಾ ಬಂಗೇರ ರವರು,ತಾಲೂಕು ಯೋಜನಾಧಿಕಾರಿಯದಂತಹ ಪ್ರವೀಣ್ ಕುಮಾರ್ ರವರು ಹಾಗೂ ಪಿಡಿಒ ಆದಂತಹ ವಿಶ್ವನಾಥ್, ಜಿಲ್ಲಾ ಜನಜಾಗ್ರತಿ ಸದ್ಯರು ರಾಚಾಪ್ಪ ಹಲಗಪುರ ಗ್ರಾಮದ ಮುಖಂಡರು ಗ್ರಾಮ ಪಂಚಾಯತ್ ಸದ್ಯಸರು ಮಹದೇವಪ್ಪ,ಪ್ರಭಣ್ಣ ಡೈರಿ ಮಾಜಿ ಅಧ್ಯಕ್ಷರು,ಮೇಲ್ವಿಚಾರಕರು ಸುರೇಶ ಎನ್.ಕೆ,ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶ್ರೀಮತಿ ಭಾನುಪ್ರಿಯಾ,ಸೇವಾಪ್ರತಿನಿಧಿ ಸುಜಾತಾ ಉಪಸ್ಥಿತರಿದ್ದರು.
ವರದಿ:ಉಸ್ಮಾನ್ ಖಾನ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.