ಅತ್ತು ಕರೆದಿನೋ ನಿನ್ನ
ಬಿಟ್ಟು ಇರಲಾರೆನೋ ಇನ್ನ
ಅಕ್ಕರೆಯ ಮುದ್ದು ಕೃಷ್ಣನೇ ಬಾರೋ
ಬಾರೋ ಬಾ ಬಾ ಬಾರೋ…..!!೨!!
ದೈವದ ಸ್ವರೂಪ
ನೀನು ಪ್ರೀತಿಯ ಮಗುವೇ ನೀನು
ಮುತ್ತಿನ ಮಾತೆ
ಚೆಂದನೆ ಇನ್ನೂ
ಜಗದ ಜನರಿಗೆ ಪ್ರೀತಿಯ ಉಣಿಸುತ
ಕಷ್ಟದ ಕಾಲದಲ್ಲಿ ಸಹಾಯಕ್ಕೆ ನೀ ಬರುವೆ
ಕೈಯ ಬೆರಳಲ್ಲಿ ಕೊಳಲ ನುಡಿಸುತ್ತಾ
ಹಾಡಿ ಕರೆದೆಯಾ ಗೋವುಗಳನ್ನು
ರಾಧೆಯ ಪ್ರೀತಿಯ ಒಲುಮೆಯ ಗೆಳೆಯ ನೀನು
ನನ್ನಯ ಪ್ರೀತಿಯ ದೈವವೇ ನೀನು
ಆಪ್ತರಕ್ಷಕ ನೀನು
ದುಷ್ಟ ಸಂಹಾರಕ ನೀನು
ಜಗದ ಒಡೆಯನು ಮುದ್ದುಕೃಷ್ಣನು
ಅತ್ತು ಕರೆದೆನು ನಿನ್ನ
ಬಿಟ್ಟು ಇರಲಾರೆನೋ ಇನ್ನ
ಅಕ್ಕರೆಯ ಮುದ್ದು ಕೃಷ್ಣನೇ ಬಾರೋ
ಬಾ ಬಾ ಬಾರೋ…..!!೨!!
-ಚಂದ್ರಶೇಖರಚಾರಿ ಎಂ,
ಕನ್ನಡ ಶಿಕ್ಷಕ,ವಿಶ್ವ ಮಾನವ ಶಾಲೆ ಸೀಬಾರ ಗುತ್ತಿ ನಾಡು,ಚಿತ್ರದುರ್ಗ