ಬೀದರ್:ಪೂಜ್ಯ ಡಾ||ಚನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರದಲ್ಲಿ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ವತಿಯಿಂದ ೬೮ ನೇ ಕನ್ನಡ ರಾಜ್ಯೋತ್ಸವ,ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ,ಸುವರ್ಣ ಸಂಭ್ರಮದಲ್ಲಿ ಸಂಘರ್ಷ ಬೆಳಕು ಪುಸ್ತಕ ಬಿಡುಗಡೆ ಹಾಗೂ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
೨೭/೧೧/೨೦೨೩ ರಂದು ಮುಂಜಾನೆ 11 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ನಡೆಯಿತು ಈ ಕಾರ್ಯಕ್ರಮದಲ್ಲಿ ರಾಯಚೂರಿನ ಓಂ ಸಾಯಿ ಧ್ಯಾನ ಮಂದಿರದ ಪರಮ ಪೂಜ್ಯರಾದ ಸಾಯಿಕಿರಣ ಆದೋನಿ ಬಾಬಾ,ಬೀದರ್ ಜಿಲ್ಲೆಯ ಜ್ಞಾನ ಸಾಗರ ಭಂತೆಜಿ ಗುರುಗಳು ಸಾನಿಧ್ಯ ವಹಿಸಿದ್ದರು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸುರೇಶ್ ಚನ್ನಶೆಟ್ಟಿ ಉದ್ಘಾಟಿಸಿ ಮಾತನಾಡಿದ ಸಂಘರ್ಷದ ಬೆಳಕು ಪುಸ್ತಕ ಬರೆದಿರುವ ಸುಬ್ಬಣ್ಣ ಕರಕನಳ್ಳಿಯವರು ಕನ್ನಡ ಪರ ಹೋರಾಟಗಾರರು ಹಾಗೂ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಬೆಳೆದಿರುವ ಇವರು ಮೂರ್ತಿ ಚಿಕ್ಕದಾದರೂ ಕೀರ್ತಿ ಕರ್ನಾಟಕ ತುಂಬೆಲ್ಲಾ ಬೆಳೆದಿರುವ ಇವರು ನಮ್ಮ ಬೀದರ್ ಜಿಲ್ಲೆಯ ಹೆಮ್ಮೆಯ ಸಾಹಿತಿ ಎಂದು ಹೇಳಿದರು ತಪ್ಪಾಗುವುದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ತಮ್ಮ ಪ್ರಾಸ್ತಾವಿಕವಾಗಿ ನುಡಿಯಲ್ಲಿ ಹೇಳಿದರು.ಇನ್ನೋರ್ವ ಕಾರ್ಯಕ್ರಮದ ಕೇಂದ್ರ ಬಿಂದು ಆದ ಕಲಬುರ್ಗಿಯ ವೀರ ಕನ್ನಡಿಗರ ಸೇನೆ ರಾಜ್ಯಾಧ್ಯಕ್ಷರಾದ ಅಮೃತ ಪಾಟೀಲ್,ಹಿರಿಯ ಹೋರಾಟಗಾರ ಅಮೃತ ರಾವ್ ಚಿಮಕೊಡ್,ಡಾ||ರಮೇಶ್ ಮೂಲೆಗೆ,ಕಲ್ಯಾಣ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸತೀಶ್ ಕುಮಾರ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಕು||ವೀಣಾ ದೇವಿದಾಸ ಚಿಮಕೊಡ್ ನಾಡಗೀತೆ ಹಾಡಿದರು.ಧನರಾಜ್ ಮುಸ್ತಾಪುರೆ,ಹಿರಿಯ ಪತ್ರಕರ್ತರಾದ ದಿಲೀಪ್ ಕುಮಾರ್ ಮೇತ್ರೆ,ಪ್ರವೀಣ್ ಮೇತ್ರೆ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕನ್ನಡ ರಾಜ್ಯೋತ್ಸವ ರತ್ನ ಪ್ರಶಸ್ತಿ ಪುರಸ್ಕೃತರಾದ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸೂಗೂರೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಕುಮಾರಿ ರೂಪಾ ಶಂಕರರಾವ್ ಪಾಟೀಲ್,ಹೊತಪೇಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಚನ್ನ ಬಸವ ರಾಜೇಶ್ವರಿ ಹಾಗೂ ಬೆಂಗಳೂರಿನ ಮೊನೊ ಶಾಸ್ತ್ರ ವೈದ್ಯಕೀಯ ಡಾ|| ಸರ್ವಮಂಗಳಾ ರವರಿಗೆ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಸ್ವಾಗತ ಭಾಷಣ ವೀರ ಕನ್ನಡಿಗರ ಸಂಸ್ಥೆ ಅಧ್ಯಕ್ಷರಾದ ಸುಬ್ಬಣ್ಣ ಕರಕನಳ್ಳಿ,ನಿರೂಪಣೆ ಅವಿನಾಶ್ ಪಕ್ಕಲವಾಡ,ಡಾ||ಸುನೀತಾ ಮರ್ಕಲ್ ಮಾಡಿದರು ಹಾಗೂ ವೀರ ಕನ್ನಡಿಗರ ಸೇನೆಯ ಜಿಲ್ಲಾಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಯಾದಗಿರಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.