ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಭಾರತ ಸಂವಿಧಾನ 74 ನೇ ಸಮರ್ಪಣಾ ದಿನ

ಯಾದಗಿರಿ ಜಿಲ್ಲೆಯ ಶಹಾಪುರ ನಗರದ ವೈಷ್ಣವಿ ಹೋಟೆಲ್ ಸಭಾಂಗಣದಲ್ಲಿ ನಡೆದ ಭಾರತ ಸಂವಿಧಾನ 74 ನೇ ಸಮರ್ಪಣಾ ದಿನದ ಅಂಗವಾಗಿ ವಿಚಾರ ಸಂಕಿರಣಗಳ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕೆ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟಿಸಿ ಮಾತನಾಡಿದರು ಈ ವೇಳೆ ಭೀಮರಾಯ ಉಪನ್ಯಾಸಕರು ಮಾತನಾಡಿ
ಅಧ್ಯಾತ್ಮದಲ್ಲಿ ಭಕ್ತಿಗೆ ಜಾಗವಿದೆ ಆದರೆ ರಾಜಕೀಯದಲ್ಲಿ ಭಕ್ತಿಗೆ ಜಾಗ ಇಲ್ಲ ಇವತ್ತಿನ ದಿನಗಳಲ್ಲಿ ಯಾವ ರಾಜಕೀಯ ವ್ಯಕ್ತಿ ದುರ್ಬಲತೆಯಿಂದ ನಡೆದರೂ ಕೂಡಾ ಅವರಿಗೆ ನಾವು ಗೌರವ ಕೊಡುತ್ತೇವೆ ಇದು ನಮ್ಮ ದೇಶದ ಪರಿಸ್ಥಿತಿ ಎಂದು ಹೇಳಿದರು ಮತ್ತು ಸಂವಿಧಾನ ಎಷ್ಟೇ ಬಲಿಷ್ಠವಾಗಿದ್ದರೂ ಒಬ್ಬ ವ್ಯಕ್ತಿ ಬಂದು ಆ ಸಂವಿಧಾನವನ್ನು ಹಾಳು ಮಾಡುತ್ತಾನೆ ಎಂದು ಅಂಬೇಡ್ಕರ್ ಅವರು ಹೇಳಿದ್ದರು ಮತ್ತು ಬುದ್ಧನ ಅಧ್ಯಾತ್ಮಕ ತುಂಬಿ ತುಳುಕುತ್ತಿದೆ ತಬ್ದ ಭಾವನೆಯಿಂದ ನಡೆದುಕೊಂಡು ಹೋದರೆ ಸಮಾನತೆಯನ್ನು ಕಾಣುವುದು ಎಂದರು ಶಾಂತಿ ಸಾಮರಸ್ಯ ಸಮಭಾವ ಬೆಳೆಸಲು ಅಶೋಕನು ಬೇರೆ ಬೇರೆ ದೇಶಕ್ಕೆ ಬುದ್ಧರನ್ನು ಕಳುಹಿಸುತ್ತಿದ್ದರು ಆದ್ದರಿಂದ ಅಶೋಕನ ಚಕ್ರವನ್ನು ಭಾರತದ ಲಾಂಛನವನ್ನಾಗಿ ನೋಡುತ್ತಿದ್ದೇವೆ ಮತ್ತು ಸಂವಿಧಾನಕ್ಕೆ ವಿರೋಧವಾಗಿ ನಡೆದಿರುವಂತಹ ಕೆಲವೊಂದು ಘಟನೆಗಳು ಉದಾಹರಣೆಯಾಗಿವೆ ಎಂದು ಹಲವಾರು ಉದಾಹರಣೆ ಕೊಟ್ಟು ಹೇಳಿದರು ನಾಲ್ಕು ವರ್ಷದಲ್ಲಿ 5900 ದೌರ್ಜನ್ಯ ಮಾಡಿರುವಂತ ಸಾಕಷ್ಟು ದಾಖಲೆಗಳಿವೆ ಹಾಗಾದರೆ ಇದಕ್ಕೆಲ್ಲ ಕೊನೆಯಿಲ್ಲವೇ ಈ ಸಮಾಜದ ದಲಿತರಿಗೆ ಮಹಿಳೆಯರಿಗೆ ಮತ್ತು ಹಿಂದುಳಿದ ವರ್ಗಗಳ ಗತಿಯೇನು ಎಂದು ವಿಚಾರ ಮಾಡಿನೋಡಿ ಎಂದರು ಒಬ್ಬ ವ್ಯಕ್ತಿ ದೀಪದ ಬೆಳಕಿನಲ್ಲಿ ಭಗವತ್ ಗೀತೆಯನ್ನು ಓದಬಹುದು ಆದರೆ ಇನ್ನೊಬ್ಬ ವ್ಯಕ್ತಿ ಅದೇ ದೀಪದ ಬೆಳಕಿನಲ್ಲಿ ಕಳ್ಳತನ ಕೂಡಾ ಮಾಡಬಹುದು ಇದರ ಅರ್ಥ ಸಂವಿಧಾನದ ಅಡಿಯಲ್ಲಿ ಸಮಾಜಕ್ಕೆ ಒಳ್ಳೆಯದು ಮಾಡಬಹುದು ಮತ್ತು ದೌರ್ಜನ್ಯ ಮಾಡಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ಶ್ರೀ ಮೇತಪಾಲ್ ಬಂತೆ ಸಾರಿಪುತ್ರ ಬುದ್ಧ ವಿಹಾರ ಶಹಾಪೂರ,ಹಿರಿಯರಾದ ವಾಯ್.ಪಿ.ಚಿಪ್ಪಾರ್, ಸಿದ್ದರಾಮ ಹೋನಕಲ್,ತಿಮ್ಮಯ್ಯ ಪುರ್ಲೆ, ಮಹಾದೇವಪ್ಪ ಸಾಲಿಮನಿ,ಹಣಮೇಗೌಡ ಮರಕಲ್,ಗೌಡಪ್ಪಗೌಡ ಹಾಲ್ದಾಳ,ಚಂದಪ್ಪ ಸಿತ್ನಿ, ಮಲ್ಲಪ್ಪ ಗೋಗಿ,ಶಿವುಕುಮಾರ ತಳವಾರ,ಶರಣಪ್ಪ ಮುಂಡಾಸ,ಶ್ರೀಶೈಲ ಹೋಸ್ಮನಿ,ಮಲ್ಲಿಕಾರ್ಜುನ ಪೂಜಾರಿ,ಶಿವುಪುತ್ರ ಜವಳಿ,ಕಾಲಿಕ್ ಮಾನಸಿಂಗ್ ಚವ್ಹಾಣ,ಮರೆಪ್ಪ ಪ್ಯಾಟಿ,ಹಣಮಂತ ದೊಡಮನಿ,ಭೀಮರಾಯ ತಳವಾರ,ಪರಸುರಾಮ‌ ಹೊಸಮನಿ,ಸುಬಾಸ ತಳವಾರ,ಭೀಮರಾಯ ಅಂಚೆಸುಗುರ ಡಾ||ಗಾಳೆಪ್ಪ ಪೂಜಾರಿ ಮತ್ತು ಅನೇಕ ಮುಖಂಡರು ಹಾಗೂ ಮಹಿಳೆಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ-ರಾಜಶೇಖರ ಮಾಲಿ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ