ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಹೆಗ್ಗನದೊಡ್ಡಿ ಗ್ರಾಮ ಪಂಚಾಯತಿಯಲ್ಲಿ 15 ನೇ ಹಣಕಾಸು ಯೋಜನೆ ಅಡಿಯಲ್ಲಿ ಅನುದಾನವನ್ನು ಗ್ರಾ.ಪಂ,ಅಧ್ಯಕ್ಷ ಮತ್ತು ಪಿ.ಡಿ.ಓ.ಸೇರಿಕೊಂಡು ನುಂಗಿ ನೀರು ಕುಡಿದ ಘಟನೆ ಹೆಗ್ಗನದೊಡ್ಡಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.ಸರ್ಕಾರದ ಅನುದಾನವನ್ನು ಯಾವುದೇ ಕಾಮಗಾರಿ ಮಾಡದೆ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಲ್ಲದೆ ಸ್ವಚ್ಛ ಭಾರತ ಮಿಷನ್ ಎಸ್.ಬಿ.ಎಂ. ಯೋಜನೆಯ ಅನುದಾನವನ್ನು ಗ್ರಾ.ಪಂ. ಸದಸ್ಯರಿಗೆ ಮತ್ತು ಗುಂಡಾಗಿರಿ ಮತ್ತು ದಬ್ಬಾಳಿಕೆ ಮಾಡುವಂತವರಿಗೆ ಮಾತ್ರ ಶೌಚಾಲಯ ನಿರ್ಮಿಸದೆ ಗ್ರಾ.ಪಂ. ಅಧ್ಯಕ್ಷ ಮತ್ತು ಪಿ.ಡಿ.ಓ. ಸೇರಿಕೊಂಡು ಸಾಕಷ್ಟು ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಿದ್ದಾರೆ ಎಂದು ದಲಿತ ಸೇನೆ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ಪ್ರತಿವರ್ಷ ಕ್ರಿಯಾ ಯೋಜನೆಯ ಕಾಮಗಾರಿಗಳಲ್ಲಿ ಯಾವುದೇ ಬದಲಾವಣೆ ಮಾಡಿರುವುದಿಲ್ಲ ಒಂದೇ ಕಾಮಗಾರಿ ಹೆಸರಿನಲ್ಲಿ ಹಲವಾರು ಬಾರಿ ಬಿಲ್ ಎತ್ತಿಕೊಂಡು ಸರ್ಕಾರ ಮತ್ತು ಸಾರ್ವಜನಿಕರಿಗೆ ಮೋಸ ವಂಚನೆ ಮಾಡಿರುತ್ತಾರೆ ಈ ಬಗ್ಗೆ ಹಲವಾರು ಬಾರಿ ತಮ್ಮ ಕಾರ್ಯಾಲಯಕ್ಕೆ ಮನವಿ ಮಾಡಿಕೊಂಡು ಸುಮಾರು ವರ್ಷಗಳೇ ಕಳೆದರೂ ಸಹ ಈವರೆಗೆ ಯಾವ ಒಬ್ಬ ಅಧಿಕಾರಿಯು ಕೆರೆ ಮಾಡುತ್ತಿಲ್ಲ ಇಂತಹ ಭ್ರಷ್ಟ ಅಧಿಕಾರಿಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯಿತಿ ಸಿ.ಇ.ಓ ಇತ್ತ ಕಡೆ ಗಮನ ಹರಿಸಬೇಕು ಎಂದು ಹೇಳಿದರು.
ದಿನಾಂಕ 01/01/2022,31/01/2022, 17/06/2022 ಮತ್ತು 20/02/202300 ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮಾಡಿದ ಆದೇಶವನ್ನು ಗಾಳಿಗೆ ತೂರಿದಾಗ,ಸಾರ್ವಜನಿಕರ ಪರಿಸ್ಥಿತಿ ಏನಾಗಬಹುದೆಂದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸಲು ದಿ 28/11/2023 ರಂದು ತಮ್ಮ ಕಾರ್ಯಾಲಯಕೆ ಬೀಗ ಮುದ್ರೆ ಹಾಕಿ ನ್ಯಾಯ ಸಿಗುವವರೆಗೂ ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬೇಡಿಕೆಗಳು:
1) ಈ ಬಗ್ಗೆ ಸಮಗ್ರ ತನಿಖೆ ಕೈಗೊಂಡು ತಕ್ಷಣ ಸ್ಥಳ ಪರಿಶೀಲನೆ ಮಾಡಲು ಆದೇಶಿಸಬೇಕು
2) ಸರ್ಕಾರದ ಅನುದಾನವನ್ನು ಅನುದಾನವನ್ನು ದುರ್ಬಳಕೆ ಮಾಡಿಕೊಂಡ ಗ್ರಾ.ಪಂ. ಅಧ್ಯಕ್ಷರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು.
3) ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಿಕೊಂಡ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ತಕ್ಷಣ ಸೇವೆಯಿಂದ ಅಮಾನತ್ತುಗೊಳಿಸಿ,ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.
4) ಗ್ರಾ.ಪಂ.ಅಧ್ಯಕ್ಷ ಮತ್ತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಪ.ಜಾ ಹಾಗೂ ಪ.ಪಂ. ಅನುದಾನ ಸಂಪೂರ್ಣ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಸಮಗ್ರ ತನಿಖೆ ಕೈಗೊಂಡು ಪ.ಜಾ ಹಾಗೂ ಪ.ಪಂ. ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು.
5) ಸುರಪುರ ತಾ.ಪಂ. ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾ.ಪಂ. ಕಾಮಗಾರಿಗಳ ಬಿಲ್‌ನಲ್ಲಿ ಕಾಮಗಾರಿ ಹೆಸರು ಕಡ್ಡಾಯವಾಗಿ ನಮೂದಿಸಬೇಕು.
6) ದೇವತ್ಕಲ್ ಗ್ರಾ.ಪಂ. 2022-23 ರಿಂದ 2023-24ನೇ ಸಾಲಿನ 15ನೇ ಹಣಕಾಸಿನ ಮ.ನರೇಗಾ ಯೋಜನಾ ಅಡಿಯ ಕಾಮಗಾರಿಗಳ ಕುರಿತು ಸಮಗ್ರ ತನಿಖೆ ಕೈಗೊಳ್ಳಬೇಕು.
7) ಹೆಗ್ಗನದೊಡ್ಡಿ ಹಾಗೂ ದೇವತ್ಕಲ್ ಗ್ರಾ.ಪಂ. ಎಲ್ಲಾ ಅನುದಾನಗಳ ಕುರಿತು ಸಮಗ್ರ ತನಿಖೆಯಾಗುವವರೆಗೆ ಯಾವುದೇ ಬಿಲ್ ಮಾಡಬಾರದು ಬಿಲ್ಲುಗಳನ್ನು ತಡೆ-ಹಿಡಿಯಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ
ದಲಿತ ಸೇನೆ ತಾಲೂಕಾಧ್ಯಕ್ಷ ಮರಿಲಿಂಗ ಗುಡಿಮನಿ, ದಲಿತ ಸೇನೆ ಮುಖಂಡರಾದ ಅಶೋಕ್ ಹೊಸಮನಿ,ಜಿಲ್ಲಾಧ್ಯಕ್ಷರು ಯಾದಗಿರಿ,ಹುಲಗಪ್ಪ ದೇವತ್ತಲ್,ಜಿಲ್ಲಾ ಉಪಾಧ್ಯಕ್ಷ ಭೀಮಾಶಂಕರ.ಕೆ.ಬಡಿಗೇರ,ಕಾನೂನು ಸಲಹೆಗಾರರು,ಸಂತೋಷ ಯಕ್ತಾಪುರ ಜಿಲ್ಲಾ ಉಪಾಧ್ಯಕ್ಷರು ಯಾದಗಿರಿ,ಸಂತೋಷ ಜೈನಾಪುರ ಸಂ.ಕಾರ್ಯದರ್ಶಿ,ದ.ಸೇ.ತಾ.ಶಾಖೆ ಸುರಪುರ, ಹಾಗೂ ದಲಿತ ಸೇನೆ ಸಂಘಟನೆ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ:ರಾಜಶೇಖರ ಮಾಲಿ ಪಾಟೀಲ್