ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ
ಬಿದರಕುಂದಿ ಗ್ರಾಮದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ 2023 24 ನೇ ಸಾಲಿನ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ,ಕಲೋತ್ಸವ ಏರ್ಪಡಿಸಲಾಗಿತ್ತು.ಈ ಕಾರ್ಯಕ್ರಮದ
ದಿವ್ಯಸಾನಿದ್ಯವನ್ನು ಪರಮ ಪೂಜ್ಯ ಶ್ರೀ ಡಾ:ಚನ್ನವೀರದೇವರು ವಹಿಸಿದ್ದರು.
ಅಧ್ಯಕ್ಷರು ಹಾಗೂ ಉದ್ಘಾಟಕರಾಗಿ ಶ್ರೀ ಸಿ.ಎಸ್. ನಾಡಗೌಡ ಸನ್ಮಾನ್ಯ ಶಾಸಕರು ಮುದ್ದೇಬಿಹಾಳ ಮತಕ್ಷೇತ್ರ ಇವರು ಆಗಮಿಸಿದ್ದರು.ಅತಿಥಿಗಳಾಗಿ ಶ್ರೀಮತಿ ರೂಪ ಸಂಗಣ್ಣ ಚಲವಾದಿ ಗ್ರಾಮ ಪಂಚಾಯತಿ ಅಧ್ಯಕ್ಷರು,ಶ್ರೀ ಮತಿ ಗುರುಬಾಯಿ.ನೀ.ಹಿರೇಮಠ
ಗ್ರಾಮ ಪಂಚಾಯತಿ ಉಪಾಧ್ಯಕ್ಷರು,
ಶ್ರೀ ಬಿ.ಹೆಚ್.ಮದ್ನೂರ್ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಮುದ್ದೇಬಿಹಾಳ,
ಶ್ರೀ ಬಿ.ಟಿ.ವಜ್ಜಲ್ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಅಧ್ಯಕ್ಷರು ತಾಳಿಕೋಟಿ,ಶ್ರೀ ಬಿ.ಎಸ್.ಹಿರೇಮಠ,ಶ್ರೀ ಎಸ್.ಆರ್.ಸುಲ್ಲಿ,ಶ್ರೀ ಕಾಶಿನಾಥ್ ಸಜ್ಜನ್,ಶ್ರೀ ಎಂ.ಎಸ್.ಕವಡಿಮಟ್ಟಿ
ಶ್ರೀ ಬಿ.ಎಸ್.ಹಿರೇಮಠ ಅವರುಗಳು ಭಾಗವಹಿಸಿದ್ದರು.ಶ್ರೀ ಬಿ.ವೈ.ಕವಡಿ,
ಶ್ರೀ ಸಂಗಮೇಶ್ವರ ಹೊಲ್ದೂರ,
ಶ್ರೀ ಯು.ಬಿ.ಧರಿಕಾರ,
ಶ್ರೀಮತಿ ವಿಜಯಲಕ್ಷ್ಮಿ ಚೆಲ್ಲಾಳಶೆಟ್ಟಿ,
ಶ್ರೀ ಬಿ.ಎಸ್.ಹಿರೇಕುರುಬರ,
ಶ್ರೀ ಸಿದ್ದನಗೌಡ ಲಿಂಗದಹಳ್ಳಿ,
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣ ಮಾಡಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಉತ್ತಮ ವೇದಿಕೆಯೊಂದಿಗೆ ಇದರ ಸದ್ಬಳಕೆ ಮಾಡಿಕೊಳ್ಳುವುದರಿಂದ ಶಿಕ್ಷಣದ ಜೊತೆಗೆ ಬೇರೆ ಕ್ಷೇತ್ರಗಳಲ್ಲೂ ಸಾಧನೆ ಮಾಡಬಹುದು
ಸ್ಪರ್ಧೆಗಳನ್ನು ದಿಟ್ಟತನದಿಂದ ಗೆಲ್ಲುವ ಗಟ್ಟಿತನದ
ಆತ್ಮಸ್ಥೈರ್ಯ ಗ್ರಾಮೀಣ ಮಕ್ಕಳಲ್ಲಿ ಇರುತ್ತದೆ ಆದರೆ ಮಾರ್ಗದರ್ಶನದ ಕೊರತೆಯಿಂದ ಬಹಳಷ್ಟು ಪ್ರತಿಭಾವಂತರು ಇದರಿಂದ ವಂಚಿತರಾಗಿದ್ದಾರೆ ಹೀಗಾಗಿಯೇ ಸರ್ಕಾರ ಸುಪ್ತ ಪ್ರತಿಭೆ ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಮೂಲಕ ಸಾಧಕರನ್ನಾಗಿಸಲು
ಭಾಷಣ,ಚಿತ್ರಕಲೆ,ಮಣ್ಣಿನಿಂದ ಮೂರ್ತಿಗಳ ತಯಾರಿಕೆ ಧಾರ್ಮಿಕ ಪಠಣ,ರಸಪ್ರಶ್ನೆ ಸೇರಿದಂತೆ, ನೃತ್ಯ,ಹಾಡುಗಾರಿಕೆ,ಯೋಗ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಮಕ್ಕಳು ಸ್ಪರ್ಧಿಸಿ ಉತ್ತಮ ಪ್ರತಿಭೆ ತೋರಿಸಿ ಜಿಲ್ಲಾ ಮಟ್ಟ ಮತ್ತು ರಾಜ್ಯಮಟ್ಟದ ವರೆಗೂ ಭಾಗವಹಿಸುವ ಅವಕಾಶವಿದ್ದು ತೀರ್ಪುಗಾರರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ನ್ಯಾಯ ನಿರ್ಣಯ ಮಾಡುವಂತೆ ಸನ್ಮಾನ್ಯ ಶಾಸಕರು ಮುದ್ದೇಬಿಹಾಳ ಮತಕ್ಷೇತ್ರದ ಶ್ರೀ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರು ಮಕ್ಕಳಲ್ಲಿ ತಿಳಿಸಿದರು.
ವರದಿ:ಉಸ್ಮಾನ್ ಬಾಗವಾನ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.