ಭದ್ರಾವತಿ:ಭಯಂಕರ ಬಿಸಿಲಿನಿಂದ ಬಳಲುತ್ತಿದ್ದ ಭದ್ರಾವತಿ ಜನರಿಗೆ ಮಂಗಳವಾರ ಸಂಜೆ ಸುರಿದ ಭಾರೀ ಮಳೆ ಕೊಂಚ ನೆಮ್ಮದಿ ನೀಡಿದೆ ತಾಲ್ಲೂಕಿನ ನಗರ ಹಾಗೂ ಗ್ರಾಮಾಂತರ ಭಾಗದ ಹಲವೆಡೆ ಮಳೆರಾಯ ಅಬ್ಬರಿಸಿದ್ದು ಸಿಡಿಲ ಹೊಡೆತಕ್ಕೆ ಇಬ್ಬರು ಸಹೋದರರು ಬಲಿಯಾಗಿದ್ದಾರೆ.
ತಾಲ್ಲೂಕಿನ ಭದ್ರಾವತಿ ನಗರ ಪ್ರೇಶಗಳಲ್ಲಿ ಹಾಗೂ ಗ್ರಾಮಾಂತರ ಭಾಗದ ಅರೆಬಿಳಚಿ,ದಾಸರಕಲ್ಲಹಳ್ಳಿ, ಮಂಗೋಟೆ,ಹುಣಸೇಕಟ್ಟೆಯಲ್ಲಿ ಜೋರು ಮಳೆಯಾಗಿದೆ.
ಹುಣಸೇಕಟ್ಟೆ ಜಂಕ್ಷನ್ ಗ್ರಾಮದಲ್ಲಿ ಸಿಡಿಲು ಬಡಿದು ಬೀರು (32),ಸುರೇಶ್(30)ಎಂಬ ಸಹೋದರರು ಮೃತ ಪಟ್ಟಿದ್ದಾರೆ ಗದ್ದೆಯಲ್ಲಿ ಕಟಾವು ಮಾಡಿದ್ದ ಭತ್ತವನ್ನು ರಾಶಿ ಹಾಕಿದ್ದು,ಅದನ್ನು ಕಾಯಲು ಹೋಗಿದ್ದರು.ಈ ವೇಳೆ ಸಿದಿಲು ಬಡಿದು ಮೃತಪಟ್ಟಿದ್ದಾರೆ.
ಭದ್ರಾವತಿಯ ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಮೃತದೇಹ ರವಾನೆ ಮಾಡಲಾಗಿದೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
