ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ರಾಜ್ಯ ಉಪಲೋಕಾಯುಕ್ತರು

ಯಾದಗಿರಿ ನಗರದ ಮೆಟ್ರಿಕ್ ನಂತರದ (ಪ.ಜಾತಿ) ಬಾಲಕರ ವಸತಿ ನಿಲಯಗಳ ಅವ್ಯವಸ್ಥೆ
ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಅಡಿಯಲ್ಲಿ:
ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ರಾಜ್ಯ ಉಪಲೋಕಾಯುಕ್ತರು

ಯಾದಗಿರಿ:ರಾಜ್ಯದ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಇತ್ತೀಚಿಗೆ ಯಾದಗಿರಿ ನೂತನ ಸರ್ಕ್ಯೂಟ್ ಹೌಸ್ ಹತ್ತಿರದ,ಸರ್ಕಾರಿ ಮೆಟ್ರಿಕ್ ನಂತರದ (ಪರಿಶಿಷ್ಟ ಜಾತಿ)ಬಾಲಕರ ಹೊಸ ಹಾಗೂ ಹಳೆಯ ವಸತಿ ನಿಲಯಗಳಲ್ಲಿ ಕಂಡುಬಂದ ನ್ಯೂನತೆ ಹಾಗೂ ಸಮಸ್ಯೆಗಳಿಗೆ ಯಾವುದೇ ಪರಿಹಾರತ್ಮಕ ಕ್ರಮ ಕೈಗೊಳ್ಳದೇ ಇರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ನಿರ್ಲಕ್ಷ್ಯತೆಗೆ ಕಾರಣೀಕರ್ತರಾದ ವಿವಿಧ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ, ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ 7(2) ಸಹವಾಚಕ ಕಲಂ 9 (3)(ಎ) ರಡಿಯಲ್ಲಿ ದತ್ತವಾದ ಅಧಿಕಾರದಿಂದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ತಿಳಿಸಿದ್ದಾರೆ.ಯಾದಗಿರಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶ್ರೀಮತಿ ಸರೋಜ, ಯಾದಗಿರಿ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಶ್ರೀ ಡಿ.ರಾಜ್‌ಕುಮಾರ್, ಯಾದಗಿರಿ ಸರ್ಕಾರಿ ಮೆಟ್ರಿಕ್ ನಂತರದ (ಪರಿಶಿಷ್ಟ ಜಾತಿ) ಬಾಲಕರ ಹೊಸ ಹಾಗೂ ಹಳೆಯ ವಸತಿ ನಿಲಯಗಳ ವಾರ್ಡನ್ ಶ್ರೀ ವೀರೇಶ್,ಯಾದಗಿರಿ ಕೆ.ಕೆ.ಆರ್.ಟಿ.ಸಿ ವಿಭಾಗೀಯ ನಿಯಂತ್ರಕರ ವರ್ತನೆಯು ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಕಲಂ 2 (10)ರ ಪರಿಭಾಷೆ, “ದುರಾಡಳಿತ”ದ ವ್ಯಾಪ್ತಿಗೆ ಒಳಪಡುವುದರಿಂದ ಲೋಕಾಯುಕ್ತ ಕಾಯ್ದೆ 1984ರ ಕಲಂ 7 (2)ರ ಅಡಿಯಲ್ಲಿ ಈ ಅಧಿಕಾರಿ ಹಾಗೂ ನೌಕರರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದು,ಈ ಕುರಿತು ಆದೇಶ ಹೊರಡಿಸಿ 20 ದಿನಗಳ ಒಳಗಾಗಿ ಪೂರಕದಾಖಲಾತಿಗಳೊಂದಿಗೆ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ.ಅದರಂತೆ ಈ ಆದೇಶ ಪ್ರತಿಯನ್ನು ಯಾದಗಿರಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು,ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾದ ಶ್ರೀ ರಾಕೇಶ ಕುಮಾರ ಇವರಿಗೆ ಆದೇಶದ ಪ್ರತಿಯನ್ನು ಮಾಹಿತಿಗಾಗಿ ಕಳುಹಿಸಿ,ಗಮನಿಸಿರುವ ಲೋಪದೋಷಗಳು, ಸಮಸ್ಯೆಗಳಿಗೆ ನಿಯಮಾನುಸಾರ ಕ್ರಮಕೈಗೊಂಡು ಆದೇಶ ಪ್ರತಿ ತಲುಪಿದ ಒಂದು ತಿಂಗಳ ಒಳಗಾಗಿ ಕೈಗೊಂಡ ಕ್ರಮದ ವರದಿಯನ್ನು ಸಲ್ಲಿಸುವಂತೆ ಅವರು ನಿರ್ದೇಶನ ನೀಡಿದ್ದಾರೆ.
ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಕೆ.ಎನ್.ಫಣೀಂದ್ರ ಅವರು ಇತ್ತೀಚಿಗೆ ನವೆಂಬರ್ 18 ರಿಂದ 20 ರ ವರೆಗೆ ಯಾದಗಿರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ದಿನಾಂಕ 20-11-2023 ರಂದು ಸಂಜೆ 6.30 ಗಂಟೆಗೆ ಯಾದಗಿರಿ ನಗರದ ನೂತನ ಸರ್ಕ್ಯೂಟ್ ಹೌಸ್ ಹತ್ತಿರದ ಪರಿಶಿಷ್ಟ ಜಾತಿ ಮೆಟ್ರಿಕ್ ನಂತರದ ಬಾಲಕರ ಹೊಸ ಹಾಗೂ ಹಳೆ ವಸತಿ ನಿಲಯಗಳಿಗೆ ಭೇಟಿ ನೀಡಿ ಅಲ್ಲಿ ಕಂಡುಬಂದ ನ್ಯೂನತೆಗಳನ್ನು ಕಂಡು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಿದ್ದರು.
ಉಪಲೋಕಾಯುಕ್ತರು ಈ ವಸತಿ ನಿಲಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಡುಗೆ ಸಿಬ್ಬಂದಿಗಳಿಗೆ ಪ್ರತಿ ತಿಂಗಳು ವೇತನ ನೀಡಲಾಗುತ್ತಿಲ್ಲವೆಂದು ದೂರು ನೀಡಿದರು ಅಡುಗೆ ಕೋಣೆಗೆ ಭೇಟಿ ನೀಡಿದ್ದಾಗ ಕಿಟಕಿಗಳಲ್ಲಿ ಜಿರಲೆಗಳು ತುಂಬಿಕೊಂಡಿದ್ದವು ಕಿಟಕಿಯ ಮೆಸ್ ಸರಿಯಾಗಿ ಇರಲಿಲ್ಲ,ಸರಿಯಾಗಿ ಗಾಳಿ ಹೊರಗೆ ಹೋಗುವ ಎಕ್ಸಾಸ್ಟ್ ಫ್ಯಾನ್ ಕೆಟ್ಟು ಹೋಗಿದ್ದು, ತಯಾರಿಸಿಟ್ಟಿದ್ದ ರೊಟ್ಟಿಗಳನ್ನು ಸರಿಯಾಗಿ ಸಂರಕ್ಷಿಸಿಡದೆ ಒಂದು ಮೂಲೆಯಲ್ಲಿ ಇಟ್ಟಿರುವುದು ಕಂಡುಬಂದಿದೆ.ಅಡುಗೆ ಮನೆಯಲ್ಲಿ ಸ್ವಚ್ಛತೆ ಇರುವುದಿಲ್ಲ.ಸ್ಟೋರ್ ರೂಮ್‌ನಲ್ಲಿದ್ದ ದವಸ, ಧಾನ್ಯ ನೋಡಲಾಗಿ ಸ್ವಚ್ಛತೆ ಇದ್ದಿದ್ದಿಲ್ಲ. ವಿದ್ಯಾರ್ಥಿಗಳ ಕೋಣೆಗಳಿಗೆ ಭೇಟಿ ನೀಡಿದ್ದಾಗ ಹರಿದ ಹಾಸಿಗೆ ಕಂಡು ಬಂದಲ್ಲದೇ ತಲೆದಿಂಬು, ಮಂಚಗಳು ಇರಲಿಲ್ಲ ಮುರಿದ ಶೌಚಾಲಯ ಬಾಗಿಲು,ನೀರಿನ ಸಮಸ್ಯೆ,ಸೇರಿದಂತೆ ಕಳೆದ 2 ವರ್ಷಗಳಿಂದ ಹಾಸಿಗೆ,ಮಂಚ ಹಾಗೂ ಸರಿಯಾದ ಹೊದಿಕೆ ನೀಡಿಲ್ಲವೆಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದರು.
ಅದರಂತೆ ಇನ್ವರ್ಟರ್ ಕೆಟ್ಟಿರುವ ಬಗ್ಗೆಸರಿಯಾಗಿ ಕುಡಿಯಲು ನೀರು ಇಲ್ಲದ ಬಗ್ಗೆ,ಬಿಸಿ ನೀರು ಇಲ್ಲದ ಬಗ್ಗೆ,ನೀರನ ಟ್ಯಾಂಕ್ ಶುಚಿಗೊಳಿಸದೆ ಇರುವ ಬಗ್ಗೆ, ಸೋಲಾರ್ ವ್ಯವಸ್ಥೆ ಕೆಟ್ಟಿರುವ,ಮೆನು ಚಾರ್ಟ್ ಅನ್ವಯ ಆಹಾರ ನೀಡುತ್ತಿಲ್ಲದ ಬಗ್ಗೆ ಗಮನಿಸಿದ್ದ ಉಪಲೋಕಾಯುಕ್ತರು ಅನ್ನದಲ್ಲಿ ಹುಳುಗಳು ಕಂಡಿವೆ,ತರಕಾರಿ ಹಾಕಿಲ್ಲ,ಊಟ ರುಚಿಯಾಗಿಲ್ಲ, ಬೆಳಗಿನ ತಿಂಡಿ ರಾತ್ರಿ ಊಟ ನೀಡುತ್ತಿಲ್ಲ,ಬಸ್ ವ್ಯವಸ್ಥೆ ಇಲ್ಲ,ಮಳೆ ಬಂದಾಗ ವಸತಿ ನಿಲಯ ಸೋರುತ್ತಿರುವುದು.ಕ್ರೀಡಾ ಸಾಮಗ್ರಿ ಸರಬರಾಜು ಆಗಿರಲಿಲ್ಲ.ಗಣರಾಜ್ಯೋತ್ಸವ, ಸ್ವಾತಂತ್ರ ದಿನಾಚರಣೆ,ಡಾ.ಬಿ.ಆರ್ ಅಂಬೇಡ್ಕರ್ ಅವರ ಜಯಂತಿಗಳನ್ನು ಸರಿಯಾಗಿ ಆಚರಣೆ ಮಾಡುತ್ತಿಲ್ಲದ ಬಗ್ಗೆ,ಗ್ರಂಥಾಲಯ ಇಲ್ಲ,ಮತ್ತು ವಸತಿ ನಿಲಯದ ವಾರ್ಡನ್ ಬರದೆ ಸಮಸ್ಯೆಗಳನ್ನು ಸರಿಯಾಗಿ ಆಲಿಸದೇ ಇರುವುದನ್ನು ಗಮನಿಸಿ ಲೋಕಾಯುಕ್ತ ಕಾಯ್ದೆ 1984ರ ಕಲಂ 2ರ ಅನ್ವಯ ಈ ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಂಡಿದ್ದಾರೆ.ಅದರಂತೆ ಬೆಂಗಳೂರು, ಸಮಾಜ ಕಲ್ಯಾಣ ಇಲಾಖೆಯ,ಆಯುಕ್ತರಾದ ಶ್ರೀ ರಾಕೇಶ ಕುಮಾರ್ ಅವರು ಗೌರವಾನ್ವಿತ ಉಪಲೋಕಾಯುಕ್ತರ ಕಛೇರಿಗೆ ಭೇಟಿ ನೀಡಿ ಮೇಲ್ಕಂಡ ಎಲ್ಲಾ ಲೋಪದೋಷಗಳನ್ನು ಮತ್ತು ಸಮಸ್ಯೆಗಳನ್ನು ಪರಿಹರಿಸುವುದಾಗಿ ತಿಳಿಸಿದ್ದು. ಶೀಘ್ರವಾಗಿ ವರದಿ ಸಲ್ಲಿಸಲು ಸಹ ಉಪಲೋಕಾಯುಕ್ತರು ನಿರ್ದೇಶನ ನೀಡಿದ್ದಾರೆ. ಅದರಂತೆ ಈ ವಸತಿ ನಿಲಯಗಳಿಗೆ ಮೂಲ ಸೌಕರ್ಯದ ಕೊರತೆ ಉಂಟಾಗದಂತೆ ಕ್ರಮ ವಹಿಸಲು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಯಾದಗಿರಿಯಲ್ಲಿ ಈ ವಸತಿ ನಿಲಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಂಗಳೂರು ಕರ್ನಾಟಕ ಲೋಕಾಯುಕ್ತ ಅಪರ ನಿಬಂಧಕರು ಶ್ರೀ ಶಶಿಕಾಂತ ಬಿ.ಭಾವಿಕಟ್ಟಿ, ಉಪ ನಿಬಂಧಕರು ಶ್ರೀ ಎಂ.ವಿ ಚನ್ನಕೇಶವ ರೆಡ್ಡಿ,ಉಪಲೋಕಾಯುಕ್ತರವರ ಆಪ್ತ ಕಾರ್ಯದರ್ಶಿ ಶ್ರೀ ಕಿರಣ್ ಪ್ರಹ್ಲಾದ್‌ರಾವ್ ಮುತಾಲಿಕ್ ಪಾಟೀಲ್,ಯಾದಗಿರಿ ಜಿಲ್ಲಾಧಿಕಾರಿ ಡಾ:ಸುಶೀಲಾ.ಬಿ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಗರಿಮಾ ಪನ್ವಾರ್,ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ,ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಶ್ರೀ ರವೀಂದ್ರ ಎಲ್.ಹೊನೋಲೆ,ಯಾದಗಿರಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಶ್ರೀ ಹನುಮಂತರಾಯಪ್ಪ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಶ್ರೀಮತಿ ಸರೋಜ,ಸರ್ಕಾರಿ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಬಾಲಕರ ವಸತಿ ನಿಲಯ ವಾರ್ಡನ್ ಶ್ರೀವೀರೇಶ್ ಅವರು ಹಾಜರಾಗಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ