ತೀವ್ರ ತರಹ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಉಚಿತ ಕಾನೂನು ನೆರವು ದೊರೆಯುತ್ತದೆ
-ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ ರವೀಂದ್ರ ಎಲ್.ಹೊನೋಲೆ
ಯಾದಗಿರಿ:ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ,ಸಮುದಾಯ ಆರೋಗ್ಯ ಕೇಂದ್ರ,ವಡಗೇರಾ ಇವರ ಸಂಯುಕ್ತಾಶ್ರಯದಲ್ಲಿ ಇಂದು ಡಿಸೆಂಬರ್ 1ರ ಶುಕ್ರವಾರ ರಂದು ಸಮೂದಾಯ ಆರೋಗ್ಯ ಕೇಂದ್ರ ವಡಗೇರಾದಲ್ಲಿ ವಿಶ್ವ ಏಡ್ಸ್ ದಿನ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ ರವೀಂದ್ರ ಎಲ್.ಹೊನೋಲೆ ಅವರು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಏಡ್ಸ್ ನಿಯಂತ್ರಣ ಮತ್ತು ತಡೆ ಕಾಯ್ದೆ 2017ರ ಪ್ರಕಾರ ಹೆಚ್‌ಐವಿ ದೊಂದಿಗೆ ಬದುಕುತ್ತಿರುವ ವ್ಯಕ್ತಿಯ ಗುರುತನ್ನು ಹಾಗೂ ಹೆಚ್‌ಐವಿ ಸೊಂಕಿತರ ಮಾಹಿತಿಯನ್ನು ಗೌಪ್ಯ ವಿಡಲಾಗುತ್ತದೆ ತೀವ್ರತರಹ ಅನಾರೋಗ್ಯದಿಂದ ಬಳಲುತಿರುವ ವ್ಯಕ್ತಿಗಳಿಗೆ ಉಚಿತ ಕಾನೂನು ನೆರವು ದೊರೆಯುತ್ತದೆ ಎಂದು ತಿಳಿಸಿದರು.ಏಡ್ಸ್ ರೋಗಿಗಳಿಗೆ ಐಸಿಟಿಸಿ ಸಲಹೆಗಾರರು ಶ್ರೀ ವೆಂಕಟೇಶ ಅವರು ಮಾತನಾಡಿ ಏಡ್ಸ್ ರೋಗಿಗಳಿಗೆ ಇರುವ ವೈದ್ಯಕೀಯ ಸೌಲಭ್ಯಗಳ ಬಗ್ಗೆ ತಿಳಿಸಿದರು.
ವಡಗೇರಾ ಸಮುದಾಯ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿಗಳು ಡಾ.ಜಗನ್ನಾಥರೆಡ್ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೀವನದಿಂದ ಏಡ್ಸ್ ನಿಯಂತ್ರಿಸಬಹುದಾಗಿದೆ, ರೋಗಕ್ಕಿಂತ ಅರಿವು ಮದ್ದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯಾದಗಿರಿ ಸಹಾಯಕ ಕಾನೂನು ನೆರವು ಅಭಿರಕ್ಷಕರು ಶ್ರೀ ಮಲ್ಲಿಕಾರ್ಜುನ ಮನಗನಾಳ,ವಕೀಲರು ಶ್ರೀಮತಿ ಕೃಷ್ಣವೇಣಿ ಜಿ.ನಿರ್ಮಲಕರ್,ಮಕ್ಕಳ ತಜ್ಞರು ಡಾ.ಸುರೇಶ, ದಂತ ವೈದ್ಯರು ಡಾ.ಭವಾನಿ ಉಪಸ್ಥಿತರಿದ್ದರು.
ವರದಿ:ಶಿವರಾಜ ಸಾಹುಕಾರ ವಡಗೇರಾ