ಯಾದಗಿರಿ:ಎಲ್ಲಾ ಭಾಷೆಗಳಂತೆ ಇಂಗ್ಲಿಷ್ ಕೂಡಾ ಒಂದು ಭಾಷೆ ಸ್ವಲ್ಪ ಆಸಕ್ತಿ ಹಾಗೂ ಕೆಲವು ಉಪಾಯಗಳು ತಿಳಿದುಕೊಂಡರೆ ಇಂಗ್ಲಿಷ್ ಭಾಷೆ ಕೂಡ ಕನ್ನಡದಂತೆ ಸುಲಭವಾಗಿ ಮಾತನಾಡಬಹುದು ಹಾಗೇಯೇ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಕೂಡಾ ಪಡೆಯಬಹುದು. ನಮ್ಮ ಮಾತೃಭಾಷೆ ಕನ್ನಡವನ್ನು ಹೇಗೆ ಹೃದಯದಿಂದ ಪ್ರೀತಿಸುತ್ತೇವೆ ಅದೇ ತರಹ ಇಂಗ್ಲಿಷ್ ಭಾಷೆಯನ್ನು ಕೂಡ ವ್ಯವಹಾರಕ್ಕೆ ಮತ್ತು ಉದ್ಯೋಗಕ್ಕಾಗಿ ಇಂಗ್ಲಿಷ್ ಭಾಷೆಯನ್ನು ಒಪ್ಪಿಕೊಳ್ಳಬಹುದು ಎಂದು ಇಂಗ್ಲಿಷ್ ಉಪನ್ಯಾಸಕರಾದ ಹೊನ್ನಾರಡ್ಡಿ ಬೈರಡ್ಡಿ ಗೋಗಿ ಅವರು ಸಂಪೂರ್ಣವಾಗಿ ಮಾಹಿತಿ ನೀಡಿದರು.
ತಾಲೂಕಿನ ಗಂವ್ಹಾರ್ ಶ್ರೀ ಮಠದ ಹಿರಿಯ ಪ್ರೌಢ ಶಾಲೆಯಲ್ಲಿ ಒಂದು ದಿನದ ಇಂಗ್ಲಿಷ್ ಕಾರ್ಯಗಾರ ನಿಮಿತ್ತ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಯ ಹೇಗೆ ಹೋಗಲಾಡಿಸಬೇಕು ಇಂಗ್ಲಿಷಿನಲ್ಲಿ ಹೇಗೆ ಮಾತನಾಡಬೇಕು ಹಾಗೂ ಇಂಗ್ಲೀಷ್ ವಿಷಯದಲ್ಲಿ ಹೇಗೆ ಹೆಚ್ಚಿನ ಅಂಕಗಳನ್ನು ಹೇಗೆ ಪಡೆಯಬೇಕು ಎಂಬುವುದರ ಬಗ್ಗೆ ಉಪನ್ಯಾಸ ನೀಡಿದ್ದಕ್ಕಾಗಿ ಶ್ರೀ ಮಠದ ಶ್ರೋತ್ರಿಯ ಬ್ರಹ್ಮ ನಿಷ್ಠೆ ಶ್ರೀ ಸೋಪನನಾಥ ಮಹಾ ಸ್ವಾಮಿಗಳು ಹೊನ್ನಾರಡ್ಡಿ ಬೈರಡ್ಡಿ ಅವರಿಗೆ ಗೌರವಿಸಿ ಸನ್ಮಾನಿಸಿದರು.ಈ ಕಾರ್ಯಕ್ರಮದಲ್ಲಿ ಪರಮ ಪೂಜ್ಯರಾದ ಶ್ರೀ ಸೋಪನನಾಥ ಮಹಾ ಸ್ವಾಮಿಗಳು ಹಾಗೂ ಶಾಲಾ ಆಡಳಿತ ಮಂಡಳಿ ಮತ್ತು ಅಧ್ಯಕ್ಷರು,ಕಾರ್ಯದರ್ಶಿಗಳು,ಮುಖ್ಯ ಗುರುಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ:ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.