ವಿಜಯಪುರ:ನನ್ನ ನಿರಂತರ ಅಧಿಕಾರ ಅವಧಿಯಲ್ಲಿ ಸಾಕಷ್ಟು ಜನಪರ ಕಾರ್ಯಗಳನ್ನು ಕೈಗೊಂಡಿದ್ದೇನೆ ಆದರೆ ನಾನು ಕೈಗೊಂಡ ಕಾರ್ಯಗಳನ್ನು ಇವತ್ತಿಗೂ ಪ್ರಚಾರ ಮಾಡಿಕೊಂಡಿಲ್ಲ ನಾನು ಶಾಸಕ,ಸಂಸದನಾಗಿ ಚುನಾವಣೆಯ ಕಾರ್ಯದಲ್ಲಿ ಎಷ್ಟು ಭಾರಿ ಚುನಾವಣೆಯ ಕಣದಲ್ಲಿ ಸ್ಪರ್ಧಿಸಿದ್ದೇನೆ ಅಷ್ಟು ಭಾರಿ ಜಯಶಾಲಿ ಆಗಿದ್ದೇನೆ ವಿಜಯಪುರ ಜಿಲ್ಲೆಯ ಮಗನಾಗಿ ಪ್ರತಿಯೊಂದು ಕೋಮುಗಳ ಜನರ ಆಶೀರ್ವಾದ ಪಡೆದುಕೊಂಡಿದ್ದೇನೆ ಒಟ್ಟಾರೆ ನನ್ನ ಅಧಿಕಾರ ಅವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ವಿಜಯಪುರ ಲೋಕಸಭಾ ಸದಸ್ಯ ರಮೇಶ ಜಿಗಜಿಣಗಿ ಹೇಳಿದರು.
ಪಟ್ಟಣದ ಸಿಂದಗಿ ರಸ್ತೆಯ ಬಲ ಬದಿಯ ಶಾಂತೇಶ್ವರ ಮಂಗಲ ಕಾರ್ಯಲಯದಲ್ಲಿ ಶನಿವಾರ ಮದ್ಯಾಹ್ನ ಆಯೋಜಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿಶ್ವಕರ್ಮ ಯೋಜನೆಯ ಅರಿವು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಹಿಂದುಳಿದ ವರ್ಗಗಳ ಮೋರ್ಚಾ ಸಭೆ ನೇತೃತ್ವವಹಿಸಿ ಮಾತನಾಡಿದ ಅವರು ವಿಜಯಪುರ ಜಿಲ್ಲೆಯ ನೀರಾವರಿ,ರಸ್ತೆ ಸೇರಿದಂತೆ ಇನ್ನಿತರ ಅಭಿವದ್ಧಿ ಕಾರ್ಯಗಳನ್ನು ಜಾರಿಗೊಳಿಸಿ ಯಶಸ್ವಿಯಾಗಿದ್ದೇನೆ ಎಂದರು.
ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನಪರ ಯೋಜನೆ ಒಂದರ ಜೊತೆಗೆ ಹಿಂದುಳಿದ ವರ್ಗಗಳ ಜನತೆಯ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆಸಕ್ತಿ ನೀಡುವಗೋಸ್ಕರವಾಗಿ ಅದರಲ್ಲಿಯೂ ವಿಶ್ವಕರ್ಮ ಯೋಜನೆಯ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಅದರಲ್ಲಿ ಮುಖ್ಯವಾಗಿ ೧೮ ಉದ್ಯೋಗಗಳಿಗೆ ಚಾಲನೆ ನೀಡಿ ಆಯಾ ಭಾಗದ ಉದ್ಯೋಗಳಿಗೆ ಕೌಶಲ್ಯ ತರಬೇತಿ ನೀಡಲು ಪ್ರಧಾನ ಮಂತ್ರಿ ಯೋಜನೆಯಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ವಿಶ್ವಕರ್ಮ ಯೋಜನೆಯ ಕಾರ್ಯಕ್ರಮದ ಪೂರ್ವದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿವೇಕ ಡಬ್ಬಿ ಮಾತನಾಡಿ ಸಂಸದ ರಮೇಶ ಜಿಗಜಿಣಗಿ ಅವರು ಹೇಳಿದಂತೆ ವಿಶ್ವಕರ್ಮ ಯೋಜನೆಯ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ,ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ,ಜಿಲ್ಲಾ ರೈತ ಮೋರ್ಚಾ ಮಾಜಿ ಅಧ್ಯಕ್ಷ ಅನೀಲ ಜಮಾದಾರ, ಜಿಲ್ಲಾ ಬೆಜೆಪಿ ಮುಖಂಡ ಪ್ರೋ ನಿವೃತ್ತ ಉಪನ್ಯಾಸಕ ಸಿದ್ದಲಿಂಗ ಹಂಜಗಿ, ರಾಜ್ಯ ಕಾರ್ಯಕಾರಣ ಸದಸ್ಯ ಶಿಲವಂತ ಉಮರಾಣಿ ಜಿಲ್ಲಾ ಬಿಜೆಪಿ ಮುಖಂಡ ಹಣಮಂತರಾಯಗೌಡ ಪಾಟೀಲ ನಾಗಠಾಣ ಮತಕ್ಷೇತ್ರದ ಪರಾಜೀತ ಅಭ್ಯರ್ಥಿ ಸಂಜೀವು ಐಹೊಳೆ,ರಾಜಕುಮಾರ ಸಗಾಯಿ,ಯಲ್ಲಪ್ಪ ಹದರಿ, ಶ್ರೀಶೈಲ ಮದರಿ,ವಿಜಯಲಕ್ಷ್ಮಿ ರೂಗಿಮಠ ವೇದಿಯಲ್ಲಿ ಉಪಸ್ಥಿತರಿದ್ದರು.ಅನಿಲ ಜಮಾದಾರ ಸ್ವಾಗತಿಸಿದರು.ಪ್ರೋ ಸಿದ್ದಲಿಂಗ ಹಂಜಗಿ ನಿರೂಪಿಸಿ ವಂದಿಸಿದರು.
ವರದಿ:ಅರವಿಂದ ಕಾಂಬಳೆ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.